ಬೆಳಗಾವಿ :
ಮೂಡುಬಿದಿರೆಯ ಮಂಗಳೂರು ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಧ್ಯಾಪಕ ಕೆ.ಅಭಯ ಕುಮಾರ ಅವರಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಪಿ ಎಚ್ ಡಿ ಗೌರವ ನೀಡಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜೈನ ಮೈತ್ರಿಕೂಟದ ವತಿಯಿಂದ ಸನ್ಮಾನಿಸಲಾಯಿತು.
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವತಿಯಿಂದ ಇತ್ತೀಚಿಗೆ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ 23ನೇ ಘಟಿಕೋತ್ಸವದಲ್ಲಿ ಅಭಯ ಕುಮಾರ ಅವರು ಪಿ ಎಚ್ ಡಿ ಗೌರವ ಸ್ವೀಕರಿಸಿದರು.
ಅಭಯ ಕುಮಾರ ಅವರನ್ನು ಸನ್ಮಾನಿಸಿ ಮಾತನಾಡಿದ ಬೆಳಗಾವಿಯ ದಕ್ಷಿಣ ಕನ್ನಡ ಜೈನ ಮೈತ್ರಿಕೂಟದ ಸಂಸ್ಥಾಪಕ ಅಧ್ಯಕ್ಷ ಶಿರ್ಲಾಲು ಗುಣಪಾಲ ಹೆಗ್ಡೆ, ಸಂಶೋಧನಾ ನಿರತರಾಗಿ ಅಭಯ ಕುಮಾರ ಪಿಎಚ್ ಡಿ ಪದವಿ ಪಡೆದಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಮಾರ್ಗದರ್ಶನ ಮಾಡಬೇಕು. ಸಮಾಜಕ್ಕೆ ಉಪಯೋಗವಾಗುವ ರೀತಿಯಲ್ಲಿ ನಿಮ್ಮ ಅನುಭವವನ್ನು ಧಾರೆ ಎರೆಯಿರಿ. ಬರುವ ದಿನಗಳಲ್ಲಿ ಸಮಾಜಕ್ಕೆ ನಿಮ್ಮಿಂದ ಹೆಚ್ಚು ಅನುಕೂಲವಾಗಲಿ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅಭಯ ಕುಮಾರ, ಬೆಳಗಾವಿಯಲ್ಲಿ ನೀವೆಲ್ಲರೂ ಅತ್ಯಂತ ಆತ್ಮೀಯವಾಗಿ ಸನ್ಮಾನಿಸಿ ಹಾರೈಕೆಯ ಮಾತನ್ನು ಆಡಿದ್ದೀರಿ. ನೀವು ಹೇಳಿದ ಪ್ರೋತ್ಸಾಹಕ ಮಾತುಗಳನ್ನು ನೆನಪಿನಲ್ಲಿ ಇಟ್ಟುಕೊಂಡು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕನಾಗಿ ಕೆಲಸ ಮಾಡುವೆ. ಸಮಾಜಕ್ಕೆ ನನ್ನ ಕೈಲಾದ ಸೇವೆ ಮಾಡುತ್ತೇನೆ. ನನ್ನ ಸಾಧನೆಗೆ ತಂದೆ-ತಾಯಿ, ಕುಟುಂಬದವರು ಹಾಗೂ ಕಾಲೇಜಿನ ಸಹಕಾರವೂ ಕಾರಣ ಎಂದು ತಿಳಿಸಿದರು.
ದಕ್ಷಿಣ ಕನ್ನಡ ಜೈನ ಮೈತ್ರಿಕೂಟದ ಅಧ್ಯಕ್ಷ ಮಹಾವೀರ ಪೂವಣಿ ಅಧ್ಯಕ್ಷತೆ ವಹಿಸಿದ್ದರು.
ಅಜಿತಕುಮಾರ ಸ್ವಾಗತಿಸಿ, ವಂದಿಸಿದರು.