ಬೆಳಗಾವಿ :
ಬೆಳಗಾವಿ ಜಿಲ್ಲೆಯಲ್ಲಿರುವ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಕಾರ್ಮಿಕರ ಮಕ್ಕಳಿಗೆ ೨೦೨೩ ೨೪ ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಪಿಯುಸಿ ಫ್ರಥಮ ಮತ್ತು ದ್ವಿತೀಯ ದರ್ಜೆ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಉಚಿತ ಲ್ಯಾಪಟಾಪ್ಗಳನ್ನು ನೀಡಲಾಗುತ್ತಿದೆ.
ಕಾರ್ಮಿಕ ಅಧಿಕಾರಿಗಳು ಉಪ ವಿಭಾಗ ೧ ಮತ್ತು ೨, ಬೆಳಗಾವಿ ಅವರ ವ್ಯಾಪ್ತಿಯಲ್ಲಿ ನೋಂದಣಿಯಾಗಿರುವ ಕಾರ್ಮಿಕರು ಅರ್ಜಿ ನಮೂನೆಯನ್ನು ತಾವು ನೊಂದಣಿ ಮಾಡಿಸಿದ ಕಛೇರಿಗಳಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಸೆ.೧೩ ೨೦೨೩ ರಂದು ಕೊನೆಯ ದಿನವಾಗಿರುತ್ತದೆ, ತದನಂತರ ಬರುವ ಅರ್ಜಿಗಳನ್ನು ಯಾವುದೇಕಾರಣಕ್ಕೂ ಸ್ವೀಕರಿಸುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಅಧಿಕಾರಿಗಳ ಕಛೇರಿ, ಕಾರ್ಮಿಕ ಭವನ, ಐ.ಟಿ.ಐ ಕಾಲೇಜು ಆವರಣ ಮಜಗಾಂವ ರಸ್ತೆ, ಉದ್ಯಮಬಾಗ, ಬೆಳಗಾವಿ-೫೯೦೦೦೮ ಅಥವಾ ದೂರವಾಣಿ ಸಂಖ್ಯೆ: ೯೭೪೦೯೫೭೯೧೧, ೯೮೮೦೯೩೫೯೬೪ ಗೆ ಸಂಪಿರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.