ಬೆಳಗಾವಿ :
ದಿನಾಂಕ: 11-07-2023 ರಂದು ಬೆಳಗಾವಿ ನಗರದ ಮಾರ್ಕೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಹಳೆ ಬಾಜಿ ಮಾರ್ಕೇಟ್ ಕಡೆಗೆ ಹೋಗುವ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರ ಬಂಗಾರದ ಮಂಗಳಸೂತ್ರವನ್ನು ಜಬರಿಯಿಂದ ಕಿತ್ತುಕೊಂಡು ಹೋದ ಬಗ್ಗೆ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಕೊಳ್ಳಲಾಗಿತ್ತು.
ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಎನ್ ವಿ ಭರಮನಿ, ಎಸಿಪಿ ಮಾರ್ಕೇಟ್ ಉಪವಿಭಾಗ ಬೆಳಗಾವಿ ರವರ ನೇತೃತ್ವದಲ್ಲಿ ಮಹಾಂತೇಶ ಕೆ. ಧಾಮಣ್ಣವರ, ಪಿ.ಐ ಮಾರ್ಕೆಟ್ ರವರ ತಂಡ ಈ ಕೆಳಗಿನ 03 ಜನ ಆರೋಪಿತರನ್ನು ದಸ್ತಗಿರಿ ಮಾಡಿದೆ.
ದಸ್ತಗೀರ ಲಾಲಸಾಬ ಜಮಾದಾರ, (28), ಸಾ: ಶಿವಾಜಿ ನಗರ, ಬೆಳಗಾವಿ, ಸಂದೇಶ ಕಿರಣ ಜಾಧವ, (25) ಸಾ: ಶಿವಾಜಿ ನಗರ, ಬೆಳಗಾವಿ, ಆಸೀಫ ಖ್ವಾಜಾಸಾಬ ಯಳ್ಳೂರಕರ, (33) ಸಾ: ಶಿವಾಜಿ ನಗರ, ಬೆಳಗಾವಿ ಬಂಧಿತರು.
ಅವರಿಂದ ಕಳುವಾದ 1,60,000/-ರೂಪಾಯಿ ಮೌಲ್ಯದ 27 ಗ್ರಾಂ. 17ಮೀ. ತೂಕದ ಬಂಗಾರದ ಮಂಗಳಸೂತ್ರ ವಶಪಡಿಸಿಕೊಂಡು ಆರೋಪಿತರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದು, ತನಿಖೆ ಮುಂದುವರೆಸಲಾಗಿದೆ.
ಆರೋಪಿತರನ್ನು ಪತ್ತೆ ಮಾಡುವಲ್ಲಿ ಶ್ರಮಿಸಿದ ಮಾರ್ಕೇಟ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯದಕ್ಷತೆಯನ್ನು ಪೊಲೀಸ್ ಆಯುಕ್ತರು ಉಪ-ಪೊಲೀಸ್ ಆಯುಕ್ತರು (ಕಾ&ಸು) ಹಾಗೂ (ಅ&ಸಂ) ರವರು ಶ್ಲಾಘಿಸಿರುತ್ತಾರೆ.