ಮೂಡಲಗಿ :
ನಗರದಲ್ಲಿ ಹೆಚ್ಚಿದ ಹಂದಿಗಳಿಂದ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ದಿನೇ ದಿನೇ ನಗರದ ತುಂಬೆಲ್ಲಾ ಬೇಕಾಬಿಟ್ಟಿಯಾಗಿ ಎಲ್ಲೆಂದರಲ್ಲಿ ಹಂದಿಗಳು ಓಡಾಡುತ್ತಿವೆ ಇದರಿಂದ ಅನೇಕ ಜನರು ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ಮಧ್ಯದಲ್ಲಿ ಬಂದು ಬೈಕ ಸವಾರರು ಕಾಲು ಮುರಿದುಕೊಂಡ ಉದಾಹರಣೆ ಅಂತೂ ಸಾಕಷ್ಟು ಇವೆ..
ಅಧಿಕಾರಿಗಳಿಗೆ ಸಾರ್ವಜನಿಕರು ಒತ್ತಡ ಹಾಕಿದಾಗ ಮಾತ್ರ ಕಾಟಾಚಾರಕ್ಕೆ ಸಾಕಾಣಿಕೆದಾರರಿಗೆ ನೊಟೀಸ್ ನೀಡಿ ಶೀಘ್ರವಾಗಿ ಹಂದಿಗಳನ್ನು ಸ್ಥಳಾಂತರ ಮಾಡುವಂತೆ ನೊಟೀಸ್ ನೀಡುತ್ತಾರೆ. ಆದ್ರೆ ಮುಂದೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಅಂತ ಸಾರ್ವಜನಿಕರು ಅಧಿಕಾರಿಗಳ ವಿರುದ್ದ ಹಾಗೂ ಪುರಸಭೆ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಆದಷ್ಟು ಬೇಗನೆ ಪುರಸಭೆ ಅಧಿಕಾರಿಗಳು ಇದಕ್ಕೆ ಪರಿಹಾರ ಮಾಡಿ ಹಂದಿಗಳನ್ನು ವಿಲೇವಾರಿ ಮಾಡದಿದ್ದಲ್ಲಿ ಪುರಸಭೆ ಆವರಣದಲ್ಲಿ ಹಂದಿಗಳನ್ನು ಬಿಟ್ಟು ಪ್ರತಿಭಟಿಸುವದಾಗಿ ಸಾರ್ವಜನಿಕರು ಎಚ್ಚರಿಸಿದ್ದಾರೆ.