ಲಂಡನ್ :
ಬ್ರಿಟನ್ನಲ್ಲಿ ಸಿಗರೇಟ್ ನಿಷೇಧಿಸಲು ಪ್ರಧಾನಿ ರಿಷಿ ಸುನಕ್ ಚಿಂತನೆ ನಡೆಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. 2009ರ ಜನವರಿ 1ರಂದು ಅಥವಾ ನಂತರ ಜನಿಸಿರುವವರಿಗೆ ತಂಬಾಕು ಮಾರಾಟ ಮಾಡುವುದನ್ನು ನಿಷೇಧಿಸುವುದು ಸೇರಿದಂತೆ ಹಲವು ಧೂಮಪಾನ ವಿರೋಧಿ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದಾರೆ. ಸರ್ಕಾರಿ ಮೂಲಗಳ ಪ್ರಕಾರ, ಮುಂದಿನ ಪೀಳಿಗೆಯವರು ಸಿಗರೇಟ್ ಖರೀದಿಸುವುದನ್ನು ತಡೆಯಲು ಯೋಚಿಸುತ್ತಿದ್ದಾರೆ.
ದೂಮಪಾನ ತ್ಯಜಿಸುವುದು ಹಾಗೂ 2030ರ ವೇಳೆಗೆ ಯುವಕರನ್ನು ಧೂಮಪಾನ ಮುಕ್ತರನ್ನಾಗಿ ಮಾಡಲು ಬಯಸುತ್ತೇನೆ, ಅದಕ್ಕಾಗಿ ನಾವು ಈಗಾಗಲೇ ಸಿಗರೇಟ್ ಉತ್ಪಾದನಾ ಪ್ರಮಾಣವನ್ನು ಕಡಿಮೆ ಮಾಡಲು ಕ್ರಮಗಳನ್ನು ಕೈಗೊಂಡಿದ್ದೇವೆ. ಗರ್ಭಿಣಿಯರು ಸಿಗರೇಟ್ ತ್ಯಜಿಸಲು ಪ್ರೋತ್ಸಾಹಿಸುವ ವೋಚರ್ ಯೋಜನೆಯಂತಹ ಹಲವು ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ.
ಜುಲೈನಲ್ಲಿ ಬ್ರಿಟನ್ ಹಾಗೂ ವೇಲ್ಸ್ನ ಕೌನ್ಸಿಲ್ಗಳು ಪರಿಸರ ಹಾಗೂ ಜನರ ಆರೋಗ್ಯದ ಆಧಾರದ ಮೇಲೆ 2024ರ ವೇಳೆಗೆ ಏಕಬಳಕೆಯ ವೇಪ್ಗಳ ಮಾರಾಟವನ್ನು ನಿಷೇಧಿಸುವಂತೆ ಸರ್ಕಾರಕ್ಕೆ ಕರೆ ನೀಡಿವೆ. ಮುಂದಿನ ವರ್ಷದ ನಿರೀಕ್ಷಿತ ಚುನಾವಣೆಗೆ ಮುನ್ನ ಸುನಕ್ ತಂಡವು ಹೊಸ ಗ್ರಾಹಕ-ಕೇಂದ್ರಿತ ಯೋಜನೆಯನ್ನು ರೂಪಿಸಿದೆ.
ವೇಪ್ಗಳು ಇ-ಸಿಗರೆಟ್ಗಳಾಗಿವೆ, ಇದು ಏರೋಸಾಲ್ ಅನ್ನು ಉತ್ಪಾದಿಸುವ ಬ್ಯಾಟರಿ ಚಾಲಿತ ಸಾಧನವಾಗಿದೆ. ಇದು ನಿಕೋಟಿನ್, ಸುವಾಸನೆ ಮತ್ತು 30 ಕ್ಕೂ ಹೆಚ್ಚು ಇತರ ರಾಸಾಯನಿಕಗಳನ್ನು ಒಳಗೊಂಡಿದೆ. ಏರೋಸಾಲ್ ಶ್ವಾಸಕೋಶವನ್ನು ಪ್ರವೇಶಿಸುತ್ತದೆ, ಅಲ್ಲಿ ನಿಕೋಟಿನ್ ಮತ್ತು ರಾಸಾಯನಿಕಗಳು ನಿಮ್ಮ ರಕ್ತಪ್ರವಾಹವನ್ನು ಪ್ರವೇಶಿಸುತ್ತವೆ.
ನ್ಯೂಜಿಲೆಂಡ್ನಲ್ಲಿ, ಸಿಗರೇಟ್ ಕಾನೂನುಗಳನ್ನು ಉಲ್ಲಂಘಿಸುವವರಿಗೆ 95,000 ಡಾಲರ್ ( 78,51,037 ರೂ.) ವರೆಗೆ ದಂಡ ವಿಧಿಸಲಾಗುತ್ತದೆ. 2025ರ ವೇಳೆಗೆ ದೇಶವನ್ನು ಹೊಗೆ ಮುಕ್ತ ಮಾಡುವ ಗುರಿಯನ್ನು ಅಲ್ಲಿನ ಸರ್ಕಾರ ಹೊಂದಿದೆ. ದೇಶಗಳಲ್ಲಿ ವಯಸ್ಕರಲ್ಲಿ ಧೂಮಪಾನದ ಪ್ರಮಾಣವು ನ್ಯೂಜಿಲೆಂಡ್ನಲ್ಲಿ ಕಡಿಮೆಯಾಗಿದೆ.