ದೆಹಲಿ :
ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಮತ್ತೆ ತನ್ನ ವರ್ಚಸ್ಸು ಪ್ರದರ್ಶಿಸುವ ಸಾಧ್ಯತೆ ಇದೆ ಎಂದು ಟೈಮ್ಸ್ ನೌ ಮತ್ತು ಈಟಿಜಿ ರಿಸರ್ಚ್ ಸಮೀಕ್ಷೆ ನುಡಿದಿದೆ.
ಬಿಜೆಪಿ 18-20, ಕಾಂಗ್ರೆಸ್ 7-9 ಮತ್ತು ಜೆಡಿಎಸ್ 0-1 ಗೆಲ್ಲಲಿದೆ ಎಂದು ಸಮೀಕ್ಷೆ ನುಡಿದಿದೆ. ಬಿಜೆಪಿ ಶೇ.46.1, ಕಾಂಗ್ರೆಸ್ ಶೇ.41.9, ಜೆಡಿಎಸ್ ಶೇ.7.2 ಮತ್ತು ಇತರರು ಶೇ. 4.8 ರಷ್ಟು ಮತ ಪಡೆದುಕೊಳ್ಳಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.