ಬೆಳಗಾವಿ :
ಬೆಳಗಾವಿಯ ಬಬನ್ ಬೋಬೆ ಮಿತ್ರ ಮಂಡಳದ ವತಿಯಿಂದ ವಿಮಲ್ ಫೌಂಡೇಶನ್ ದತ್ತಿ ಸಂಸ್ಥೆಯ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ 76 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕಿರುಪುಸ್ತಕ ಹಾಗೂ ತ್ರಿವರ್ಣ ಧ್ವಜಗಳನ್ನು ವಿತರಿಸಲಾಯಿತು.
ವಿಮಲ್ ಫೌಂಡೇಶನ್ ಅಧ್ಯಕ್ಷ, ಸಕಲ ಮರಾಠಾ ಸಮಾಜದ ಮುಖಂಡ ಹಾಗೂ ಬಿಜೆಪಿ ರಾಜ್ಯ ಒಬಿಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಕಿರಣ ಜಾಧವ ಅವರು ವಿದ್ಯಾರ್ಥಿಗಳಿಗೆ ಕಿರುಪುಸ್ತಕ ಮತ್ತು ತ್ರಿವರ್ಣ ಧ್ವಜಗಳನ್ನು ವಿತರಿಸಿ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾವಂತರಾಗಿ, ಸಂಸ್ಕಾರವಂತರಾಗಿ ಭಾರತದ ಶ್ರೇಯೋಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಮನವಿ ಮಾಡಿದರು.
ಬಬನ್ ಬೋಬೆ ಗೆಳೆಯರ ಬಳಗದ ಪದಾಧಿಕಾರಿಗಳು, ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.