ಬೆಳಗಾವಿ ಗಣೇಶೋತ್ಸವ ವ್ಯವಸ್ಥೆಗಾಗಿ ನಗರ ಡಿಸಿಪಿಗಳಿಂದ ವಿಶೇಷ ರೌಂಡ್ಸ್..!
ಕಾಲ್ನಡಿಗೆಯಲ್ಲಿ ನಗರ ಸುತ್ತಿದ DCP ಸ್ನೇಹಾ, ಬುಲೆಟ್ ಏರಿ ಸಿಟಿ ರೌಂಡ್ ಹಾಕಿದ ಡಿಸಿಪಿ RJ..!
ಬೆಳಗಾವಿ : ನಗರದಲ್ಲಿನ ಗಣೇಶ ಉತ್ಸವದ ಪೊಲೀಸ್ ಬಂದೋಬಸ್ತ ಹಾಗೂ ರಾಜ್ಯದಲ್ಲಿಯೇ ಅತೀ ವಿಜೃಂಭಣೆಯಿಂದ ನಡೆಯುವ ಬೆಳಗಾವಿ ಗಣೇಶ ವಿಸರ್ಜನೆಯ ಮೆರವಣಿಗೆಯ ಪೂರ್ವ ತಯಾರಿ ವಿಕ್ಷಣೆಗಾಗಿ, ಇಂದು ಸಂಜೆ ನಗರದ ಇಬ್ಬರು ಡಿಸಿಪಿಗಳಾದ ರೋಹನ್ ಜಗದೀಶ್ ಹಾಗೂ ಪಿ ವಿ ಸ್ನೇಹಾ ಅವರು ರೌಂಡ್ಸ್ ಹಾಕಿದ್ದಾರೆ.
ವಿಷೇಶವಾಗಿ ಡಿಸಿಪಿ ಸ್ನೇಹಾ ಅವರು ಕಾಲ್ನಡಿಗೆಯಲ್ಲಿ ಖಡೇಬಜಾರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿರುವ ಗಣೇಶ ಮಂಡಳಿಗಳಿಗೆ ಪಿಐ ದಿಲೀಪ್ ನಿಂಬಾಳ್ಕರ, ಪಿಎಸ್ಐ ಆನಂದ ಆದಗೊಂಡ ಹಾಗೂ ಸಿಬ್ಬಂದಿಗಳೊಂದಿಗೆ ಕಾಲ್ನಡಿಗೆಯಲ್ಲಿ ಭೇಟಿ ನೀಡಿದರು. ಮೆರವಣಿಗೆ ಹಾಗೂ ಗಣೇಶೋತ್ಸವದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ ಬಗ್ಗೆ ವೀಕ್ಷಣೆ ಮಾಡಿ ಹೆಚ್ಚಿನ ಕ್ರಮ ಕೈಗೊಂಡರು.
ಅದೇರೀತಿ ವಿಷೇಶವಾಗಿ ಬುಲೆಟ್ ಮೇಲೆ ಆಗಮಿಸಿದ ಡಿಸಿಪಿ ರೋಹನ್ ಜಗದೀಶ್ ಮಾಳಮಾರುತಿ ಪಿಐ ಕಾಲಿಮಿರ್ಚಿ,ಪಿಎಸ್ಐ ಹೊನ್ನಪ್ಪ ತಳವಾರ,ಶ್ರೀಶೈಲ ಗುಳಗೇರಿ, ಹಾಗೂ ಮಾಳಮಾರುತಿ ಠಾಣೆಯ ಪೇದೆಗಳು ಠಾಣಾ ವ್ಯಾಪ್ತಿಯಲ್ಲಿ ಬೈಕ್ ರೌಂಡ್ ಹಾಕುವ ಮೂಲಕ ಗಣೇಶ ದರ್ಶನದ ಜೊತೆಗೆ ಮಂಡಲಗಳ ಸದಸ್ಯರ ಜೊತೆ ಮಾತನಾಡಿ ಅವರ ಅಹವಾಲು ಆಲಿಸಿದರು.
ಇಬ್ಬರು ಡಿಸಿಪಿಗಳು ಬಂದೋಬಸ್ತ್ ಹಾಗೂ ವ್ಯವಸ್ಥೆ ವೀಕ್ಷಣೆ ವೇಳೆ ಗಣೇಶ ದರ್ಶನ ಮಾಡಿ ಆರತಿಯಲ್ಲಿ ಪಾಲ್ಗೊಂಡರು. ಮಾಳಮಾರುತಿ ವ್ಯಾಪ್ತಿಯಲ್ಲಿರುವ ಗಣೇಶ ಮಂಡಳಿಯಯವರು ಡಿಸಿಪಿ ರೋಹನ್ ಜಗದೀಶ್ ಹಾಗೂ ಖಡೇಬಜಾರ ವ್ಯಾಪ್ತಿಯಲ್ಲಿರುವ ಮಂಡಳಿಯವರು ಡಿಸಿಪಿ ಸ್ನೇಹಾ ಅವರನ್ನು ಸತ್ಕರಿಸಿದರು.
ಇಬ್ಬರು ಡಿಸಿಪಿಗಳ ರೌಂಡ್ಸ್ ಬಗ್ಗೆ ಸಾರ್ವಜನಿಕರು ಹಾಗೂ ಮಂಡಳಿಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ವಾಹನದಲ್ಲಿ ಕುಳಿತು ಹಾಯ್ ಬಾಯ್ ಮಾಡದೇ, ಸ್ವತಃ ಕಾಲ್ನಡಿಗೆ ಹಾಗೂ ಬೈಕ್ ಮೇಲೆ ಸುತ್ತಾಟ ನಡೆಸಿ ವ್ಯವಸ್ಥೆ ಬಗ್ಗೆ ವೀಕ್ಷಣೆ ಮಾಡಿದ್ದು ಸಾಮಾನ್ಯರಿಗೆ ಧೈರ್ಯ ತುಂಬುವ ಜತೆಗೆ ಪೊಲೀಸರ ಮೇಲೆ ಭರವಸೆ ಮೂಡಿಸುವಂತಾಗಿತ್ತು.