ಜನ ಜೀವಾಳ ಜಾಲ : ಬೆಳಗಾವಿ: ಇಂದಿನ ಜಂಜಾಟದ ಬದುಕಿನಲ್ಲಿ ಎಲ್ಲರೂ ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಿವೆ ಈ ನಿಟ್ಟಿನಲ್ಲಿ ಅರಿಹಂತ್ ಆಸ್ಪತ್ರೆ ವಿಶ್ವ ಹೃದಯ ದಿನದ ಅಂಗವಾಗಿ ನಗರದಲ್ಲಿ ಜಾಗೃತಿ ಮೂಡಿಸಲು ಸೈಕಲ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು.
ಅಧ್ಯಕ್ಷತೆಯನ್ನು ಡಾ. ಎಂ.ಡಿ. ದೀಕ್ಷಿತ ವಹಿಸಿದ್ದರು. ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ್ ಕೋಣಿ ಸೈಕಲ್ ರ್ಯಾಲಿಗೆ ಚಾಲನೆ ನೀಡಿದರು.
ರ್ಯಾಲಿಯಲ್ಲಿ ಸುಮಾರು 250 ಕ್ಕೂ ಹೆಚ್ಚು ವೈದ್ಯರು, ಸಿಬ್ಬಂದಿಗಳು, ಶಾಲಾ ಮಕ್ಕಳು ಹಾಗೂ ಬೆಳಗಾವಿಯ ಸೈಕ್ಲಿಸ್ಟ್ಗಳು ಭಾಗವಹಿಸಿದ್ದರು. ಹೃದ್ರೋಗಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ದೈಹಿಕ ಚಟುವಟಿಕೆಯನ್ನು ಮಾಡುವ ಮೂಲಕ ಅದನ್ನು ತಡೆಗಟ್ಟುವುದು ಹೇಗೆ ಎಂದು ತಿಳಿಸಿದರು. ಸೈಕಲ್ ರ್ಯಾಲಿಯ ನಂತರ, ಮಹಾತ್ಮಾ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಆಸ್ಪತ್ರೆಯಲ್ಲಿ ಆಚರಿಸಲಾಯಿತು.
ರ್ಯಾಲಿಯಲ್ಲಿ ಡಾ. ಎಂ.ಡಿ. ದೀಕ್ಷಿತ್, ಡಾ. ಪ್ರಭು ಹಳಕಟ್ಟಿ, ಡಾ. ಸುರೇಶ ಪಟ್ಟೇದ, ಡಾ. ಸುನಿಲ್ ಭಂಡುಗೆ, ಡಾ.ಅಂಜನಾ ಬಾಗೇವಾಡಿ, ಡಾ.ಅಂಬರೀಷ್ ನೇರ್ಲಿಕರ್ ಹಾಗೂ ಅರಿಹಂತ್ ಆಸ್ಪತ್ರೆಯ ವೈದ್ಯರು ಭಾಗವಹಿಸಿದ್ದರು.
In today’s hectic life, everyone is neglecting their health. Due to this, heart related diseases have increased. To create awareness a bicycle rally was organized by Arihant Hospital in the city on the occasion of World Heart Day.
The program was chaired by Dr. M D Dixit & District Health Officer Dr. Mahesh Koni flagged off the cycle rally.
Around 250 participants from various age categories participated in this rally to create awareness about heart diseases & how to prevent it by performing physical activity. After the cycle rally, Mahatma Gandhi and Shri Lal Bahadur Shastri Jayanti was celebrated at hospital.
Dr. M D Dixit, Dr. Prabhu Halkati, Dr. Suresh Patted, Dr. Sunil Bhandurge, Dr. Anjana Bagewadi, Dr. Ambrish Nerlikar & doctors & staff of Arihant Hospital, school childrens and cyclists of Belagavi participated in this rally