ಬೆಳಗಾವಿ :
ವಾಸ್ಕೋಡಗಾಮ ಮತ್ತು ಹಜರತ್ ನಿಜಾಮುದ್ದೀನ್ ಎಕ್ಸ್ಪ್ರೆಸ್ ರೈಲಲ್ಲಿ ಸೋಮವಾರ ಎಂಟು ಜನ ಪ್ರಯಾಣಿಕರಿಗೆ ಪ್ರಜ್ಞೆ ತಪ್ಪುವ ಚಾಕಲೇಟ್, ಕುರ್ಕುರೆ ನೀಡಿ ಪ್ರಜ್ಞೆ ತಪ್ಪಿಸಲಾಗಿತ್ತು. ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವ ಅವರಲ್ಲಿ ಕೇವಲ ಇಬ್ಬರಿಗೆ ಮಾತ್ರ ಪ್ರಜ್ಞೆ ಬಂದಿದ್ದು ಇನ್ನೂ ಆರು ಜನರಿಗೆ 24 ಗಂಟೆ ಕಳೆದರೂ ಪ್ರಜ್ಞೆ ಬಂದಿಲ್ಲ.
ಸೋಮವಾರದಂದು ರೈಲಿನಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಮಧ್ಯಪ್ರದೇಶದ ಎಂಟು ಕೂಲಿಕಾರರನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿತ್ತು. ಸಂಚುಕೋರರು ಇವರ ಮೊಬೈಲ್ ಕಳುವು ಮಾಡಿ ನಾಪತ್ತೆಯಾಗಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಅಶೋಕ್ ಕುಮಾರ್ ಶೆಟ್ಟಿ ಅವರು ಕಲುಷಿತ ಆಹಾರ ಸೇವನೆ ಮಾಡಿದ್ದರೆ ವಾಂತಿಭೇದಿಯಿಂದ ಬಳಲುತ್ತಾರೆ ಹೊರತು ಪ್ರಜ್ಞೆ ತಪ್ಪುವುದಿಲ್ಲ ಬಳಲುತ್ತಿದ್ದರು ಹೊರತು ಪ್ರಜ್ಞೆ ತಪ್ಪುತಿರಲಿಲ್ಲ. ವಿಷಮಿಸಿದ ಪದಾರ್ಥ ಸೇವನೆ ಇಷ್ಟು ದೀರ್ಘಕಾಲದ ಮೂರ್ಛೆವಸ್ಥೆಗೆ ಕಾರಣ ಎಂದು ತಿಳಿಸಿದ್ದಾರೆ.
ಗೋವಾದಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ಇವರು ರಜೆ ಮೇಲೆ ಮಧ್ಯಪ್ರದೇಶದ ಖಂಡ್ವಾಗೆ ಪ್ರಯಾಣಿಸಲು ವಾಸ್ಕೋ- ನಿಜಾಮುದ್ದೀನ್ ರೈಲಿನಲ್ಲಿ ವಾಸ್ಕೋದಿಂದ ಮಧ್ಯಾಹ್ನ ಸೋಮವಾರ ಮಧ್ಯಾನ 3 ಗಂಟೆಗೆ ಪ್ರಯಾಣ ಆರಂಭಿಸಿದ್ದರು. ಸಾಮಾನ್ಯ ಬೋಗಿಯ ಟಿಕೆಟ್ ಪಡೆದ ಇವರಿದ್ದ ಬೋಗಿ ಪ್ರಯಾಣಿಕರಿಂದ ತುಂಬಿ ಹೋಗಿತ್ತು. ಆಗ ಇವರ ಬಳಿ ಇದ್ದ ಕೆಲ ಅಪರಿಚಿತ ಪ್ರಯಾಣಿಕರು ಚಾಕ್ಲೇಟ್ ಮತ್ತು ಪ್ಯಾಕ್ ಮಾಡಿದ್ದ ಕುರ್ಕುರೆ ಮುಂತಾದ ತಿಂಡಿ ನೀಡಿದ್ದಾರೆ. ಅದನ್ನು ಸೇವಿಸಿದ ನಂತರ ಶೌಚಾಲಯಕ್ಕೆ ಹೋಗಿ ಬಂದ ಈ ಕೂಲಿಕಾರ್ಮಿಕರು ಮೂರ್ಛೆ ತಪ್ಪಿದ್ದರು. ಕೆಲ ಪ್ರಯಾಣಿಕರು ಇವರನ್ನು ಎಚ್ಚರಿಸಲು ಪ್ರಯತ್ನಿಸಿದ್ದರು. ಸಹ ಪ್ರಯಾಣಿಕರು ಎಚ್ಚರಿಸಲು ಪ್ರಯತ್ನಿಸಿದ್ದರೂ
ಇವರು ಎದ್ದಿರಲಿಲ್ಲ.
ಮೂರ್ಚಾವಸ್ಥೆಗೆ ತಲುಪಿದ್ದ ಎಂಟು ಜನರಲ್ಲಿ ಇಬ್ಬರು ಮಾತ್ರ ಚೇತರಿಸಿಕೊಂಡಿದ್ದು ಅವರಿಗೆ ವಿಶ್ರಾಂತಿ ಇರುವ ಕಾರಣ ವಿವರಣೆ ಸಾಧ್ಯವಾಗಿಲ್ಲ. ಇನ್ನುಳಿದ ಆರು ಜನ ಇನ್ನೂ ಮೂರ್ಛೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ.