ಬೆಳಗಾವಿ :
ಹುಕ್ಕೇರಿ ತಾಲೂಕಿನ ಎಲಿಮುನ್ನೊಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಜೆ ತುಂಬಿ ಹರಿಯುತ್ತಿದ್ದ ಹಳ್ಳಕ್ಕೆ ಶಾಲಾ ಬಸ್ ನುಗ್ಗಿದೆ. ಆದರೆ ಇದರಿಂದ ಭಾರಿ ಅನಾಹುತ ತಪ್ಪಿದ್ದು ಗ್ರಾಮಸ್ಥರು ಸಮಯ ಪ್ರಜ್ಞೆಯಿಂದ ಮಕ್ಕಳನ್ನು ರಕ್ಷಿಸುವಲ್ಲಿ ಸಫಲರಾಗಿದ್ದಾರೆ.
ಖಾಸಗಿ ಶಾಲೆಯ ಮಕ್ಕಳನ್ನು ಸಾಗಿಸುತ್ತಿದ್ದ ಬಸ್ ನ್ನು ಚಾಲಕ ಭಾರಿ ಮಳೆಯ ಕಾರಣಕ್ಕೆ ಪ್ರವಾಹದ ನೀರಿಗೆ ನುಗ್ಗಿಸಿದ್ದರಿಂದ ದೊಡ್ಡ ಅನಾಹುತ ಸಂಭವಿಸುತ್ತಿತ್ತು. ಬಸ್ಸು ನೀರಿನಲ್ಲಿ ನುಗ್ಗುತ್ತಿದ್ದಂತೆ ಇದನ್ನು ಗಮನಿಸಿದ ಗ್ರಾಮಸ್ಥರು ಹಳ್ಳದ ದಂಡೆ ಮೇಲೆ ನಿಂತು ಕೂಗ ತೊಡಗಿದರು. ಕೊನೆಗೆ ಚಾಲಕ ಬಸ್ ನ್ನು ನಿಲ್ಲಿಸಿದ್ದಾನೆ. ಭೀತಿಗೊಂಡ ಮಕ್ಕಳನ್ನು ಬಸ್ಸಿನಿಂದ ಹೊರಗೆ ತೆಗೆಯುವಲ್ಲಿ ಕೊನೆಗೂ ಗ್ರಾಮಸ್ಥರು ಯಶಸ್ವಿಯಾಗಿದ್ದಾರೆ.