ಸತೀಶ ಜಾರಕಿಹೊಳಿ ಅವರ ಹೆಗಲಿಗೆ ಹೆಗಲು ಕೊಟ್ಟು ದುಡಿಯುವ ಅವರ ಪ್ರೀತಿಯ ಮಕ್ಕಳಾದ ಪ್ರಿಯಾಂಕಾ ಮತ್ತು ರಾಹುಲ್ ಗಾಂಧಿ ಜಿಲ್ಲೆಯ ರಾಜಕಾರಣದಲ್ಲಿ ಕಳೆದೆರಡು ವರ್ಷಗಳಿಂದ ಜನರ ಪ್ರೀತಿ ಪಾತ್ರರಾಗಿದ್ದಾರೆ. ಪ್ರಿಯಾಂಕಾ ಜಾರಕಿಹೊಳಿಯವರು ವಿವಿಧ ಮಹಿಳಾ ಸಂಘಟನೆಗಳ ಜತೆ ಅವಿನಾಭಾವವಾಗಿ ಒಡನಾಟ ಬೆಳೆಸಿಕೊಂಡಿದ್ದಾರೆ. ರಾಹುಲ್ ಜಾರಕಿಹೊಳಿಯವರು ಯುವಕ ಸಂಘಗಳು ಸೇರಿದಂತೆ ಹತ್ತು ಹಲವು ಸಂಘಟನೆಗಳ ಜತೆ ಗುರುತಿಸಿಕೊಂಡು ಸಮಾಜಮುಖಿ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇಬ್ಬರೂ ನೊಂದವರ ದನಿಯಾಗಿ ತಮ್ಮ ತಂದೆಯವರಂತೆ ಸ್ಪಂದಿಸುತ್ತಿರುವುದು ಗಮನಾರ್ಹ. ಮಕ್ಕಳಿಬ್ಬರು ದಿನೇ ದಿನೇ ಜನಮುಖಿ ಕೆಲಸಗಳು, ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಬೆಳಗಾವಿ ಜಿಲ್ಲಾ ಕಬಡ್ಡಿ ಅಮೆಚೂರ್ ಸಂಘದ ಜಿಲ್ಲಾಧ್ಯಕ್ಷರು, ಸತೀಶ ಜಾರಕಿಹೊಳಿ ಶುಗರ್ಸ್ ನಿರ್ದೇಶಕರಾದ ರಾಹುಲ್ ಜಾರಕಿಹೊಳಿ ಅವರ ಹುಟ್ಟುಹಬ್ಬದ ನಿಮಿತ್ತ ಅಕ್ಟೋಬರ್ 2 ರಿಂದ 3 ದಿನಗಳ ಕಾಲ ಸತೀಶ ಜಾರಕಿಹೊಳಿ ಅಭಿಮಾನಿ ಬಳಗ, ರಾಹುಲ್ ಜಾರಕಿಹೊಳಿ ಅಭಿಮಾನಿ ಬಳಗ, ಪ್ರಿಯಾಂಕಾ ಅಕ್ಕ ಅಭಿಮಾನಿ ಬಳಗದ ವತಿಯಿಂದ ರಾಹುಲೋತ್ಸವ ಎಂಬ ಅಪೂರ್ವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಕ್ಟೋಬರ್ 2 ರಂದು ಬೆಳಗಾವಿಯ ಕೆಪಿಟಿಸಿಎಲ್ ಸಭಾಭವನ, ಅಕ್ಟೋಬರ್ 3 ರಂದು ಯಮಕನಮರಡಿಯ ಅಲದಾಳ ಗೆಸ್ಟ್ ಹೌಸ್ ಮತ್ತು ಅಕ್ಟೋಬರ್ 4 ರಂದು ಗೋಕಾಕ್ ಹಿಲ್ ಗಾರ್ಡನ್ ನಲ್ಲಿ ಹುಟ್ಟುಹಬ್ಬ ಕಾರ್ಯಕ್ರಮಗಳು ವೈಭವದಿಂದ ನಡೆಯಲಿವೆ. ಸಾವಿರಾರು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ರಾಹುಲ್ ಜಾರಕಿಹೊಳಿ ಅವರು 23 ವರ್ಷ ಕಳೆದು 24 ನೇ ವರ್ಷಕ್ಕೆ ಕಾಲಿಡುತ್ತಿರುವ ಸಂಭ್ರಮದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿವೆ. ಬೆಳಗಾವಿ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಅವರಿಗೆ ಶುಭಕೋರುವ ಸಂದೇಶಗಳು ರವಾನೆಯಾಗುತ್ತಿವೆ. ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಅವರ ಅಭಿಮಾನಿಗಳು ಹುಟ್ಟುಹಬ್ಬದ ಪ್ರಯುಕ್ತ ಬೃಹತ್ ಬ್ಯಾನರ್ ಅಳವಡಿಸಿ ಮೆಚ್ಚಿನ ಯುವ ನಾಯಕನಿಗೆ ಶುಭ ಕೋರುತ್ತಿದ್ದಾರೆ.
ಬೆಳಗಾವಿ :
ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಹಾಗೂ ಯಮಕನಮರಡಿ ಕಾಂಗ್ರೆಸ್ ಶಾಸಕ ಸತೀಶ ಜಾರಕಿಹೊಳಿ ಅವರ ಸುಪುತ್ರ ರಾಹುಲ್ ಜಾರಕಿಹೊಳಿ ಅವರಿಗೆ 24 ನೇ ಜನ್ಮದಿನ ಸಂಭ್ರಮ.
ಎರಡು ವರ್ಷದ ಹಿಂದಷ್ಟೇ ರಾಜಕೀಯ ರಣರಂಗಕ್ಕಿಳಿದಿರುವ ರಾಹುಲ್ ಜಾರಕಿಹೊಳಿ ಮುಂದಿನ ದಿನಗಳಲ್ಲಿ ಜಿಲ್ಲೆಯ ಯಾವುದಾದರೊಂದು ವಿಧಾನಸಭಾ ಮತಕ್ಷೇತ್ರದಲ್ಲಿ ಕಣಕ್ಕಿಳಿದು ತಮ್ಮ ವರ್ಚಸ್ಸು ಸಾಬೀತುಪಡಿಸುವ ನಿರೀಕ್ಷೆ ಹುಟ್ಟಿಸಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ ಅವರಲ್ಲಿರುವ ಸಂಘಟನಾ ಶಕ್ತಿ ಹಾಗೂ ನಾಯಕತ್ವ ಗುಣಗಳು ಅವರನ್ನು ಉತ್ತಮ ಜನಪ್ರತಿನಿಧಿಯನ್ನಾಗಿಸುವುದರಲ್ಲಿ ಯಾವುದೇ ಸಂದೇಹ ಇಲ್ಲ ಎಂಬ ವಿಶ್ವಾಸ ಮೂಡಿಸಿದೆ.
ಸರಳ-ಸಜ್ಜನಿಕೆ ಹೊಂದಿರುವ ತಂದೆ ಸತೀಶ ಜಾರಕಿಹೊಳಿ ಅವರಂತೆ ರಾಹುಲ್ ಜಾರಕಿಹೊಳಿಯವರು ಅತ್ಯಂತ ಆದರ್ಶಮಯ-ಪರಿಪೂರ್ಣವಾದ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡು ಬಂದಿದ್ದಾರೆ. ತಮ್ಮ ತಂದೆಯವರು ಹಾಕಿಕೊಟ್ಟ ದಾರಿಯಲ್ಲಿ ಮುನ್ನೆಡೆಯುತ್ತಿರುವ ರಾಹುಲ್ ಜಾರಕಿಹೊಳಿ ಅವರು ಯಮಕನಮರಡಿ ಮತಕ್ಷೇತ್ರದ ಜನತೆಗೆ ಅಚ್ಚುಮೆಚ್ಚಿನ ಯುವ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಗೋಕಾಕ ಮತ್ತು ಯಮಕನಮರಡಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಸತೀಶ ಜಾರಕಿಹೊಳಿ ಅವರ ಸೂಚನೆ ಮೇರೆಗೆ ಕೋವಿಡ್ ಸಂದರ್ಭದಲ್ಲಿ ಸಂತ್ರಸ್ತರ ಮನೆ ಮನೆಗೆ ತೆರಳಿ ಉಚಿತವಾಗಿ ಆಕ್ಸಿಜನ್ ಸಿಲಿಂಡರ್ ಅನ್ನು ನೀಡುವ ಮೂಲಕ ತಮ್ಮಲ್ಲಿರುವ ಮಾನವೀಯ ಅಂತಃಕರಣವನ್ನು ಮೆರೆದಿದ್ದಾರೆ.
ಬಡವರು, ಜನ ಸಾಮಾನ್ಯರ ಜತೆ ಸಾಮಾನ್ಯರಂತೆ ಬೆರೆಯುವ ಅಪರೂಪದ ಗುಣವನ್ನು ರಾಹುಲ್ ಜಾರಕಿಹೊಳಿಯವರು ಮೈಗೂಡಿಸಿಕೊಂಡಿದ್ದಾರೆ. ಜನತೆಯ ಕಷ್ಟಕ್ಕೆ ಸದಾ ಮಿಡಿಯುವ ಯುವ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಯುವಜನರಿಗೆ ಉತ್ಸಾಹಿ, ಸ್ಫೂರ್ತಿದಾಯಕ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ತಂದೆ ತೋರಿದ ಹಾದಿಯಲ್ಲಿ ಜೋತಿಯಂತೆ ಬೆಳಗುವ
ಅಕ್ಕರೆಯೊಳಗೆ ಸಕ್ಕರೆಯಂತೆ ಕರಗುವವನು ಎಂಬ ಮಾತಿನಂತೆ ರಾಹುಲ್ ಜಾರಕಿಹೊಳಿ ಅವರು ಸಕ್ಕರೆ ಜಿಲ್ಲೆಯ ಜನತೆಯ ಅಕ್ಕರೆಯ ಮಗನಾಗಿ ದಿನೇದಿನೆ ಜನಪ್ರಿಯತೆಯ ತುತ್ತತುದಿಗೇರುತ್ತಾ ಸಾಗುತ್ತಿದ್ದು ಯುವ ಜನತೆಯಲ್ಲಿ ಭರವಸೆ ಮೂಡಿಸುತ್ತಿದ್ದಾರೆ. ಈ ಮೂಲಕ ಭವಿಷ್ಯದಲ್ಲಿ ಉತ್ತಮ ನಾಯಕನಾಗುವ ಲಕ್ಷಣವನ್ನು ಈಗಾಗಲೇ ತೋರಿಸಿ ಕೊಟ್ಟಿದ್ದಾರೆ.
ಆಡಳಿತಾರೂಢ ಬಿಜೆಪಿ ಸರಕಾರದ ವಿರುದ್ಧ ಸಮಯ ಸಿಕ್ಕಾಗಲೆಲ್ಲ ಅವರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ರೈತ ವಿರೋಧಿ ಕಾನೂನುಗಳು, ಪೆಟ್ರೋಲ್, ಡೀಸೆಲ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಗೋಕಾಕ ಮತ್ತು ಅರಭಾವಿ ವಿಧಾನಸಭಾ ಮತಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ನಡೆಸಿದ ಪ್ರತಿಭಟನೆ ಸಂದರ್ಭದಲ್ಲಿ ರಾಹುಲ್ ಜಾರಕಿಹೊಳಿಯವರು ಭಾಗವಹಿಸಿ ರೈತರು ಮತ್ತು ಜನಸಾಮಾನ್ಯರ ಪರವಾಗಿ ದೊಡ್ಡ ಧ್ವನಿಯಲ್ಲಿ ಮಾತನಾಡಿ ಗಮನಸೆಳೆದಿದ್ದಾರೆ.
ಯಾರೇ ಕರೆಯಲಿ, ಅಲ್ಲಿಗೆ ಹೋಗಿ ಆ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನರ ಜತೆ ಬೆರೆಯುತ್ತಾರೆ. ವಿವಿಧ ಸಂಘಟನೆಗಳು ಆಹ್ವಾನಿಸುವ ಕರೆಯೋಲೆಗೆ ಅತ್ಯಂತ ಪ್ರೀತಿಯಿಂದ ತೆರಳುವ ಗುಣವನ್ನು ರಾಹುಲ್ ಜಾರಕಿಹೊಳಿಯವರು ಮೈಗೂಡಿಸಿಕೊಂಡಿದ್ದಾರೆ.
ಜನತೆಯ ಪ್ರಾಥಮಿಕ ಅವಶ್ಯಕತೆಗಳಿಗೆ ಏನು ಬೇಕೋ ಅದನ್ನು ತಮ್ಮ ಫೌಂಡೇಶನ್ ಮೂಲಕ ಉಚಿತವಾಗಿ ನೀಡುವ ಔದಾರ್ಯ ಗುಣ ಅವರಲ್ಲಿದೆ.
ಯಮಕನಮರಡಿ ಮತಕ್ಷೇತ್ರದ ಮಣಗುತ್ತಿ ಗ್ರಾಮಕ್ಕೆ ನೂರು ಕುರ್ಚಿಗಳು, ಸೌಂಡ್ ಸಿಸ್ಟಂ, ಹಾಗೂ ಚೌಗಲಾ ಗಲ್ಲಿಯ ಛತ್ರಪತಿ ಶಿವಾಜಿ ಸಂಘದ ಯುವಕರಿಗೆ ವ್ಯಾಯಾಮ ಶಾಲೆಗೆ ಅಗತ್ಯವಾದ ಸಲಕರಣೆಗಳನ್ನು ವಿತರಿಸಿದ್ದಾರೆ.
ಗೋಕಾಕ ವಿಧಾನಸಭಾ ಮತಕ್ಷೇತ್ರದ ಹೂಲಿಕಟ್ಟಿ, ಮಕ್ಕಳಗೇರಿ, ಗೋಕಾಕ, ಹಿರೇನಂದಿ, ಮಮದಾಪುರ, ಕೊಣ್ಣೂರ, ಸಾವಳಗಿ ಗ್ರಾಮದ ಎಲ್ಲಾ ಸಮುದಾಯಗಳ ಜನತೆಗೆ ಅಗತ್ಯವಾದ ಕುರ್ಚಿ ಮತ್ತು ಸೌಂಡ್ ಸಿಸ್ಟಮ್ ಗಳನ್ನು ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ರಾಹುಲ್ ಜಾರಕಿಹೊಳಿ ಅವರು ವಿತರಿಸಿದ್ದಾರೆ. ಯಮಕನಮರಡಿಯ ಜುಮನಾಳ ಗ್ರಾಮದಲ್ಲಿ ಇತ್ತೀಚೆಗೆ ಮಹರ್ಷಿ ವಾಲ್ಮೀಕಿ ಯುವಕರ ಹಾಗೂ ಸಮಾಜ ಸೇವಾ ಸಂಘ ಹಾಗೂ ರಾಹುಲ್ ಅಣ್ಣ ಅಭಿಮಾನಿ ಬಳಗವನ್ನು ಸ್ವತಃ ರಾಹುಲ್ ಜಾರಕಿಹೊಳಿಯವರು ಉದ್ಘಾಟಿಸಿದ್ದಾರೆ.
ಈ ಸಂದರ್ಭದಲ್ಲಿ ಜನರು ನೀಡಿದ ಅಭೂತಪೂರ್ವ ಪ್ರೀತಿಗೆ ಅವರು ಬೆರಗಾಗಿದ್ದಾರೆ. ಸತೀಶ ಜಾರಕಿಹೊಳಿ ಅವರು ಸದಾ ಕ್ರೀಡಾಕೂಟಕ್ಕೆ ಉತ್ತೇಜನ ನೀಡುತ್ತಾ ಬಂದವರು. ಗುಡ್ಡಗಾಡು ಪ್ರದೇಶದ ಯುವಕರ ಪ್ರತಿಭೆಯನ್ನು ಗುರುತಿಸಿ ಅವರನ್ನು ರಾಷ್ಟ್ರ ಮಟ್ಟಕ್ಕೆ ಪರಿಚಯಿಸುವ ಕಾರ್ಯ ದಲ್ಲಿ ಸತೀಶ ಜಾರಕಿಹೊಳಿ ಅವರು ಕಳೆದ ಮೂರು ದಶಕಗಳಿಂದ ಪ್ರಯತ್ನಿಸುತ್ತಿದ್ದಾರೆ. ಗ್ರಾಮೀಣ ಪ್ರತಿಭೆಗಳಿಗೆ ಗುರುತಿಸುವುದಕ್ಕಾಗಿ ಕ್ರೀಡೆಗಳಿಗೆ ಉತ್ತೇಜನ ನೀಡುತ್ತಾ ಬಂದಿದ್ದಾರೆ. ಈ ನಿಟ್ಟಿನಲ್ಲಿ ರಾಹುಲ್ ಜಾರಕಿಹೊಳಿ ಅವರೂ ಸಹ ತಂದೆ ಹಾಕಿಕೊಟ್ಟ ಮಾರ್ಗ ಸಾಗುತ್ತಿರುವುದು ವಿಶೇಷವಾಗಿದೆ.
ಸತೀಶ್ ಜಾರಕಿಹೊಳಿಯವರ ಆದೇಶದ ಮೇರೆಗೆ ವಿಶ್ವಜ್ಯೋತಿ ಶ್ರೀ ಪಂಚಾಕ್ಷರ ನಾಟಕ ಸಂಘಕ್ಕೆ 1ಲಕ್ಷ₹ಪ್ರೋತ್ಸಾಹ ಧನವನ್ನು ನೀಡಿದ್ದಾರೆ. ನಾವು ಚಿಕ್ಕವರಿದ್ದಾಗ ಹೆಚ್ಚು ನಾಟಕಗಳು ಬರುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ನಾಟಕ ನೋಡುವುದು ವಿರಳ. ಆದರೂ ಗೋಕಾಕಿನ ಜನರು ನಾಟಕಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಅವರಿಗೆ ಸಂತಸ ತಂದಿದೆ. ಕಲೆಗೆ ಸಹಕಾರ ಸದಾಕಾಲ ಇರಲಿ, ನಾವೂ ಸಹ ನಿಮ್ಮ ಜತೆ ಸದಾ ಇರುತ್ತೇವೆ ಎಂದು ಅವರು ಕಲೆಯ ಬಗ್ಗೆ ತಮಗಿರುವ ಆಸಕ್ತಿಯನ್ನು ತೋರಿಸಿದ್ದಾರೆ.
ಬೆಳಗಾವಿ ಸಮೀಪದ ದೇಸೂರು ರೈಲ್ವೆ ಗೂಡ್ಸ್ ಶೆಡ್ ನಲ್ಲಿ ಕಾರ್ಮಿಕರ ಕುಂದು ಕೊರತೆಗಳನ್ನು ಆಲಿಸಿದ ಅವರು ಹಿಂದುಳಿದ ವಿದ್ಯಾರ್ಥಿಗಳಿಗೆ ಐಎಎಸ್ ನಿಂದ ಹಿಡಿದು ಸೈನಿಕ ಮತ್ತು ಪೋಲಿಸ್ ಪೇದೆ ತರಬೇತಿಗಳನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ, ಇದರ ಸದುಪಯೋಗ ಪಡೆದು ಕೊಳ್ಳಲು ಹಾಗೂ ಯಾವುದೇ ಆರೋಗ್ಯ ಸಂಬಂಧಿತ ಕೆಲಸ ಕಾರ್ಯಗಳಿದ್ದರೂ ತನ್ನನ್ನು ಸಂಪರ್ಕಿಸಿ ಎಂದು ಅಭಯ ನೀಡಿ ಕಾರ್ಮಿಕರ ಮನಗೆದ್ದಿದ್ದಾರೆ.
ಒಟ್ಟಾರೆ ಗಮನಿಸುವುದಾದರೆ ರಾಹುಲ್ ಜಾರಕಿಹೊಳಿ ಅವರು ತಮ್ಮ ತಂದೆ ಸತೀಶ ಜಾರಕಿಹೊಳಿ ಅವರ ನೆರಳಿನಂತೆ
ಸಾಗುತ್ತಿದ್ದು ಬೆಳಗಾವಿ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ
ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಅತ್ಯಂತ ಸಣ್ಣ ವಯಸ್ಸಿನಲ್ಲೇ ಸೇವಾ ಮನೋಭಾವ ಅಳವಡಿಸಿಕೊಂಡು ಮುನ್ನುಗುತ್ತಿರುವ ರಾಹುಲ್ ಅಣ್ಣಾ ಜಾರಕಿಹೊಳಿಯವರ ಭವಿಷ್ಯ ಉಜ್ವಲವಾಗಿ ಸಾಗಲಿ ಎನ್ನುವುದು ಸಾರ್ವಜನಿಕರ ಆಶಯವಾಗಿದೆ.