ಬೆಳಗಾವಿ :
ಎಫ್ ಎಸ್ ಎಸ್ ಎ ಐ ಅಧಿಕಾರಿ ಜಗದೀಶ ಜಿಂಗಿ ಅವರು ಅನಿರೀಕ್ಷಿತವಾಗಿ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅತ್ಯಂತ ಕಳಪೆ ಗುಣಮಟ್ಟದ ಆಹಾರ ಧಾನ್ಯ ಇರುವುದನ್ನು ಗಮನಿಸಿದ ಅವರು ನೋಟಿಸ್ ಜಾರಿಗೊಳಿಸಿದರು.
ಎಫ್ ಎಸ್ ಎಸ್ ಎಐ ನೊಂದಣಿ ಇಲ್ಲದೇ ಇರುವುದು, ಆಹಾರ ಪದಾರ್ಥಗಳನ್ನು ಸರಿಯಾಗಿ ಶೇಖರಣೆ ಮಾಡದೇ ಇರುವುದು, ಅಡುಗೆ ತಯಾರಿಸುವವರ ಆರೋಗ್ಯ ತಪಾಸಣೆ ನಡೆಸದೇ ಇರುವುದು, ಸುರಕ್ಷಿತ ನೀರಿನ ಸರಬರಾಜು ಇರದೇ ಇರುವುದು, ಬೆಲ್ಲದ ಸ್ಯಾಂಪಲ್ ಮಾಡದೇ ಇರುವುದನ್ನು ಗಮನಿಸಿದ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.