ದೆಹಲಿ :
ಸುಮಾರು 375 ವರ್ಷಗಳ ನಂತರ, ಭೂವಿಜ್ಞಾನಿಗಳು ಸಾಮಾನ್ಯ ದೃಷ್ಟಿಯಲ್ಲಿ ಅಡಗಿರುವ (ಕಾಣಿಸದ) ಪ್ರಾಚೀನ ಗೊಂಡ್ವಾನಾ ಭೂಮಿಯ ಭಾಗವಾಗಿದ್ದ ಚಿಕ್ಕದಾದ ಖಂಡವನ್ನು ಅಂತಿಮವಾಗಿ ಪತ್ತೆ ಮಾಡಿದ್ದಾರೆ.
ಭೂವಿಜ್ಞಾನಿಗಳು ಮತ್ತು ಭೂಕಂಪಶಾಸ್ತ್ರಜ್ಞರ ಸಣ್ಣ ತಂಡವು ಹೊಸದಾಗಿ ಸಂಸ್ಕರಿಸಿದ ಝೀಲ್ಯಾಂಡಿಯಾ ಅಥವಾ ಟೆ ರಿಯು-ಎ-ಮೌಯಿ ನಕ್ಷೆಯನ್ನು ರಚಿಸಿದೆ ಎಂದು Phys.org ವರದಿ ಮಾಡಿದೆ. ಸಾಗರ ತಳದಿಂದ ಸಂಗ್ರಹಿಸಿದ ಡ್ರೆಡ್ಜ್ ಮಾಡಿದ ಬಂಡೆಗಳ ಮಾದರಿಗಳಿಂದ ಪಡೆದ ಡೇಟಾವನ್ನು ಬಳಸಿಕೊಂಡು ವಿಜ್ಞಾನಿಗಳಿಗೆ ಈ ಖಂಡದ ರೂಪ ಮತ್ತು ರಚನೆಯನ್ನು ಊಹಿಸಲು ಸಾಧ್ಯವಾಯಿತು. ಸಂಶೋಧನೆಯ ವಿವರಗಳನ್ನು ಟೆಕ್ಟೋನಿಕ್ಸ್ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ.
ಬಿಬಿಸಿ (BBC) ವರದಿಯ ಪ್ರಕಾರ, ಝೀಲ್ಯಾಂಡಿಯಾ (Zealandia) 1.89 ದಶಲಕ್ಷ ಚದರ ಮೈಲುಗಳ (4.9 ದಶಲಕ್ಷ ಚದರ ಕಿ.ಮೀ) ವಿಶಾಲವಾದ ಖಂಡವಾಗಿದೆ, ಇದು ಮಡಗಾಸ್ಕರ್ನ ಆರು ಪಟ್ಟು ದೊಡ್ಡದಾಗಿದೆ. ವಿಜ್ಞಾನಿಗಳ ತಂಡವು ವಾಸ್ತವವಾಗಿ 8 ಖಂಡಗಳಿವೆ ಎಂದು ಮಾಹಿತಿ ನೀಡಿದೆ- ಮತ್ತು ಇತ್ತೀಚಿನ ಸೇರ್ಪಡೆಯು ವಿಶ್ವದ ಅತ್ಯಂತ ಚಿಕ್ಕ, ತೆಳುವಾದ ಮತ್ತು ಕಿರಿಯ ವಯಸ್ಸಿನ ಖಂಡ ಎಂದು ಹೇಳಿದೆ.
ಇದನ್ನು ಮೊದಲು ಡಚ್ ಉದ್ಯಮಿ ಮತ್ತು ನಾವಿಕ ಅಬೆಲ್ ಟ್ಯಾಸ್ಮನ್ 1642 ರಲ್ಲಿ ಕಂಡುಹಿಡಿದರು ಎಂದು ಹೇಳಲಾಗಿದೆ, ಅವರು “ಗ್ರೇಟ್ ಸದರ್ನ್ ಕಾಂಟಿನೆಂಟ್” ಅನ್ನು ಬೆಳಕಿಗೆ ತರಲು ಹತಾಶರಾಗಿದ್ದರು. ಆದಾಗ್ಯೂ, ಅವರಿಗೆ ಇದರ ಅಂದಾಜು ಸ್ಥಳ ಎಷ್ಟಿದೆ ಎಂದು ಕಂಡುಹಿಡಿಯಲು ಸಾಧ್ಯವಾಗಲಿಲ್ಲ. 2017ರ ಸುಮಾರಿಗೆ ಭೂವಿಜ್ಞಾನಿಗಳು ಈ ಖಂಡವು ಸಾಮಾನ್ಯ ದೃಷ್ಟಿಯಲ್ಲಿ ಅಡಗಿಕೊಂಡಿದೆ ಎಂಬುದನ್ನು ಕಂಡುಕೊಂಡರು.
ಹೊಸ ಖಂಡವು 94 ಪ್ರತಿಶತದಷ್ಟು ನೀರಿನ ಅಡಿಯಲ್ಲಿದೆ, ಕೇವಲ ಬೆರಳೆಣಿಕೆಯಷ್ಟು ದ್ವೀಪಗಳು ನ್ಯೂಜಿಲೆಂಡ್ನಂತೆಯೇ ಕಾಣುತ್ತವೆ. “ಇದರ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ಬಹಿರಂಗಪಡಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂಬುದಕ್ಕೆ ಇದು ಒಂದು ಉದಾಹರಣೆಯಾಗಿದೆ” ಎಂದು ನ್ಯೂಜಿಲೆಂಡ್ ಕ್ರೌನ್ ರಿಸರ್ಚ್ ಇನ್ಸ್ಟಿಟ್ಯೂಟ್ ಜಿಎನ್ಎಸ್ ಸೈನ್ಸ್ನ ಭೂವಿಜ್ಞಾನಿ ಆಂಡಿ ಟುಲೋಚ್ ಹೇಳುತ್ತಾರೆ. ಅವರು ಝೀಲ್ಯಾಂಡಿಯಾವನ್ನು ಕಂಡುಹಿಡಿದ ತಂಡದ ಭಾಗವಾಗಿದ್ದರು ಎಂದು ಬಿಬಿಸಿ ವರದಿ ಮಾಡಿದೆ.
ವಿಜ್ಞಾನಿಗಳ ಪ್ರಕಾರ, Zelandia ಅಧ್ಯಯನ ಮಾಡಲು ಕಷ್ಟಕರವಾಗಿದೆ. ವಿಜ್ಞಾನಿಗಳು ಈಗ ಸಮುದ್ರದ ತಳದಿಂದ ಬೆಳೆದ ಬಂಡೆಗಳು ಮತ್ತು ಕೆಸರು ಮಾದರಿಗಳ ಸಂಗ್ರಹಗಳನ್ನು ಅಧ್ಯಯನ ಮಾಡುತ್ತಿದ್ದಾರೆ, ಅವುಗಳಲ್ಲಿ ಹೆಚ್ಚಿನವು ಡ್ರಿಲ್ ಮಾಡಿದ ಅಥವಾ ಕೊರೆದ ಸ್ಥಳಗಳಿಂದ ತಂದ ಮಾದರಿಗಳು-ಇತರವು ಈ ಪ್ರದೇಶದ ದ್ವೀಪಗಳ ತೀರದಿಂದ ತಂದ ಮಾದರಿಗಳಾಗಿವೆ.
ಕಲ್ಲಿನ ಮಾದರಿಗಳ ಅಧ್ಯಯನವು ಪಶ್ಚಿಮ ಅಂಟಾರ್ಕ್ಟಿಕಾದಲ್ಲಿ ಭೂವೈಜ್ಞಾನಿಕ ಮಾದರಿಗಳನ್ನು ತೋರಿಸಿದೆ ಎಂದು Phys.org ವರದಿ ಮಾಡಿದೆ, ಸಾಗರ ತಳದಿಂದ ಸಂಗ್ರಹಿಸಿದ ಡ್ರೆಡ್ಜ್ ಮಾಡಿದ ಬಂಡೆಗಳ ಮಾದರಿಗಳಿಂದ ಪಡೆದ ಡೇಟಾವನ್ನು ಬಳಸಿಕೊಂಡು ಅವರಿಗೆ ಈ ಖಂಡದ ರೂಪ ಮತ್ತು ರಚನೆಯನ್ನು ಊಹಿಸಲು ಸಾಧ್ಯವಾಯಿತು. ಪಶ್ಚಿಮ ಅಂಟಾರ್ಕ್ಟಿಕಾದಲ್ಲಿನ ಭೂವೈಜ್ಞಾನಿಕ ಮಾದರಿಗಳನ್ನು ಅಧ್ಯಯನ ಮಾಡುವ ಮೂಲಕ ಅವರು ತೀರ್ಮಾನಕ್ಕೆ ಬಂದರು, ಇದು ನ್ಯೂಜಿಲೆಂಡ್ನ ಪಶ್ಚಿಮ ಕರಾವಳಿಯ ಕ್ಯಾಂಪ್ಬೆಲ್ ಪ್ರಸ್ಥಭೂಮಿಯ ಬಳಿ ಸಬ್ಡಕ್ಷನ್ ವಲಯದ ಸಾಧ್ಯತೆಯನ್ನು ಅರ್ಥಮಾಡಿಕೊಳ್ಳಲು ಕಾರಣವಾಯಿತು. ಸಂಶೋಧಕರು ಆ ಪ್ರದೇಶದಲ್ಲಿ ಕಾಂತೀಯ ವೈಪರೀತ್ಯಗಳನ್ನು ಕಂಡುಹಿಡಿಯಲಿಲ್ಲ.
ಹೊಸದಾಗಿ ಸಂಸ್ಕರಿಸಿದ ನಕ್ಷೆಯು ಝೀಲ್ಯಾಂಡಿಯಾ ಖಂಡದ ಮ್ಯಾಗ್ಮ್ಯಾಟಿಕ್ ಆರ್ಕ್ ಅಕ್ಷದ ಸ್ಥಳವನ್ನು ಮಾತ್ರವಲ್ಲದೆ ಇತರ ಪ್ರಮುಖ ಭೂವೈಜ್ಞಾನಿಕ ಲಕ್ಷಣಗಳನ್ನು ತೋರಿಸುತ್ತದೆ.
ಝಿಲ್ಯಾಂಡಿಯಾ ಎಂದು ಕರೆಯಲ್ಪಡುವ ಖಂಡವನ್ನು ಮಾವೊರಿ ಭಾಷೆಯಲ್ಲಿ – ಟೆ ರಿಯು-ಎ-ಮೌಯಿ ಎಂದು ಕರೆಯುತ್ತಾರೆ. ಈ ಖಂಡವು ಸರಿಸುಮಾರು 94 ಪ್ರತಿಶತದಷ್ಟು ಸಮುದ್ರದ ಅಡಿಯಲ್ಲಿದೆ ಎಂದು ನಂಬಲಾಗಿದೆ. ಆದರೆ ಉಳಿದ 6 ಪ್ರತಿಶತವು ನ್ಯೂಜಿಲೆಂಡ್ ಸುತ್ತಮುತ್ತಲಿನ ದ್ವೀಪಗಳನ್ನು ಒಳಗೊಂಡಿದೆ.
ಇದೀಗ ಮಂಗಳವಾರ, ಭೂವಿಜ್ಞಾನಿಗಳು ಮತ್ತು ಭೂಕಂಪಶಾಸ್ತ್ರಜ್ಞರ ಅಂತಾರಾಷ್ಟ್ರೀಯ ತಂಡವು ‘ಟೆಕ್ಟೋನಿಕ್ಸ್’ ಜರ್ನಲ್ನಲ್ಲಿ ಝೀಲ್ಯಾಂಡಿಯಾದ ಸಂಸ್ಕರಿಸಿದ ನಕ್ಷೆಯನ್ನು ಪ್ರಕಟಿಸಿದೆ.
50 ಕೋಟಿ ವರ್ಷಗಳ ಹಿಂದೆ ಪಶ್ಚಿಮ ಅಂಟಾರ್ಕ್ಟಿಕಾ ಮತ್ತು ಪೂರ್ವ ಆಸ್ಟ್ರೇಲಿಯಾವನ್ನು ಒಳಗೊಂಡಿರುವ ಸೂಪರ್ಕಾಂಟಿನೆಂಟ್ ಗೊಂಡ್ವಾನಾದಿಂದ ಜಿಲ್ಯಾಂಡಿಯಾ ಭಾಗವು ಯಾವಾಗ “ದೂರ ಹೋಗಲು” ಪ್ರಾರಂಭಿಸಿತು ಎಂದು ತಮ್ಮ ತಂಡ ಲೆಕ್ಕಾಚಾರ ಮಾಡಲು ಪ್ರಯತ್ನಿಸುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.