ಬೆಳಗಾವಿ :ಮಹಿಳೆಯೊಬ್ಬಳು ತನ್ನ ಪತಿಗೆ ಉಪ್ಪಿಟ್ಟಿನಲ್ಲಿ ವಿಷ ಹಾಕಿ ಕೊಲೆ ಮಾಡಲು ಪ್ರಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.ಸವದತ್ತಿ ತಾಲೂಕು ಗೋರಬಾಳ ಗ್ರಾಮದ ನಿಂಗಪ್ಪ ಫಕೀರಪ್ಪ ಹಮಾನಿ (35) ಅವರನ್ನು ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅವರ ಪತ್ನಿ ಸಾವಕ್ಕ (32)ಮತ್ತು ಅವರ ಸಹೋದರ ಫಕೀರಪ್ಪ ಲಕ್ಷ್ಮಣ ಸಿಂದೋಗಿ (30) ಆರೋಪಿಗಳಾಗಿದ್ದಾರೆ.ವಿಷಪೂರಿತ ಉಪ್ಪಿಟ್ಟು ತಿಂದ ನಿಂಗಪ್ಪ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಗಸ್ಟ್ 11ರಂದು ಘಟನೆ ನಡೆದಿದೆ. ಅಂದು ಬೆಳಗ್ಗೆ ಸಾವಕ್ಕ ಪತಿ ನಿಂಗಪ್ಪ ಅವರಿಗೆ ಉಪ್ಪಿಟ್ಟು ನೀಡಿ ತಿನ್ನಲು ಹೇಳಿದ್ದರು. ಅದನ್ನು ತಿಂದ ನಿಂಗಪ್ಪ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದಾರೆ. ಉಪ್ಪಿಟ್ಟು ತಿಂದ ನಾಯಿ ಮತ್ತು ಬೆಕ್ಕು ಸಹ ಸತ್ತು ಹೋಗಿವೆ. ನಿಂಗಪ್ಪ ಅವರ ತಂದೆ ಫಕೀರಪ್ಪ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಎರಡು ಎಕರೆ ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುವ ಉದ್ದೇಶದಿಂದ ಮಹಿಳೆ ಈ ಕೃತ್ಯ ಎಸಗಿರುವುದಾಗಿ ಗೊತ್ತಾಗಿದೆ.