ಕಾಕತಿಯಲ್ಲಿ ಒಂದೇ ರಾತ್ರಿ 7 ಮನೆಗಳ ದರೋಡೆ; ಲಕ್ಷಾಂತರ ರೂ ಚಿನ್ನಾಭರಣ ಲೂಟಿ..!
ಗ್ರಾಮೀಣದಲ್ಲಿ ಹಳ್ಳ ಹಿಡಿದ “ನೈಟ್ ಬೀಟ್”, ಹೆಚ್ಚುತ್ತಿರುವ ಕಳ್ಳತನ..?
ಹೊನಗಾ, ಕಡೋಲಿ ಕಳ್ಳರನ್ನು ಬಿಟ್ಟು ಎಡವಟ್ಟು ಮಾಡಿದ್ರಾ ಕಾಕತಿ ಕ್ರೈಂ ಟೀಂ..?
ಬೆಳಗಾವಿ : ಕಾಕತಿ ಪೊಲೀಸರು ಕಾಸಿನ ಆಸೆಗಾಗಿ ಡೀಲ್ ಮಾಡಿಕೊಂಡು ಕಳ್ಳತನ ಪ್ರಕರಣಗಳಲ್ಲಿ ಸಿಕ್ಕ ಕಳ್ಳರನ್ನು ಬಿಟ್ಟಿದ್ದಕ್ಕೆ ಕಾಕತಿ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ರಾತ್ರಿಯೊಂದರಲ್ಲಿ “ಹಾಪ್ ಡಜನ್” ಕ್ಕಿಂತ ಹೆಚ್ಚು ಮನೆಗಳ ಮೇಲೆ ಕಣ್ಣ ಹಾಕಿದ ಕಳ್ಳರು ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣಗಳನ್ನು ದೊಚಿ ಕಾಕತಿ ಪೊಲೀಸರಿಗೆ ಖಾಲಿ ಚೊಂಬು ತೋರಿಸಿ ಹೋಗಿದ್ದಾರೆ.
7 ಮನೆಗಳ ದರೋಡೆ ..?
ಎರಡು ದಿನಗಳ ಹಿಂದೆ ಅಂದರೆ 3 ಅಕ್ಟೋಬರ್ ನಸುಕಿನ ಸಮಯದಲ್ಲಿ ಆರೇಳು ಕಳ್ಳರ ಗುಂಪೊಂದು ಕಾಕತಿ ಪೊಲೀಸ್ ಠಾಣೆಯ ಕೂಗಳತೆ ದೂರಿನಲ್ಲಿ ಇರುವ ಹೋಳಿ ಗಲ್ಲಿ ಹಾಗೂ ಕೊಠಾರಿ ಗಲ್ಲಿಯಲ್ಲಿನ ಏಳು ಮನೆಗಳ ಮೇಲೆ ದರೋಡೆ ನಡೆಸಿದ್ದಾರೆ. ದರೋಡೆ ಮಾಡಿದ 5 ಮನೆಗಳಲ್ಲಿ ಏನು ಸಿಕ್ಕಿಲ್ಲ. ಇನ್ನೂಳಿದ ಎರಡು ಮನೆಗಳಲ್ಲಿ ಸಮಾರು 120 ಗ್ರಾಮ (12 ತೊಲೆ) ಬಂಗಾರದ ಒಡವೆಗಳನ್ನು ಕದ್ದಿದ್ದಾರೆ. ಅದರಲ್ಲಿ ಕದ್ದೊಯ್ಯುವ ಸಮಯದಲ್ಲಿ ಒಬ್ಬರ ಬಿದ್ದ 4 ತೊಲೆಯ ಒಡವೆಗಳು ಸಿಕ್ಕಿವೆ. ಉಳಿದ ಅಭಿಷೇಕ ಮಾರುತಿ ನಾರ್ವೇಕರ ಎಂಬುವರ 8 ತೊಲೆ ಚೀನ್ನಾಭರಣಗಳನ್ನು ಖದಿಮರು ಲಪಟಾಯಿಸಿಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಹೊಳಿ ಗಲ್ಲಿಯ ಅಭಿಷೇಕ ಮಾರುತಿ ನಾರ್ವೇಕರ(35) ಎಂಬುವರ ಮನೆಯಲ್ಲಿ 8 ತೊಲೆ ಚೀನ್ನಾಭರಣಗಳು ಕಳ್ಳತನವಾಗಿವೆ ಎಂದು ಪ್ರಕರಣ ದಾಖಲಾಗಿದೆ.
ಪೊಲೀಸಿಂಗ್, ನೈಟ್ ಬೀಟ್ ಮರೆತ ಕಾಕತಿ ಪೊಲೀಸರು ..!
ಈ ಕಳ್ಳತನಕ್ಕೆ ಕಾಕತಿ ಪೊಲೀಸರ ಬೇಜವಾಬ್ದಾರಿಯೇ ಕಾರಣ ಎಂದು ತಿಳಿದು ಬಂದಿದೆ. ರಾತ್ರಿ ವೇಳೆ ಕಮೀಷನರೇಟ್ ವ್ಯಾಪ್ತಿಯಲ್ಲಿ ಡಿಸಿಪಿ ಗಳೇ ಅಚ್ಚುಕಟ್ಟಾಗಿ ನೈಟ್ ಶಿಪ್ಟ್ ಡ್ಯೂಟಿ ಮಾಡುತ್ತಿದ್ದಾರೆ. ಆದರೆ ಕಾಕತಿ ಪೊಲೀಸರು ಮಾತ್ರ ಗ್ರಾಮೀಣ ಪ್ರದೇಶದಲ್ಲಿ “ನೈಟ್ ಬಿಟ್”ನ್ನು ಸರಿಯಾಗಿ ಮಾಡುತ್ತಿಲ್ಲ ಎನ್ನುವುದಕ್ಕೆ ವಾರದಲ್ಲಿ ನಡೆದ ಎರಡನೇ ಕಳ್ಳತನ ಸಾಕ್ಷಿಯಾಗಿದೆ.
ಡೀಲ್ , ಹಪ್ತಾ ವಸೂಲಿಯಲ್ಲಿ ಮಗ್ನರಾಗಿರುವ ಕಾಕತಿ ಕ್ರೈಂ ಟೀಂ..?
ವಾರದಲ್ಲಿ ಎರಡೇರಡು ದೊಡ್ಡ ಕಳ್ಳತನಗಳು ನಡೆದರೂ ಕಾಕತಿ ಕ್ರೈ ಟೀಂ ಮಾತ್ರ ಇದಕ್ಕೆ ತಲೆ ಕೆಡಿಸಿಕೊಳ್ಳದೆ ತಮ್ಮ ಡೀಲ್ ದಂಧೆಯನ್ನು ಮಂದುವರೆಸಿದೆ. ತಮ್ಮ ಮಾಮೂಲಿ ಕಲೆಕ್ಷನ್ ಗಾಗಿ ದಿನಾಲು ಅಕ್ರಮ ದಂಧೆ ನಡೆಸುವ ಒಬ್ಬ ಗಿರಾಕಿಯನ್ನು ಹಿಡಿದು ತಂದು ಅವನಿಂದ ಮೂವತ್ತರಿಂದ ನಾಲವತ್ತು ಸಾವಿರವರೆಗೆ ವಸೂಲಿ ಮಾಡಿ, ಬರುವ ತಿಂಗಳಿನಿಂದ ಹಪ್ತಾ ಪಿಕ್ಸ ಮಾಡುವುದೇ ಇವರ ದಿನಕ ಕಾಯಕವಾಗಿದೆ ಎಂದು ಎದ್ದು ಕಾಣುತ್ತಿದೆ.
ಖಡಕ ಡಿಸಿಪಿಗಳ ಕ್ರಮ ಏನು..?
ವಾರದಲ್ಲಿ ಕಡೋಲಿ ಹಾಗೂ ಕಾಕತಿಯಲ್ಲಿ ಲಕ್ಷಾಂತರ ರೂ ಮೌಲ್ಯದ ಕಳ್ಳತನವಾಗಿವೆ. ಕಡೋಲಿ ಕಳ್ಳತನದಲ್ಲಿ ಕಳ್ಳನನ್ನು ಸ್ವತಃ ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಕೊಟ್ಟಿದ್ದರು. ಆದರೆ ಆ ಕಳ್ಳತನದಲ್ಲಿ ಭಾಗಿಯಾಗಿದ್ದ ಉಳಿದ ಕಳ್ಳರನ್ನು ಹಿಡಿಯುವ ಸಾಹಸ ಪೊಲೀಸರು ಮಾಡಲುಲ್ಲ. ಈಗ ಕಾಕತಿಯಲ್ಲಿ 8 ತೊಲೆ ಬಂಗಾರದ ಒಡವೆಗಳು ಕಳ್ಳತನವಾಗಿವೆ. ಹಿಂದೆ ನಡೆದಿದ್ದ ಕಳ್ಳತನ ಪ್ರಕರಣಗಳಲ್ಲಿ ಸಿಕ್ಕ ಕಳ್ಳರನ್ನು ಬಿಟ್ಟಿದ್ದಕ್ಜೆ ಇಂತಹ ಪ್ರಕರಣಗಳು ಜಾಸ್ತಿ ಆಗಲು ಕಾರಣ ಎಂದು ಜನ ಶಪಿಸುತ್ತಿದ್ದಾರೆ.
ಹೀಗಾಗಿ ಆ ಕಳ್ಳರೊಂದಿಗೆ ಡೀಲ್ ಮಾಡಿಕೊಂಡಿರುವ ಆ “ಕ್ರೈಂ” ಟೀಮ್ ವಿರುಧ್ಧ ಖಡಕ ಡಿಸಿಪಿಗಳಾದ ಸ್ನೇಹಾ ಪಿವಿ ಹಾಗೂ ರೋಹನ್ ಜಗದೀಶ್ ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.