ದೆಹಲಿ :
ಕೇಂದ್ರ ಸರ್ಕಾರ ತನ್ನ ನೌಕರರಿಗೆ ಸದ್ಯದಲ್ಲೇ ತುಟ್ಟಿಭತ್ಯೆ ಹೆಚ್ಚಳ ಮಾಡುವ ಸಾಧ್ಯತೆ ಇದೆ.
ವರದಿಗಳ ಪ್ರಕಾರ ಶೇ. ಮೂರರಷ್ಟು ಡಿಎ ಹೆಚ್ಚಿಸಬಹುದಾಗಿದ್ದು ಈ ವರ್ಷದ ಜುಲೈ 1 ರಿಂದ ಅನ್ವಯ ಆಗುವಂತೆ ಇದು ಜಾರಿಯಾಗುವ ಸಾಧ್ಯತೆ ಇದೆ. ನಂತರ ತುಟ್ಟಿಬತ್ತೆ ಮೂಲವೇತನದ ಶೇಕಡಾ 45ಕ್ಕೆ ತಲುಪಲಿದೆ.
ವ್ಯಕ್ತಿಯೊಬ್ಬರಿಗೆ
ತಿಂಗಳಿಗೆ 50,000 ರೂ. ವೇತನವಾಗಿದ್ದರೆ ಮತ್ತು ಮೂಲವೇತನವಾಗಿ 15,000 ರೂ. ಪಡೆಯುತ್ತಾರೆ. ಈಗ ಡಿಎ ಮೂಲವೇತನದ ಶೇಕಡ 42 ಇರುವ ಕಾರಣ ಡಿಎ ಪ್ರಮಾಣ 6300 ರೂ.ಆಗುತ್ತದೆ. ಶೇಕಡಾ 3 ರಷ್ಟು ಡಿಎ ಹೆಚ್ಚಳ ಆದರೆ ಉದ್ಯೋಗಿ ತಿಂಗಳಿಗೆ 6,750 ರೂ.ಡಿಎ ಪಡೆಯುತ್ತಾನೆ. ಇದರಿಂದ 50,000 ರೂ.ಸಂಬಳ ಪಡೆದು 15000 ರೂ. ಮೂಲವೇತನ ಪಡೆಯುತ್ತಿದ್ದರೆ ಅವರ ಒಟ್ಟಾರೆ ಸಂಬಳ 450 ರೂ.ಏರಲಿದೆ.
ಉದ್ಯೋಗಿಗಳಿಗೆ ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯನ್ನು ಕಾರ್ಮಿಕ ಬ್ಯುರೋ ಪ್ರತಿ ತಿಂಗಳು ಹೊರ ತರುವ ಕೈಗಾರಿಕಾ ಕಾರ್ಮಿಕರ ಇತ್ತೀಚಿನ ಗ್ರಾಹಕ ಬೆಲೆ ಸೂಚ್ಯಂಕ ಆಧಾರದ ಮೇಲೆ ನಿಗದಿಪಡಿಸಲಾಗುತ್ತದೆ.