ಬೆಳಗಾವಿ :
ಕೆಎಲ್ಇ ಸಂಸ್ಥೆಯ ಲಿಂಗರಾಜ ಕಾಲೇಜಿನ ಎನ್ಸಿಸಿ ಘಟಕದ ಸೀನಿಯರ್ ಅಂಡರ್ ಆಫೀಸರ್ ಪ್ರೀತಿ ಚಂದ್ರಶೇಖರಯ್ಯ ಸವದಿ ಹಾಗೂ ಜ್ಯೂನಿಯರ್ ಅಂಡರ್ ಆಫೀಸರ್ ಗುರುನಾಥ ಲಕ್ಷ್ಮಣ ರಾಜೋಳಿ ಫ್ರೀ 32 ನೇ ಜಿವಿ ಮಾಳವಂಕರ್ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ಶಿಪ್ಗೆ ಆಯ್ಕೆಯಾಗಿದ್ದಾರೆ. 22 ರಿಂದ 31 ಅಗಸ್ಟ್ ವರೆಗೆ ಮಧ್ಯಪ್ರದೇಶದ ಮಾವ್ದಲ್ಲಿ ಶೂಟಿಂಗ್ ಚಾಂಪಿಯನ್ಶಿಫ್ ಜರುಗಲಿದೆ. ಕಳೆದ ಜುಲೈ ತಿಂಗಳಲ್ಲಿ ಕೇರಳದ ತಿರುವನಂತಪುರಂದಲ್ಲಿ ಜರುಗಿದ್ದ ರಾಷ್ಟ್ರಮಟ್ಟದ ಎನ್ಸಿಸಿ ಅಂತರ ನಿರ್ದೇಶನಾಲಯ(ಡಿಜಿ ಎನ್ಸಿಸಿ, ನವದೆಹಲಿ)ಆಯೋಜಿಸಿದ್ದ ಶೂಟಿಂಗ್ ಚಾಂಪಿಯನ್ಶಿಪ್ ದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಪ್ರೀತಿ ಸವದಿ ಡಿಜಿಎನ್ಸಿಸಿ ಶೂಟಿಂಗ್ದಲ್ಲಿ ರಾಷ್ಟ್ರಮಟ್ಟದಲ್ಲಿ ನಾಲ್ಕನೇ ಸ್ಥಾನವನ್ನು ಪಡೆದರೆ, ಗುರುನಾಥ ರಾಜೋಳಿ ಕೂಡ ಅಂತಿಮ ಶ್ರೇಯಾಂಕದಲ್ಲಿ ಅರ್ಹತೆಯ ಅಂಕಗಳನ್ನು ಪಡೆಯುವ ಮೂಲಕ ಫ್ರೀ 32 ನೇ ಜಿವಿ ಮಾಳವಂಕರ್ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ಶಿಪ್ ಗೆ ಆಯ್ಕೆಯಾಗಿದ್ದಾರೆ.
26 ನೇ ಕರ್ನಾಟಕ ಎನ್ಸಿಸಿ ಬಟಾಲಿಯನ್ ಎನ್ಸಿಸಿ ಕೆಡೆಟ್ ಆಗಿರುವ ಪ್ರೀತಿ ಸವದಿ ಹಾಗೂ ಗುರುನಾಥ ರಾಜೋಳಿ ಜಿವಿ ಮಾಳವಂಕರ್ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ಶಿಪ್ ಗೆ ಆಯ್ಕೆಯಾದ ಪ್ರಥಮ ಎನ್ಸಿಸಿ ಕೆಡೆಟ್ಗಳು ಎಂಬುದು ಹೆಮ್ಮೆಯ ಸಂಗತಿ.
ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಬೆಳಗಾವಿ ಗ್ರುಫ್ ಕಮಾಂಡರ್ ಕರ್ನಲ್ ಕೆ. ಶ್ರೀನಿವಾಸ್, 26 ಕರ್ನಾಟಕ ಎನ್ಸಿಸಿ ಬಟಾಲಿಯನ್ ಕಮಾಡಿಂಗ್ ಆಫೀಸರ್ ಕರ್ನಲ್ ಎಸ್. ದರ್ಶನ್, ಎಡಮ್ ಆಫೀಸರ್ ಶಂಕರ ಯಾದವ್, ಸುಬೇದಾರ್ ಮೇಜರ್ ನಿಲೇಶ್ ದೇಸಾಯಿ, ಕೆಎಲ್ಇ ಜಂಟಿ ಕಾರ್ಯದರ್ಶಿ ಡಾ.ಪ್ರಕಾಶ ಕಡಕೋಳ, ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಎಸ್.ಮೇಲಿನಮನಿ, ಕಾಲೇಜಿನ ಎನ್ಸಿಸಿ ಅಧಿಕಾರಿ ಕ್ಯಾಪ್ಟನ್ ಡಾ.ಮಹೇಶ ಗುರನಗೌಡರ ಹಾಗೂ ಸಿಬ್ಬಂದಿವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.