ಬೆಳಗಾವಿ :
ಮಾರ್ಕೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಸಮರ್ಥ
ನಗರದ ಒಂದು ಮನೆಯಲ್ಲಿ ಯಾರೋ ಕಳ್ಳರು ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ಕಳ್ಳತನ
ಮಾಡಿಕೊಂಡು ಹೋದ ಬಗ್ಗೆ ಕೆಲ ತಿಂಗಳ ಹಿಂದೆ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಎನ್.ವಿ. ಬರಮನಿ ಎಸಿಪಿ ಮಾರ್ಕೆಟ್
ಉಪವಿಭಾಗ ಬೆಳಗಾವಿ ರವರ ನೇತೃತ್ವದಲ್ಲಿ ಮಹಾಂತೇಶ ಧಾಮನ್ನವರ ಹಾಗೂ ಅವರ ತಂಡ ಮಾಹಿತಿ
ಕಲೆ ಹಾಕಿ ಆರೋಪಿತ
ಯಾಸೀನ ಹಾಸಿಮ ಶೇಖ (೨೩) ವರ್ಷ ಸಾ: ನಿಪ್ಪಾಣಿ ಜಿ: ಬೆಳಗಾವಿ
ಈತನನ್ನು ದಸ್ತಗಿರಿ ಮಾಡಿ ಈತನಿಂದ ಸುಮಾರು ೧೦ ಲಕ್ಷ ಮೌಲ್ಯದ ೨೩೧ ಗ್ರಾಂ ಬಂಗಾರ ಮತ್ತು 140 ಗ್ರಾಂ ಬೆಳ್ಳಿಯ ಆಭರಣ ಜಪ್ತುಪಡಿಸಿಕೊಂಡು ಆತನ ವಿರುದ್ಧ ಕಾನೂನು ಕ್ರಮ ಜರುಗಿಸಿ, ತನಿಖೆ
ಮುಂದುವರಿಸಲಾಗಿದೆ.
ಈ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಶ್ರಮಿಸಿದ ಮಾರ್ಕೆಟ್ ಠಾಣೆಯ ಪಿಐ ಮಹಾಂತೇಶ
ಧಾಮಣ್ಣವರ, ವಿಠ್ಠಲ ಹಾವನ್ನವರ ಪಿಎಸ್ಐ ಮಹಾಂತೇಶ ಮಠಪತಿ ಪಿಎಸ್ಐ ಹಾಗೂ ಶರತಕುಮಾರ
ಖಾನಾಪುರೆ, ವಿಶ್ವನಾಥ ಮಾಳಗಿ, ಶಂಕರ ಕುಗಟೊಳ್ಳಿ, ಖಾದರಸಾಬ ಖಾನಮ್ಮನವರ, ಲಕ್ಷ್ಮಣ ಕಡೋಲ್ಕರ,
ಆಶೀರ್ ಜಮಾದಾರ, ಶಿವಾನಂದ ಚಂಡಕಿ, ವಿನೋದ ಜಗದಾಳೆ, ಶಿವಪ್ಪಾ ತೇಲಿ, ಸಂಜು ಪಾತ್ರೋಟ ಅವರ
ಕಾರ್ಯವನ್ನು ಪೊಲೀಸ್ ಆಯುಕ್ತರು ಉಪ-ಪೊಲೀಸ್ ಆಯುಕ್ತರು (ಕಾ&ಸು) ಅಭಿನಂದಿಸಿದ್ದಾರೆ.