ಶಿಬಿರಾರ್ಥಿಗಳು ಪೊಲೀಸರಂತೆ ಶಿಸ್ತುಬದ್ಧಿನಿಂದ ತರಬೇತಿ ಪಡೆಯಬೇಕು; DCP ಸ್ನೇಹಾ..!
ಬೆಳಗಾವಿ : ಕೊರೋನಾ ಬಂದ ಮೇಲೆ ಸುಮಾರು ಎರಡೂವರೆ ವರ್ಷಗಳ ನಂತರ ಬೆಳಗಾವಿ ನಗರ ಪೊಲೀಸ್ ಕಮಿಷನರೇಟ್ ವತಿಯಿಂದ ಆರಂಭವಾಗಿರುವ ನಾಗರಿಕ ಬಂದೂಕು ತರಬೇತಿಯ ಎರಡನೇ ತಂಡದ ಶಿಬಿರಕ್ಕೆ ಇಂದು (ಶನಿವಾರ ಆ 19) ಪೊಲೀಸ್ ಸಮುದಾಯ ಭವನದಲ್ಲಿ ಚಾಲನೆ ನೀಡಲಾಯಿತು.
ಪೊಲೀಸ್ ಆಯುಕ್ತ ಸಿದ್ದರಾಮಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಸಿಪಿ ಶೇಖರ್ , ಡಿಸಿಪಿ (ಸಂಚಾರ & ಕ್ರೈಂ) ಸ್ನೇಹಾ ಪಿ ವಿ ಮಾರ್ಗದರ್ಶನದಲ್ಲಿ ಡಿಸಿಪಿ ಶಂಕರಗೌಡ ಪಾಟೀಲ ನೇತೃತ್ವದಲ್ಲಿ ಪೊಲೀಸ್ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ತರಬೇತಿ ಶಿಬಿರಕ್ಕೆ ಚಾಲನೆ ನೀಡಿದರು.
ಈ ಬಾರಿ ನಾಗರಿಕ ಬಂದೂಕು ತರಬೇತಿ ಶಿಬಿರಕ್ಕೆ ಸುಮಾರು 300 ಕ್ಕೂ ಹೆಚ್ಚು ಆಸಕ್ತರು ಅರ್ಜಿ ಸಲ್ಲಿಸಿದ್ದಾರೆ. ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ 70 ಜನರ ಒಂದೊಂದು ತಂಡ ಮಾಡಿ ತರಬೇತಿ ನೀಡಲಾಗುತ್ತಿದೆ. ಇಗಾಗಲೇ ಮೊದಲನೇ ತಂಡದ ತರಬೇತಿ ಶಿಬಿರ ಉತ್ತಮ ರೀತಿಯಲ್ಲಿ ಯಶಸ್ವಿಯಾಗಿ ತೇರ್ಗಡೆಯಾಗಿದೆ. ಈ ತರಬೇತಿ ಪಡೆಯುವ ಪ್ರತಿ ಅಭ್ಯರ್ಥಿಯ ಅಪರಾಧ ಹಿನ್ನಲೆಗಳನ್ನು ಪರಿಶೀಲನೆ ಮಾಡಿ ಆಯ್ಕೆಮಾಡಲಾಗಿದೆ. ಹೀಗಾಗಿ ಒಳ್ಳೆಯ ನಾಗರಿಕರಿಗೆ ಮಾತ್ರ ಇಂತಹ ಶಿಬಿರದ ಅವಕಾಶ ದೊರೆತಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕು. ಮತ್ತು ಭವಿಷ್ಯದಲ್ಲಿ ತುರ್ತು ಪರಿಸ್ಥಿತಿ ಸಂದರ್ಭಗಳಲ್ಲಿ ಪೊಲೀಸರಿಗೆ ಬೆನ್ನೆಲುಬಾಗಿ ನಿಲ್ಲುವಂತೆ ಪೊಲೀಸ್ ಆಯುಕ್ತ ಹಾಗೂ ಡಿಸಿಪಿ ಶೇಖರ ಶಿಬಿರಾರ್ಥಿಗಳಿಗೆ ಮನವಿ ಮಾಡಿದರು.
ಡಿಸಿಪಿ ಸ್ನೇಹಾ ಪಿ ವಿ ಮಾತನಾಡಿ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆಗೆ ಮಹಿಳೆಯರಿಂದ ಹೆಚ್ಚಿನ ಕೊಡುಗೆ ಸಿಗಲಿದೆ. ಅದೆ ರೀತಿ ತರಬೇತಿ ಪಡೆಯುವ ಎಲ್ಲ ಶಿಬಿರಾರ್ಥಿಗಳು 7 ದಿನಗಳ ಕಾಲ ನಡೆಯಲಿರುವ ಶಿಬಿರದಲ್ಲಿ ತಾವು ಪೊಲೀಸರಂತೆ ಭಾವಿಸಿಕೊಂಡು ಶಿಸ್ತುಬದ್ಧವಾಗಿ ತರಬೇತಿ ಪಡೆಯುವಂತೆ ಹೇಳಿದರು.
ಈ ಸಂದರ್ಭದಲ್ಲಿ ಎಸಿಪಿ ಸದಾಶಿವ ಕಟ್ಟಿಮನಿ, ಪಿಐ ಸಿಬ್ಬಂದಿ ಮಂಜುನಾಥ ಭಜಂತ್ರಿ, ಭರತ ಸೇರಿದಂತೆ ಆಯುಧ ವಿಭಾಗದ ಆಯುಕ್ತ ಕಛೇರಿಯ ಸಿಬ್ಬಂದಿಗಳು ಹಾಗೂ 60 ಕ್ಕೂ ಹೆಚ್ಚು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.