ಮೈಸೂರು :
ವಿಶ್ವ ವಿಖ್ಯಾತ ದಸರಾ ಉತ್ಸವವನ್ನು ಈ ಸಲ ಹಂಸಲೇಖ ಉದ್ಘಾಟಿಸಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ದಸರಾ ಉತ್ಸವವನ್ನು ಹಂಸಲೇಖ ಉದ್ಘಾಟಿಸುತ್ತಾರೆ ಎಂದು ಎಂದು ತಿಳಿಸಿದರು. ಚಾಮುಂಡಿ ದೇವಿಗೆ ಸೀರೆ ಜೊತೆಗೆ ಕನಕಾಂಬರ ಮಲ್ಲಿಗೆ ಮತ್ತು ಗುಲಾಬಿ ಹೂವಿನ ಹಾರ ಸಲ್ಲಿಸಿದರು. ಬಾಳೆಹಣ್ಣು ಮತ್ತು ದಾಳಿಂಬೆ ಹಣ್ಣು ಸಮರ್ಪಿಸಿದರು. ಗ್ಯಾರಂಟಿ ಕಾರ್ಡ್ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಟ್ಟಿಕೊಂಡಿದ್ದ ಹರಕೆಯನ್ನು ತೀರಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಇಂದು ಬೆಳಗ್ಗೆ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದರು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮಹದೇವಪ್ಪ ಮತ್ತಿತರರು, ಶಾಸಕ ಹರೀಶ್ ಗೌಡ, ಅನಿಲ್ ಚಿಕ್ಕಮಾದು, ಎಂಎಲ್ಸಿ ಗಳಾದ ದಿನೇಶ್ ಗೂಳಿಗೌಡ, ಚನ್ನರಾಜ್ ಹಟ್ಟಿಹೊಳಿ ಮತ್ತಿತರರು ಜತೆಗಿದ್ದರು.
ಮಾಧ್ಯಮಗಳೊಂದಿಗ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ನಾಡಿನ 413ನೇ ಮೈಸೂರು ದಸರಾ ಮಹೋತ್ಸವವನ್ನು ಖ್ಯಾತ ಸಾಹಿತಿ ಸಂಗೀತ ನಿರ್ದೇಶಕ, ನಾದಬ್ರಹ್ಮ ಹಂಸಲೇಖ ಅವರು ಉದ್ಘಾಟಿಸಲಿದ್ದಾರೆ. ಇಡೀ ವಿಶ್ವವೇ ಬೆರಗುಗಣ್ಣುಗಳಿಂದ ನೋಡುವ ಮೈಸೂರಿನ ದಸರಾವನ್ನು ಈ ಈ ಬಾರಿ ಅದ್ಧೂರಿಯಾಗಿ ಮಾಡಲಾಗುತ್ತದೆ ಎಂದು ತಿಳಿಸಿದರು.
ಅಕ್ಟೋಬರ್ 15ರ ಬೆಳಗ್ಗೆ 10.15ರಿಂದ 10.30ರ ನಡುವಿನ ಮುಹೂರ್ತದಲ್ಲಿ ಮೈಸೂರು ದಸರಾವನ್ನು ಉದ್ಘಾಟನೆ ಮಾಡಲಾಗುತ್ತದೆ. ಕಳೆದ ಬಾರಿಯ 412ನೇ ದಸರಾವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟನೆ ಮಾಡಿದ್ದರು. ಈ ಬಾರಿ ಈ ಗೌರವ ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ಒಲಿದು ಬಂದಿದೆ.