ಬೆಳಗಾವಿ :
ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಪ್ರದೇಶ ಸಭಾ ಮತ್ತು ವಾರ್ಡ್ ಸಮಿತಿಗಳನ್ನು ರಚಿಸುವ ಸಂಬಂಧ ರೂಪಿಸಲಾಗಿರುವ ಅಧಿನಿಯಮದನ್ವಯ ಹಾಗೂ ಕರ್ನಾಟಕ ಪೌರ ನಿಗಮಗಳ ಅಧಿನಿಯಮ ೧೯೭೬ರ ಕಲಂ ೧೩ ರನ್ವಯ ಷರತ್ತುಗಳನ್ನೊಳಗೊಂಡು ಪ್ರತಿಯೊಂದು ವಾರ್ಡ್ಗಳಿಗೆ (ಒಟ್ಟು ೫೮ ವಾರ್ಡ್ಗಳಿಗೆ) ವಾರ್ಡ್ ಸಮಿತಿ ರಚಿಸುವ ಕುರಿತು ಆಸಕ್ತ ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸಿದೆ
ಆಯಾ ಸಂಬಂಧಿಸಿದ ವಾರ್ಡಿನ ನಗರ ಸೇವಕರು ಸದರಿ ವಾರ್ಡ್ ಕಮೀಟಿಯ ಅಧ್ಯಕ್ಷರಾಗಿರುತ್ತಾರೆ, ಇತರ ಹತ್ತು ಸದಸ್ಯರು ಮಹಾನಗರ ಪಾಲಿಕೆಯಿಂದ ನಾಮ ನಿರ್ದೇಶಿತರಾಗಿರತಕ್ಕದ್ದು. ಅವರ ಪೈಕಿ,
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದ ಇಬ್ಬರು ಸದಸ್ಯರು, ಮೂರು ಜನ ಮಹಿಳಾ ಸದಸ್ಯರು, ಷರತ್ತಿಗೊಳಪಟ್ಟು ಆಯಾ ವಾರ್ಡಿನ ರಹವಾಸಿ ಸಂಘಕ್ಕೆ ಸಂಬಂಧಿಸಿದ ಇಬ್ಬರು ಸದಸ್ಯರು, ಸದರಿ ರಹಿವಾಸಿ ಸಂಘದ ಕಾರ್ಯಾಲಯವು ವಾರ್ಡಿನ ವ್ಯಾಪ್ತಿಯಲ್ಲಿರಬೇಕು, ಅದು ಬಹುತೇಕ ನಿವಾಸಿಗಳು ಅಥವಾ ಪೌರಸಂಬAಧಿ ಗುಂಪು ಅಥವಾ ವಾಣಿಜ್ಯ ಗುಂಪು ಅಥವಾ ಕೈಗಾರಿಕಾ ಗುಂಪುಗಳನ್ನು ಪ್ರತಿನಿಧಿಸುತ್ತಿರತಕ್ಕದ್ದು, ಅದು ಕನಿಷ್ಠ ಮೂರು ವರ್ಷ ಕಾಲ ತನ್ನ ಕಾರ್ಯಚಟುವಟಿಕೆಯಲ್ಲಿ ನಿರತವಾಗಿರತಕ್ಕದ್ದು
ಅದು ಯಾವುದೇ ಹೆಸರಿನಿಂದ ನೋಂದಾಯಿಸಲ್ಪಟ್ಟಿದ್ದು, ಧರ್ಮದರ್ಶಿತ್ವದ ಮಟ್ಟದಲ್ಲಿ ಕಾರ್ಯ ನಿರ್ವಹಿಸುವಂತಹ ವ್ಯಕ್ತಿಗಳನ್ನು ಒಳಗೊಂಡಿರತಕ್ಕದ್ದು.
ಮಹಾನಗರ ಪಾಲಿಕೆ ಸದಸ್ಯನಾಗಿ ಆಯ್ಕೆಯಾಗಲು ಅನರ್ಹನಾಗಿರತಕ್ಕ ವ್ಯಕ್ತಿಯು ವಾರ್ಡ ಸಮಿತಿಯ ಸದಸ್ಯನಾಗಿ ನಾಮನಿರ್ದೇಶಿತನಾಗತಕ್ಕದ್ದಲ್ಲ (ಮೂರು ಸದಸ್ಯರು),ಅರ್ಜಿ ನಮೂನೆಯನ್ನು ಮಹಾನಗರ ಪಾಲಿಕೆಯ ಪರಿಷತ್ ಶಾಖೆಯಿಂದ ಕಚೇರಿ ಸಮಯದಲ್ಲಿ ಪಡೆಯತಕ್ಕದ್ದು ಅಥವಾ ಪಾಲಿಕೆಯ ವೆಬ್ಸೈಟ್ ದಲ್ಲಿ ಇತ್ತೀಚಿನ ಸುದ್ದಿಗಳು ಕಾಲಂನಲ್ಲಿ ಡೌನಲೋಡಮಾಡಿಕೊಳ್ಳಬಹುದಾಗಿದೆ.
ಜಾತಿ ಪ್ರಮಾಣ ಪತ್ರ (ಮೀಸಲಾತಿ ಕ್ಲೇಮ್ ಮಾಡಿದ್ದಲ್ಲಿ ತಹಶೀಲ್ದಾರರವರಿಂದ ಪಡೆದ ಪ್ರಮಾಣ ಪತ್ರ ಲಗತ್ತಿಸುವುದು),ಆರ್ಡಬ್ಲೂಎ/ಎನ್ಜಿಓ ವರ್ಗದಲ್ಲಿ ಮೀಸಲಾತಿ ಕೋರಿದ್ದಲ್ಲಿ ಅಧ್ಯಕ್ಷರು/ಸಂಘ-ಸಂಸ್ಥೆಯ ಕಾರ್ಯದರ್ಶಿಯವರಿಂದ ಶಿಫಾರಸ್ಸು ಪತ್ರ ಲಗತ್ತಿಸಬೇಕು, ವಿವಿಧ ಕ್ಷೇತ್ರಗಳಲ್ಲಿ ಅನುಭವ ಹೊಂದಿ ಬಗ್ಗೆ ಪ್ರಶಸ್ತಿ/ಮನ್ನಣೆ ಪಡೆದಿರುವ ಕುರಿತು ಸಮರ್ಥಿಸುವಂತಹ ದಾಖಲೆಗಳು, ವರ್ಗ ಆಧಾರಿತ ದಾಖಲೆಗಳು ಆಸಕ್ತಿ/ಅನುಭವ ಹೊಂದಿದ ಕ್ಷೇತ್ರಗಳಿಂದ ಪ್ರಮಾಣ ಪತ್ರ ಆ. ೨೯ ೨೦೨೩ ರೊಳಗಾಗಿ ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಯಲ್ಲಿರುವ ಪರಿಷತ್ ಶಾಖೆಯಲ್ಲಿ ಸಲ್ಲಿಸಬಹುದಾಗಿದೆ, ವಾರ್ಡ್ ಸಮಿತಿ ಸದಸ್ಯನಾಗಿ ಅರ್ಜಿ ಸಲ್ಲಿಸುವವರು ಸಂಬಂಧಪಟ್ಟ ವಾರ್ಡ್ ವ್ಯಾಪ್ತಿಯಲ್ಲಿ ಮತದಾರನಾಗಿ ನೋಂದಾಯಿತನಾಗಿರಬೇಕು, ಚುನಾವಣಾ ಗುರುತಿನ ಚೀಟಿಯ ಪ್ರತಿ ಲಗತ್ತಿಸಬೇಕು,ಆಧಾರ್ ಕಾರ್ಡ್ನ ನಕಲು ಪ್ರತಿ ಲಗತ್ತಿಸಬೇಕು ಎಂದು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.