ಜನ ಜೀವಾಳ ಜಾಲ ಬೆಳಗಾವಿ :ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರು ಸೋಮವಾರ ನಸುಕಿನಲ್ಲೇ ನಗರದಲ್ಲಿ ಸಂಚರಿಸಿ ಕರ್ತವ್ಯ ನಿರ್ವಹಿಸಿದ್ದಾರೆ.
ರವಿವಾರ ರಜಾದಿನ. ಹೀಗಾಗಿ ಸಫಾರಿ ಕರ್ಮಚಾರಿಗಳಿಗೆ ಸೋಮವಾರ ನಸುಕಿನಲ್ಲಿ ಹೆಚ್ಚಿನ ಕೆಲಸ ಇರುತ್ತದೆ. ಹೀಗಾಗಿ ಸ್ವತಃ ವೀಕ್ಷಿಸಲು ಪಾಲಿಕೆ ಆಯುಕ್ತರು ನಸುಕಿನಲ್ಲೇ ಎದ್ದು ಸೈಕಲ್ ನಲ್ಲೇ ಸಿಟಿ ರೌಂಡ್ ನಡೆಸಿದರು.
ಮಹಾನಗರ ಪಾಲಿಕೆ ಆಯುಕ್ತರು ವಾರ್ಡ್ ಗಳಿಗೆ ತೆರಳಿ ಕಸ ವಿಲೇವಾರಿ ಸಮರ್ಪಕವಾಗುತ್ತದೋ ಎಂದು ಪರಿಶೀಲನೆ ನಡೆಸಿದರು. ಸಫಾಯಿ ಕರ್ಮಚಾರಿಗಳ ಬಯೋಮೆಟ್ರಿಕ್ ಹಾಜರಾತಿಯನ್ನು ಇದೇ ಸಂದರ್ಭದಲ್ಲಿ ವೀಕ್ಷಣೆ ಮಾಡಿದ ಅವರು ಕಾರ್ಮಿಕರಿಗೆ ಚುರುಕು ಮುಟ್ಟಿಸಿದರು. ಕಸದ ವಾಹನಗಳು ಕೆಲ ವಾರ್ಡುಗಳಿಗೆ ತೆರಳುವುದು ವಿಳಂಬವಾಗಿತ್ತು. ಇದನ್ನು ಗಮನಿಸಿದ ಅವರು ತೀವ್ರ ತರಾಟೆಗೆ ತೆಗೆದುಕೊಂಡರು.
ಮಾತ್ರವಲ್ಲ ತಾವೇ ಸ್ವತಃ ವಾಹನಗಳಲ್ಲಿ ತೆರಳಿ ಎಲ್ಲೆಲ್ಲಿ ಕಸ ಬಿದ್ದಿದೆ ಎಂದು ಗಮನಿಸಿ ಅವುಗಳ ಪರಿಶೀಲನೆ ನಡೆಸಿ ಬೆಳಗಾವಿ ಸ್ವಚ್ಛ ಸುಂದರ ನಗರವಾಗಿ ರಾರಾಜಿಸಬೇಕು ಎಂದು ಸೂಚನೆ ನೀಡಿದರು.
ಬೆಳಗಾವಿ ಮಹಾನಗರ ಪಾಲಿಗೆ ಆಯುಕ್ತರು ನಡೆಸಿದ ಕಾರ್ಯಾಚರಣೆ ಪ್ರತಿಯೊಂದು ವಾರ್ಡ್ ಗಳಲ್ಲಿ ನಡೆಯುವಂತಾಗಬೇಕು. ಅಂದಾಗ ಸೋಮಾರಿ ಕಾರ್ಮಿಕರು ಎಚ್ಚೆತ್ತುಕೊಂಡು ಸ್ವಚ್ಛತೆ ನಡೆಸುತ್ತಾರೆ. ಈ ನಿಟ್ಟಿನಲ್ಲಿ ಆಯುಕ್ತ ಅಶೋಕ ದುಡಗುಂಟಿ ಕೈಗೊಳ್ಳುವ ಕಾರ್ಯಾಚರಣೆಗೆ ನಾಗರಿಕರು ವ್ಯಾಪಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಬೆಳಗಾವಿ ಆಯುಕ್ತ ಅಶೋಕ ದುಡಗುಂಟಿ ಅವರು ಇಂದು ನಸುಕಿನಲ್ಲಿ ನಡೆಸಿದ ಕಾರ್ಯಾಚರಣೆಯಿಂದ ಕಾರ್ಮಿಕರು ಎಚ್ಚೆತ್ತುಕೊಳ್ಳುವಂತಾಗಿದೆ. ಬಯೋ ಮೆಟ್ರಿಕ್ ಹಾಜರಾತಿಗೆ ಗೈರು ಹಾಜರಿ, ತಡವಾಗಿ ಕೆಲಸಕ್ಕೆ ಬರುವವರಿಗೆ ಕಠಿಣ ಸೂಚನೆ ರವಾನಿಸುವಲ್ಲಿ ಆಯುಕ್ತರು ಯಶಸ್ವಿಯಾದರು.