ಬೆಳಗಾವಿ :
ಗೌರಿ ಗಣೇಶ ಹಬ್ಬದ ಪ್ರಯುಕ್ತ ಬೆಳಗಾವಿ
ವಿಭಾಗದ ವ್ಯಾಪ್ತಿಯ ಸ್ಥಳಗಳಿಗೆ ಬರುವ ಪ್ರಯಾಣಿಕರ ಜನದಟ್ಟಣೆಯ ಹೆಚ್ಚಳವನ್ನು ಅವಲೋಕಿಸಿ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಬೆಳಗಾವಿಗೆ ಪ್ರಯಾಣಿಸಲು ಸೆ.15 ರಿಂದ ಸೆ.17 ರ ವರೆಗೆ ಹೆಚ್ಚುವರಿ ಸಾರಿಗೆ ವ್ಯವಸ್ಥೆ
ಕಲ್ಪಿಸಲಾಗಿದೆ. ಪ್ರಯಾಣಿಕರಿಗೆ ವಿವಿಧ ಮಾದರಿಯ ಎ.ಸಿ. ಸ್ಲೀಪರ್, ನಾನ್ ಎ.ಸಿ. ಸ್ಲೀಪರ್ ಮತ್ತು ಮಲ್ಟಿ ಎಕ್ಸಲ್ ವೋಲ್ವೊ, ಪ್ರತಿಷ್ಟಿತ ಹೆಚ್ಚುವರಿ ವಾಹನಗಳನ್ನು ಕಾರ್ಯಾಚಣೆಯನ್ನು ಮಾಡಲು ಮತ್ತು ಹಬ್ಬದ ನಂತರ ಸೆ.19 ರಿಂದ ಸೆ.24 ರ ವರೆಗೆ ಮರಳಿ ಬೆಂಗಳೂರಿಗೆ ಪ್ರಯಾಣಿಸಲು ಬೆಳಗಾವಿಯಿಂದ ಹೆಚ್ಚುವರಿ ಸಾರಿಗೆ ಕಾರ್ಯಾಚರಣೆಗೆ ವ್ಯವಸ್ಥೆ ಮಾಡಲಾಗಿದೆ.
ಇ-ಸಾರಿಗೆಗಳಿಗೆ ಇ-ಟಿಕೇಟನ್ನು ಆನ್ ಲೈನ್ ಹಾಗೂ ಮೊಬೈಲ್ ಮುಖಾಂತರ ಅಥವಾ ಸಂಸ್ಥೆಯಿಂದ ನಿಗದಿಪಡಿಸಿರುವ ಬೆಳಗಾವಿ ವಿವಿಧ ಸ್ಥಳದಲ್ಲಿರುವ ಸಂಸ್ಥೆಯ ಅವತಾರ ಬುಕ್ಕಿಂಗ್ ಏಜಂಟರಲ್ಲಿಯೂ ಮುಂಗಡ ಟಿಕೆಟ್ ಕಾಯ್ದಿರಿಸಿಕೊಳ್ಳಬಹುದಾಗಿದೆ ಎಂದು ಬೆಳಗಾವಿ ವಿಭಾಗದ ವಾ.ಕ.ರ.ಸಾ ಸಂಸ್ಥೆಯ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.