ಬೆಂಗಳೂರು :ಬೆಳಗಾವಿ ಜಿಲ್ಲಾಧಿಕಾರಿಯಾಗಿ ಒಂದೂವರೆ ದಶಕದ ಹಿಂದೆ ಕಾರ್ಯ ನಿರ್ವಹಿಸಿ ಅಪಾರ ಜನಪ್ರಿಯತೆ ಗಳಿಸಿದ್ದ ಹಿರಿಯ ಐಎಎಸ್ ಅಧಿಕಾರಿ ಶಾಲಿನಿ ರಜನೀಶ ಇದೀಗ ರಾಜ್ಯದ ಅಭಿವೃದ್ಧಿ ಆಯುಕ್ತರಾಗಿದ್ದಾರೆ. ಅಭಿವೃದ್ಧಿ ಆಯುಕ್ತ ರಮಣ್ ರೆಡ್ಡಿ ನಿವೃತ್ತರಾಗಿರುವ ಹಿನ್ನೆಲೆಯಲ್ಲಿ ಶಾಲಿನಿ ರಜನೀಶ ಅವರನ್ನು ಆ ಹುದ್ದೆಗೆ ನೇಮಕ ಮಾಡಲಾಗಿದೆ.
ಶಾಲಿನಿ ರಜನೀಶ ಅವರು 1989ನೇ ಬ್ಯಾಚಿನ ಕರ್ನಾಟಕ ವೃಂದದ ಐಎಎಸ್ ಅಧಿಕಾರಿ. ಅವರ ಪತಿ ರಜನೀಶ ಗೋಯಲ್ ಒಳಾಡಳಿತ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದಾರೆ. ರಾಜ್ಯ ಸರ್ಕಾರದ ಮುಖ್ಯ ಮುಖ್ಯ ಕಾರ್ಯದರ್ಶಿಯಾಗಿರುವ ವಂದಿತಾ ಶರ್ಮಾ ಅವರ ಅಧಿಕಾರಾವಧಿ ನವೆಂಬರ್ ಗೆ ಪೂರ್ಣವಾಗಲಿದೆ. ಆನಂತರ ಮುಖ್ಯ ಕಾರ್ಯದರ್ಶಿ ಹುದ್ದೆಗೆ ರಜನೀಶ ಗೋಯಲ್ ಅವರ ಹೆಸರು ಕೇಳಿ ಬರುತ್ತಿದೆ.