ಬೆಳಗಾವಿ:
ಕೆ.ಎಲ್.ಎಸ್ ಶಿಕ್ಷಣ ಸಂಸ್ಥೆಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಪ್ರಸಕ್ತ ಸಾಲಿನ ಪ್ರತಿಭಾ ಪುರಸ್ಕಾರ ಮತ್ತು ಜಿಮಖಾನ ಒಕ್ಕೂಟ ಹಾಗೂ ಕ್ರೀಡಾ ವಿವಿಧ ಸಂಘಗಳ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿತ್ತು.
ಬೆಳಗಾವಿ ನಗರ ಪೊಲೀಸ್ ಕಮಿಷನರ್ ಸಿದ್ದರಾಮಪ್ಪ ಮಾತನಾಡಿ, ಇತಿಹಾಸದಲ್ಲಿ ದಾಖಲಾದ ಬಹುಶ್ರೇಷ್ಠ ನಾಯಕರೆಲ್ಲ ಕಾನೂನು ಪದವೀಧರರು ಎಂಬುದು ವಿಶೇಷ. ಧೈರ್ಯವೊಂದಿದ್ದರೆ ಧ್ಯೇಯ ತಾನಾಗಿಯೇ ಸಾಕಾರಗೊಳ್ಳುತ್ತದೆ. ಶ್ರೇಷ್ಠತೆ ಎಂದಿಗೂ ಆಕಸ್ಮಿಕವಲ್ಲ. ಇದು ಉನ್ನತ ಉದ್ದೇಶ, ಪ್ರಾಮಾಣಿಕ ಪ್ರಯತ್ನ ಮತ್ತು ಅದನ್ನು ಬುದ್ಧಿವಂತಿಕೆಯಿಂದ ಕಾರ್ಯಗತಗೊಳಿಸುವಿಕೆಯ ಫಲಿತಾಂಶವಾಗಿದೆ. ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಶುಭ ಹಾರೈಸಿದರು.
ದಕ್ಷಿಣ ಬೆಳಗಾವಿ ಡಿ.ಸಿ.ಪಿ ಸ್ನೇಹಾ ಪಿ.ವಿ ಮಾತನಾಡಿ, ಈ ಕಾಲೇಜಿನ ಶೈಕ್ಷಣಿಕ ಗುಣಮಟ್ಟ ಅತ್ಯುತ್ತಮವಾಗಿದೆ. ಈ ಬಗೆಯ ಉಡಾವಣೆ ಯಂತ್ರ ಲಭಿಸಿದರೆ ವಿದ್ಯಾರ್ಥಿಗಳನ್ನು ಯಶಸ್ಸಿನ ನಭಕ್ಕೆ ಚಿಮ್ಮಿಸಬಹುದು. ಯಶಸ್ಸಿನಲ್ಲಿ ಜ್ಞಾನ ಮುಖ್ಯ ಪಾತ್ರ ವಹಿಸಿದರೆ, ವರ್ತನೆ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಆರ್. ಎಸ್ ಮುತಾಲಿಕ್, ಮಾತನಾಡಿ ಕಾನೂನು ವೃತ್ತಿಯು ಉದಾತ್ತ ವೃತ್ತಿಯಾಗಿದೆ. ಕಕ್ಷಿದಾರರಿಗೆ ನ್ಯಾಯಾಲಯದಿಂದ ನ್ಯಾಯವನ್ನು ತಲುಪಿಸುವುದು ವಕೀಲರ ಪ್ರಮುಖ ಕರ್ತವ್ಯ. ಕಾನೂನು ಕ್ಷೇತ್ರದಲ್ಲಿ ಅವಕಾಶಗಳಿಗೆ ಆಕಾಶವೇ ಮಿತಿ. ಕಾನೂನು ಅಭ್ಯಸಿಸಿದಲ್ಲಿ ನೀವು ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಬಹುದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಶೈಕ್ಷಣಿಕ ಹಾಗೂ ಕ್ರೀಡಾ ವಿಭಾಗದಲ್ಲಿ ಸಾಧನೆಗೈದ ಹಲವು ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪಾರಿತೋಷಕಗಳನ್ನು ನೀಡಲಾಯಿತು. ಪದ್ಮಭೂಷಣ ಪುರಸ್ಕೃತ ಹಾಗೂ ಹಿರಿಯ ನ್ಯಾಯವಾದಿ ಕೆ. ಕೆ. ವೇಣುಗೋಪಾಲ್ ಪ್ರಾಯೋಜಿತ ಎಂ.ಕೆ ನಂಬಿಯಾರ್ ಸ್ಮರಣಾರ್ಥ ನೀಡುವ ಸ್ವರ್ಣ ಪದಕವನ್ನು ವಿದ್ಯಾರ್ಥಿನಿ ರಕ್ಷತಾ ತುಂಗಳ ಮುಡಿಗೇರಿಸಿಕೊಂಡರು.
ತನ್ಮಯಿ ಪ್ರಾರ್ಥಿಸಿ, ಪ್ರೊ. ಪಿ.ಎ ಯಜುರ್ವೇದಿ ಸ್ವಾಗತಿಸಿ, ಅತಿಥಿಗಳಿಗೆ ಕಾಲೇಜಿನ ಸಾಧನೆ ಪರಿಚಯಿಸಿದರು. ವಿದ್ಯಾರ್ಥಿನಿ ಸೋನಾಲಿ ಓಜಾ ಪರಿಚಯಿಸಿದರು. ವಿದ್ಯಾರ್ಥಿ ಪ್ರತಿನಿಧಿ ಕ್ಷಮಾ ಭಟ್ ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು. ತೇಜಸ್ವಿನಿ ಸೊಮಶಾಳೆ ವಂದಿಸಿದರು, ಕೇದಾರ್ ಹಾಗೂ ರುಚಾ ನಿರೂಪಿಸಿದರು.
ಕಾಲೇಜಿನ ಪ್ರಾಚಾರ್ಯ ಡಾ. ಎ. ಎಚ್. ಹವಾಲ್ದಾರ, ಜಿಮಖಾನಾ ಒಕ್ಕೂಟ ಚೇರ್ಮನ್ ಡಾ. ಪ್ರಸನ್ನ ಕುಮಾರ ದರೋಜಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Pratibha Puraskar & Gymkhana valedictory at KLS R. L. Law College Belagavi.
Belagavi: Karnatak Law Society’s Raja Lakhamgouda Law College had organised pratibha puraskar & gymkhana valedictory for students. Siddaramappa IPS, Commissioner of Police
Belagavi City, was the chief guest for the function addressing the students he briefed. All citizens are equal before law he advised Be persistent, don’t lose determination. Obstacles come in the journey. Believe in yourself you can achieve anything. Excellence doesn’t happen by accident but have to put consistent effort. Hard work is the only key to success
P. V. Sneha DCP, Belagavi South (Law and Order) was Guest of honor for the function speaking on this occasion she briefed about college’s great alumni’s and they are contribution to the society, further she advised the students that Knowledge plays the main role but attitude plays the major role in the life. Every field has competition. You have to run with the race, to be success Knowledge plus attitude plus hard work and persistent should be important in your life
R. S. Mutalik Desai, Advocate and member governing council was the President for the function. In this presidential remark he spoke Law profession is a noble Profession. Delivering of justice from the court on behalf of clients is important part of advocates. Sky is the only limit. You can choose any field in the practice of law, there is no shortcut for lawyers profession, attending the senior office is very important, best place to learn is open court, Cross examination is very important to win the case
Student Rakshata Tungal got pure 24-carat gold medal for securing highest marks in Constitution of India subject at University Level. The gold medal is constituted by .Former Attorney-General for India K. K. Venugopal on his father’s name M.K Nambiar
Dr. A. H. Hawaldar, Principal Honoured the Guest of Honour, Assistant Professor P. A. Yajurvedi, welcomed the Chief Guest. Prizes distribution was done to University Ranks holders, Endowment Prizes, University Blue and annual sports prizes winners, Moot Court, Debate Union, Cultural Prize, samiksha chavan proposed vote of thanks. All students and staff where present in great number on this occasion.