ಇಂದೋರ್ :
ಮಧ್ಯಪ್ರದೇಶದ ಬಹುದೊಡ್ಡ ನಗರವಾಗಿರುವ ಇಂದೋರ್ ಮಹಾನಗರ ಪಾಲಿಕೆ ಇದೀಗ ಮಹಾನಗರ ಪಾಲಿಕೆಯ ಕಾರ್ಯಕ್ರಮ ಹಾಗೂ ಪತ್ರ ವ್ಯವಹಾರಗಳಲ್ಲಿ ಭಾರತ ಎಂದು ಹೆಸರು ಬಳಸುವುದಕ್ಕೆ ಸಂಬಂಧಿಸಿದ ಪ್ರಸ್ತಾಪಕ್ಕೆ ಮುಂದಾಗಿದೆ.
ಈ ಬಗ್ಗೆ ಮೇಯರ್ ಪುಷ್ಯಮಿತ್ರ ಭಾರ್ಗವ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆ ಒಪ್ಪಿಗೆ ನೀಡಿದೆ. ಮಹಾಸಭೆಯಲ್ಲಿ ಈ ಪ್ರಸ್ತಾಪ ಮಂಡನೆಯಾಗಲಿದ್ದು ಅನುಮೋದನೆ ಸಿಗುವ ಸಾಧ್ಯತೆ ಇದೆ. ಇಂಡಿಯಾ ಎಂಬ ಹೆಸರು ಬ್ರಿಟಿಷ್ ಬಳವಳಿಯಾಗಿದೆ. ಭಾರತ ಎನ್ನುವುದು ಭಾರತದ ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಶ್ರೀಮಂತ ಪರಂಪರೆ ಎಂದು ಬಿಂಬಿಸಲ್ಪಟ್ಟಿದೆ. ಸಂವಿಧಾನದಲ್ಲೂ ಭಾರತದ ಹೆಸರು ಪ್ರಸ್ತಾಪವಾಗಿದೆ. ಈ ನಿಟ್ಟಿನಲ್ಲಿ ಇಂದೋರ್ ಮಹಾನಗರ ಪಾಲಿಕೆ ಭಾರತ ಎಂಬ ಹೆಸರನ್ನು ಅಧಿಕೃತವಾಗಿ ಬಳಸಲು ಮುಂದಾಗಿದೆ.