ಬೆಳಗಾವಿ :
ನಗರದ ಕೆ.ಎಲ್.ಇ. ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ (ಸ್ವಾಯತ್ತ) ಮಹಾವಿದ್ಯಾಲಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಯುವ ರೆಡ್ಕ್ರಾಸ್ ಘಟಕ ಹಾಗೂ ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಬೆಳಗಾವಿ ಜಿಲ್ಲಾ ಘಟಕದ ಸಹಯೋಗದಲ್ಲಿ “ಅಂತರರಾಷ್ಟ್ರೀಯ ಜಿನೇವಾ ಕನ್ವೆನ್ಶನ್ ದಿನ-2023 ರ ಪ್ರಯುಕ್ತ “ಭಿತ್ತಿಪತ್ರ ಪ್ರಸ್ತುತಿ” ಸ್ಪರ್ಧೆಯನ್ನು ಶನಿವಾರ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ಸರ್. ಸಿ.ವಿ. ರಾಮನ್ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕ ಹಾಗೂ ಕೆ.ಎಲ್.ಇ. ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿದ್ಯಾಶಂಕರ ಎಸ್. ಆಗಮಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಮಾಜಿ ರಾಜ್ಯಾಧ್ಯಕ್ಷ ಹಾಗೂ ಆಯ್ಆರ್ಸಿಎಸ್ನ ರಾಜ್ಯ ಪ್ರತಿನಿಧಿ ಡಾ. ಎಸ್.ಬಿ. ಕುಲಕರ್ಣಿ ಆಗಮಿಸಿ ಜಿನೇವಾ ಸಮಾವೇಶದ ಇತಿಹಾಸ ಮತ್ತು ರೆಡ್ಕ್ರಾಸ್ ಸ್ಥಾಪನೆಯ ಹಿನ್ನೆಲೆಯನ್ನು ವಿವರಿಸುತ್ತ ಮಾನವ ಬುದ್ಧಿವಂತನಾಗಿ ಬದುಕುವುದಕ್ಕಿಂತ ಮಾನವೀಯತೆಯುಳ್ಳವನಾಗಿ ಬದುಕುವುದು ಮುಖ್ಯ ಎಂಬುದನ್ನು ಅರ್ಥವತ್ತಾಗಿ ವಿವರಿಸಿದರು.
ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷ ಲಿಂಗೌಡ ವಿ. ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಸೌಮ್ಯ ಮತ್ತು ಅದಿತಿ ಪ್ರಾರ್ಥಿಸಿದರು. ಪ್ರಾಚಾರ್ಯೆ ಡಾ.ಜೆ.ಎಸ್. ಕವಳೇಕರ ಸ್ವಾಗತಿಸಿದರು. ಕಾರ್ಯಕ್ರಮಾಧಿಕಾರಿ ಮೇಘಾ ಗಲಗಲಿ ಪರಿಚಯಿಸಿದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಯುವ ರೆಡ್ಕ್ರಾಸ್ ಘಟಕದ ಅಧಿಕಾರಿ ಡಾ. ಸುಮಂತ್ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಚ್. ಎನ್. ಬನ್ನೂರ ವಂದಿಸಿದರು. ವಿದ್ಯಾರ್ಥಿನಿ ರೋಜ್ ಮೊಂಟೆರಿಯೊ ನಿರೂಪಿಸಿದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ವಿಜಯ ಎಫ್. ನಾಗಣ್ಣವರ ಹಾಗೂ ಕುಲಸಚಿವೆ ರಾಜಶ್ರೀ ಜೈನಾಪುರ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನೇರವೇರಿತು. ಕಾರ್ಯಕ್ರಮದಲ್ಲಿ ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಸ್ಪರ್ಧೆಯಲ್ಲಿ ಲಿಂಗರಾಜ ಮಹಾವಿದ್ಯಾಲಯದ ಸಂಗೀತ ತಕ್ಕಿ ಪ್ರಥಮ ಸ್ಥಾನ, ಸ್ಫೂರ್ತಿ ಪಾಟೀಲ ದ್ವಿತೀಯ ಸ್ಥಾನ ಹಾಗೂ ಶಿ.ಶಿ ಬಸವನಾಳ ಬಿಇಡಿ ಮಹಾವಿದ್ಯಾಲಯದ ಚೈತ್ರ ಹಂಚಿನಮನಿ ಮತ್ತು ಖಾನಾಪುರ ಕೆ.ಎಲ್.ಇ. ಸಂಸ್ಥೆಯ ಬಿಸಿಎ ಮಹಾವಿದ್ಯಾಲಯದ ಅರ್ಕಾಂಜ್ ಫರ್ನಾಂಡಿಸ್ ತೃತೀಯ ಸ್ಥಾನವನ್ನು ಪಡೆದರು. ಸ್ಪರ್ಧೆಯಲ್ಲಿ 19 ವಿದ್ಯಾರ್ಥಿಗಳು ಭಾಗವಹಿಸಿದ್ದರು.