ಜನ ಜೀವಾಳ ಜಾಲ:<ಬೆಳಗಾವಿ :ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು FSSAI ವತಿಯಿಂದ 2023ರ ಜೂನ್ 23ರಿಂದ 2025ರ ಜೂನ್ 27ರ ಅವಧಿವರೆಗೆ ಈಟ್ ರೈಟ್ ಕ್ಯಾಂಪಸ್ ಗೆ ಚಂದರಗಿ ಕ್ರೀಡಾ ಶಾಲೆಯನ್ನು ಆಯ್ಕೆ ಮಾಡಲಾಗಿದೆ.
ಈಟ್ ರೈಟ್ ಮೂಮೆಂಟ್ ಎಂಬ ವಿಶೇಷ ಕಾರ್ಯಕ್ರಮವನ್ನು ಹಾಕಿಕೊಳ್ಳುವ ಮೂಲಕ ಕೇಂದ್ರ ಸರಕಾರ ಕೆಲ ಯೋಜನೆಗಳನ್ನು ಹಮ್ಮಿಕೊಂಡಿದೆ. ಅದರಂತೆ ಈಗ ಬೆಳಗಾವಿ ಜಿಲ್ಲೆಯಲ್ಲಿ ಎರಡು ಈಟ್ ರೈಟ್ ಕ್ಯಾಂಪಸ್, ಎರಡು ಈಟ್ ರೈಟ್ ಸ್ಕೂಲ್ ಇದೆ. ಬೆಳಗಾವಿ ರೈಲ್ವೆ ನಿಲ್ದಾಣದವನ್ನು ಇಟರೈಟ್ ಸ್ಟೇಷನ್, ಫುಡ್ ಮಾರ್ಕೆಟ್ ಫುಡ್ ಹಬ್ ಗೆ ಕವಾಕಟ್ಟೆ (ಗೋವಾವೇಸ್) ಹಾಗೂ ಈಟ್ ರೈಟ್ ಕ್ಯಾಂಪಸ್ ಗೆ ಚಂದರಗಿ ಕ್ರೀಡಾಶಾಲೆಯನ್ನು ಗುರುತಿಸಲಾಗಿದ್ದು ಇದಕ್ಕೆ ₹ 50,000 ಈಗಾಗಲೇ ತುಂಬಲಾಗಿದೆ.
ಬೆಳಗಾವಿ ಜಿಲ್ಲೆಗೆ ಸಿಕ್ತು ಮೊದಲ ಸರ್ಟಿಫಿಕೇಟ್ :
ಇದೀಗ ಬೆಳಗಾವಿಯ ಚಂದರಗಿ ಕ್ರೀಡಾ ಶಾಲೆಗೆ ಯೋಜನೆಯ ಸರ್ಟಿಫಿಕೇಟ್ ಲಭಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಫ್ ಸಿಸಿಐ ಅಧಿಕಾರಿ ಜಗದೀಶ ಜಿಂಗಿ ಅವರು, ಚಂದರಗಿ ಶಾಲೆಯಲ್ಲಿ ಮೊದಲು ಪ್ರಾಥಮಿಕ ವ್ಯವಸ್ಥೆಗಳನ್ನು ಮಾಡಲು ಬಹಳ ಪರಿಶ್ರಮ ಪಡಬೇಕಾಯಿತು. ಯೋಜನೆಗೆ ನೋಂದಣಿಯೂ ಆಗಿರಲಿಲ್ಲ. ಸಿಬ್ಬಂದಿಗಳ ವೈದ್ಯಕೀಯ ಸರ್ಟಿಫಿಕೇಟ್ ಇರಲಿಲ್ಲ. ಈ ಯೋಜನೆಗೆ ಆಯ್ಕೆ ಆಗಬೇಕಿದ್ದರೆ ಅತ್ಯಂತ ಕಟ್ಟು ನಿಟ್ಟಿನ ಮಾನದಂಡವನ್ನು ಅನುಸರಿಸಬೇಕಿತ್ತು. ಎರಡು ಅಂಕ ಪಡೆಯಬೇಕಿತ್ತು. ಎರಡು ಅಂಕ ಪಡೆದು 98 ಪ್ರತಿಶತ ಪಡೆದರೆ ಮಾತ್ರ ಸರ್ಟಿಫಿಕೇಟ್ ಲಭಿಸುತ್ತದೆ. ಇದೀಗ ನಮ್ಮ ನಿರಂತರ ಪ್ರಯತ್ನದಿಂದ ಈಟ್ ರೈಟ್ ಸರ್ಟಿಫಿಕೇಟ್ ಚಂದರಗಿ ಕ್ರೀಡಾಶಾಲೆಗೆ ಲಭಿಸಿದೆ ಎಂದು ಜಗದೀಶ ಜಿಂಗಿ ತಿಳಿಸಿದ್ದಾರೆ.