ಮಧ್ಯರಾತ್ರಿ ಕಳ್ಳನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಕಡೋಲಿ ಕಿಲಾಡಿಗಳು..!
ಕಬ್ಬಿಣ ಕದ್ದ ಕಳ್ಳನನ್ನು ಹಿಡಿದವರ ಮೇಲೆ ದರ್ಪ ತೋರಿದ ಕಾಕತಿ ಪೊಲೀಸ್ ಪೇದೆ..?
ಡೀಲ್ ಮಾಡಿಕೊಂಡು ಹೊನಗಾ ಕಳ್ಳರನ್ನು ಬಿಟ್ಟಿದ್ದ ಕ್ರೈಂ ಟೀಂ ಪೊಲೀಸಪ್ಪ ಯಾರು..?
ಬೆಳಗಾವಿ ಜನಜೀವಾಳ ಜಾಲ: ತಾಲೂಕಿನ ಕಡೋಲಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡ ಸಾಮಗ್ರಿಗಳನ್ನು ಕಳ್ಳತನ ಮಾಡುವಾಗ ಬೆಳಗಾವಿ ಗಾಂಧಿನಗರದ ಕಳ್ಳನೊಬ್ಬ ಸಿಕ್ಕಿಬಿದ್ದಿದ್ದಾನೆ.
ಏನಿದು ಘಟನೆ ..?: ಕಡೋಲಿ ಗ್ರಾಮದ ಹೊರ ವಲಯದಲ್ಲಿ ಸಚಿನ ಪಾಟೀಲ ಹಾಗೂ ಆತನ ಸಹೋದರರಿಬ್ಬರು ಸೇರಿಕೊಂಡು ಎರಡು ಮನೆಗಳನ್ನು ನಿರ್ಮಾಣ ಮಾಡುತ್ತಿದ್ದು, ಕಟ್ಟಡ ನಿರ್ಮಾಣಕ್ಕೆ ಬೇಕಾಗಿರುವ ಲಕ್ಷಾಂತರ ರೂ ಕಬ್ಬಿಣ ಸೇರಿ ಹಲವು ಸಾಮಗ್ರಿಗಳನ್ನು ತಂದು ಶೇಖರಿಸಿಡಲಾಗಿತ್ತು.
ಅವುಗಳ ಬಗ್ಗೆ ಪಕ್ಕದ ಗ್ರಾಮ ದೇವಗಿರಿಯ ಕಳ್ಳನೊಬ್ಬ ಮಾಹಿತಿ ನಿಡಿದ್ದಾನೆ. ಈ ಮಾಹಿತಿ ಆಧರಿಸಿ ಆ ಕಳ್ಳರು ನಿನ್ನೆ ರಾತ್ರಿ ಸುಮಾರು 11 ಗಂಟೆ ಸುಮಾರಿಗೆ ಕಾಮಗಾರಿ ನಡೆದಿರುವ ಸ್ಥಳಕ್ಕೆ ಗೂಡ್ಸ್ ರಿಕ್ಷಾ ತಗೆದುಕೊಂಡು ಬಂದು ಅಲ್ಲಿದ್ದ ಕಬ್ಬಿಣದ ಜಾಕ್ ಗಳನ್ನು ಕದ್ದು ತುಂಬುತ್ತಿದ್ದರು. ಆ ಸಮಯದಲ್ಲೇ ಮಾಲಿಕ ಸಚಿನ ಅಲ್ಲಿಗೆ ಹೋಗಿದ್ದಾನೆ. ತಕ್ಷಣ ಗ್ರಾಮಸ್ಥರನ್ನು ಸೇರಿಸಿದ್ದಾನೆ. ಗ್ರಾಮಸ್ಥರು ಬರುತ್ತಿರುದನ್ನು ನೋಡಿದ ಕಳ್ಳರ ಗ್ಯಾಂಗಿನಲ್ಲಿದ್ದ ನಾಲ್ವರು ಪರಾರಿಯಾಗಿದ್ದಾರೆ.
ಇನ್ನೂಬ್ಬ ಕಳ್ಳ ಪರಾರಿಯಾಗುವ ಸಂದರ್ಭದಲ್ಲಿ ಆತನನ್ನು ಕಡೋಲಿ ಯುವಕರು ಬೆನ್ನಟ್ಟಿ ರಿಕ್ಷಾ ಸಮೇತ ಹಿಡಿದ್ದಾರೆ. ನಂತರ ಕಾಕತಿ ಪೊಲೀಸರಿಗೆ ಕರೆಮಾಡಿ ಕಳ್ಳನನ್ನು ಹಸ್ತಾಂತರಿಸಿ ದೂರು ನೀಡಿದ್ದಾರೆ.
ಕಳ್ಳನನ್ನು ಹಿಡಿದು ಕೊಟ್ಟವರ ಮೇಲೆ ದರ್ಪ ತೋರಿದ ಪೇದೆ..?ಕಾಕತಿ ಪೊಲೀಸರಿಗೆ ದಖಲಾಗಿರುವ ಕಳ್ಳತನ ಪ್ರಕರಣಗಳನ್ನು ಭೇದಿಸಲು ಆಗದಿದ್ದರೂ, ಕಳ್ಳರನ್ನು ಹಿಡಿದು ಕೊಟ್ಟವರ ಮೇಲೆ ದರ್ಪ ತೋರುವುದನ್ನು ಮಾತ್ರ ಚೆನ್ನಾಗಿ ಕಲಿತಿದ್ದಾರೆ ಎಂಬುದಕ್ಕೆ ನಿನ್ನೆಯ ಘಟನೆಯ ಸಾಕ್ಷಿಯಾಗಿದೆ.
ಕಳ್ಳನನ್ನು ಕಡೋಲಿ ಯುವಕರು ಹಿಡಿಯುತ್ತಿದ್ದಂತೆ ಆತ ಅವರ ಮೇಲೆ ಮಾರಣಾಂತಿಕ ಹಲ್ಲೆಗೆ ಮುಂದಾಗಿದ್ದಾನೆ. ಆ ಸಮಯದಲ್ಲಿ ಯುವಕ ಮತ್ತು ಕಳ್ಳನ ನಡುವೆ ಕೈ ಕೈ ಆಗಿದೆ. ಇದನ್ನೆ ನೇಪ ಮಾಡಿಕೊಂಡು ಕಡೋಲಿ ಗ್ರಾಮಸ್ಥರನ್ನು ಮನಬಂದಂತೆ ಕಾಕತಿ ಪೊಲೀಸ ಪೇದೆಯೊಬ್ಬ ಬೈದು ಧಮಕಿ ಹಾಕಿದ್ದಾನೆ.
ಈತನ ವರ್ತನೆ ನೋಡಿದ ಕಡೋಲಿ ಜನ ಈ ಪೊಲೀಸಪ್ಪ ಕಳ್ಳನ ಪರ ಇರುವುದಾಗಿ ಖಚಿತವಾಗಿದೆ. ಇದಕ್ಕೆ ನಿಜವಾದಂತೆ ಆತನನ್ನು ಠಾಣೆಗೆ ಕರೆದೊಯ್ದು 15 ಘಂಟೆ ಆದರೂ ಇನ್ನೂ ಪ್ರಕರಣ ದಾಖಲಿಸಿಕೊಳ್ಳದಿರುವುದು ಸಂಶಯಕ್ಕೆ ಸಾಕ್ಷಿಯಾಗಿದೆ. ಅಷ್ಟೇ ಅಲ್ಲದೇ ಕಳ್ಳನನ್ನು ಗ್ರಾಮಸ್ಥರು ಹಿಡಿದಿದ್ದಾರೆ ಅದಕ್ಕೆ ನಾವು ನಮಗೆ ಬೇಕಾದಾಗ ವಿಚಾರಣೆ ಮಾಡಿ ಪ್ರಕರಣ ದಾಖಲಿಸಿಕೊಳ್ಳುತ್ತೇವೆ ಎಂದು ಉಢಾಫೆ ಉತ್ತರ ನೀಡುತ್ತಾನೆ ಆ ಪೆದೆ.
ಡೀಲ್ ಮಾಡಿಕೊಂಡು ಹೊನಗಾ ಕಳ್ಳರನ್ನು ಬಿಟ್ಟಿದ್ದ ಪೊಲೀಸಪ್ಪ ಯಾರು..?ನಿನ್ನೆ ನಡೆದಿರುವ ಕಡೋಲಿ ಕಳ್ಳತನಕ್ಕೂ, ವಾರಗಳ ಹಿಂದೆ ಹೊನಗಾದಲ್ಲಿ ನಡೆದಿದ್ದ ಕಬ್ಬಿಣ ಕಳ್ಳತನಕ್ಕೂ ಸಾಮ್ಯತೆ ಎದ್ದುಕಾಣುವಂತೆ ಇತ್ತು. ಅಂದು ಹೊನಗಾದಲ್ಲಿನ ಇಂಡಸ್ಟ್ರಿಯಲ್ ಏರಿಯಾದಲ್ಲಿ ನಡೆದ ಕಬ್ಬಿಣ ಕಳ್ಳತನಕ್ಕೆ ಸಂಬಂಧಿಸಿದಂತೆ ಕೇಲ ಸಂಶಯಾಸ್ಪದ ಕಳ್ಳರು ಸಿಕ್ಕಿದ್ದರು. ಆದರೆ ಅವರ ಮೇಲೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕಾಗಿದ್ದ ಕಾಕತಿ ಕ್ರೈಂ ಟೀಂನ ಪೊಲೀಸಪ್ಪನೊಬ್ಬ ಒಬ್ಬೊಬ್ಬ ಕಳ್ಳನ ಕಡೆಯಿಂದ 20 ಸಾವಿರ ರೂ ಯಂತೆ ಲಕ್ಷಾಂತರ ರೂ ದೋಚಿ ಬಿಟ್ಟು ಕಳಿಸಿ ಪ್ರಕರಣವನ್ನು ತಿರುಚಿ “ಮುರು”ಚಿ ಮುಚ್ಚಿಹಾಕಿ ಕಳ್ಳರಿಗೆ ಶ್ರೀರಕ್ಷೆ ನೀಡಿರುವುದಾಗಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಇದರ ಫಲವಾಗಿಯೇ ಇಂದು ಇಂತಹ ಕಳ್ಳತನ ಪ್ರಕರಣಗಳು ಹೆಚ್ಚಾಗಿರುವುದಕ್ಕೆ ಕಾರಣವಾಗಿದೆ. ಆ ಒಬ್ಬ ಭ್ರಷ್ಟಾಚಾರಿ ಪೊಲೀಸಪ್ಪನಿಂದಾಗಿ ಕಾಕತಿ ಕ್ರೈಂ ಟೀಂ ಹಳ್ಳ ಹಿಡಿದಿದೆ ಎಂದು ಉಳಿದ ಸಿಬ್ಬಂದಿಗಳು ಶಪಿಸುತ್ತಿದ್ದಾರೆ.
ಒಟ್ಟಿನಲ್ಲಿ ನಿನ್ನೆ ಕಡೋಲಿಯಲ್ಲಿ ನಡೆದಿರುವ ಕಳ್ಳತನ ಪ್ರಕರಣ ಹೊನಗಾ ಪ್ರಕರಣದಂತೆ ಮಚ್ಚಿ ಹೋಗದೆ ಇದರ ಹಿಂದಿರುವ ಕಳ್ಳರ ಗ್ಯಾಂಗನ್ನು ಹಿಡಿದು ಶಿಕ್ಷಿಸುವಂತಾಗಲಿ.