ಬೆಳಗಾವಿ :
ಇಲ್ಲಿನ ಕರ್ನಾಟಕ ಕಾನೂನು ಸಂಸ್ಥೆಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯ ಅಪರೂಪದ ಕಾರ್ಯಕ್ರಮಕ್ಕೆ ಅಣಿಯಾಗಿದೆ.
ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ ಚೇರಮನ್, ನ್ಯಾಯವಾದಿ
ಎಂ.ಆರ್.ಕುಲಕರ್ಣಿ,
ಐಎಂಇಆರ್ ಚೇರಮನ್ ಹಾಗೂ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ, ನ್ಯಾಯವಾದಿ
ಆರ್.ಎಸ್.ಮುತಾಲಿಕ, ಕರ್ನಾಟಕ ಕಾನೂನು ಸಂಸ್ಥೆಯ ಕಾರ್ಯದರ್ಶಿ, ಆಡಳಿತ ಮಂಡಳಿ ಸದಸ್ಯ, ನ್ಯಾಯವಾದಿ ಎಸ್.ವಿ.ಗಣಾಚಾರಿ ಅವರು ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಮಾಹಿತಿ ನೀಡಿದರು.
ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯ ಕರ್ನಾಟಕದ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ನಮ್ಮ ಕಾಲೇಜಿನಲ್ಲಿ ಓದಿದ ಐವರು ಗಣ್ಯ ಹಳೆಯ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವನ್ನು ಆಯೋಜಿಸುತ್ತಿದೆ. ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಸ್ಟೀಸ್ ಪ್ರಸನ್ನ ಬಿ.ವರಾಳೆ ಅವರು ಈ ಖ್ಯಾತ ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಿದ್ದಾರೆ. ಆಗಸ್ಟ್ 5 ರಂದು ಸಂಜೆ 4:30 ಗಂಟೆಗೆ ಕಾಲೇಜಿನ ಪ್ಲಾಟಿನಂ ಜುಬಿಲಿ ಬಿಲ್ಡಿಂಗ್ ನ ಕೆ.ಕೆ.ವೇಣುಗೋಪಾಲ್ ಆಡಿಟೋರಿಯಂನಲ್ಲಿ ಸನ್ಮಾನಿಸಲಿದ್ದಾರೆ.
ಕರ್ನಾಟಕ ಕಾನೂನು ಸಂಸ್ಥೆಯ ಅಧ್ಯಕ್ಷ ಹಾಗೂ ಹಿರಿಯ ನ್ಯಾಯವಾದಿ ಅನಂತ ಮಂಡಗಿ ಅವರು
ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಪ್ರಸನ್ನ ಬಿ.ವರಾಳೆ ಅವರನ್ನು ಗೌರವಿಸಲಿದ್ದಾರೆ.
ಪ್ರಸನ್ನ ಬಿ.ವರಾಳೆ ಅವರು ನ್ಯಾಯಮೂರ್ತಿ ಸಚಿನ್ ಶಂಕರ ಮಗದುಮ್, ನ್ಯಾಯಮೂರ್ತಿ ರವಿ ವೆಂಕಪ್ಪ ಹೊಸಮನಿ, ನ್ಯಾಯಮೂರ್ತಿ ಕೆ.ಎಸ್.ಹೇಮಲೇಖಾ,
ಜಸ್ಟೀಸ್ ಅನಿಲ್ ಭೀಮಸೇನ ಕತ್ತಿ, ಜಸ್ಟೀಸ್ ರಾಮಚಂದ್ರ ಡಿ. ಹುದ್ದಾರ ಅವರನ್ನು ಸನ್ಮಾನಿಸಲಿದ್ದಾರೆ. ಪ್ರಸನ್ನ ವರಾಳೆ ಅವರು ಸಮಾರಂಭವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಕಾನೂನು ಸಂಸ್ಥೆಯ ಅಧ್ಯಕ್ಷ ಅನಂತ ಮಂಡಗಿ ವಹಿಸಲಿದ್ದು, ಕರ್ನಾಟಕ ಕಾನೂನು ಸಂಸ್ಥೆಯ ಎಲ್ಲಾ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.
ಬೆಳಗಾವಿಯ ಕರ್ನಾಟಕ ಕಾನೂನು ಸಂಸ್ಥೆಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯ
ಭಾರತದ ಅತ್ಯಂತ ಹಳೆಯ ಕಾನೂನು ಕಾಲೇಜುಗಳಲ್ಲಿ ಒಂದಾಗಿದೆ. ದಕ್ಷಿಣ ಭಾರತದ ಕಾನೂನು ಶಿಕ್ಷಣ ನೀಡುವ ಪ್ರಮುಖ ಸಂಸ್ಥೆಯಾಗಿದೆ, ಗುಣಮಟ್ಟದ ಕಾನೂನು ಶಿಕ್ಷಣವನ್ನು ನೀಡುವ ತನ್ನ ಸಂಕಲ್ಪದ ಭಾಗವಾಗಿ 1939 ರಲ್ಲಿ ಕರ್ನಾಟಕ ಕಾನೂನು ಸಂಸ್ಥೆಯನ್ನು ಬೆಳಗಾವಿಯಲ್ಲಿ ಸ್ಥಾಪಿಸಲಾಯಿತು. ಕಾಲೇಜಿಗೆ ಉದಾರ ದಾನ ಧರ್ಮ ಮಾಡಿದ ವಂಟಮುರಿ ರಾಜಾ ಲಖಮಗೌಡ ಸರ್ದೇಸಾಯಿ ಅವರ ಹೆಸರಿಡಲಾಗಿದೆ ಎಂದು ಹೇಳಿದರು.
ಪ್ರಾರಂಭದಿಂದಲೂ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯ ಕಾನೂನು ಶಿಕ್ಷಣದ ಉದ್ದೇಶಕ್ಕಾಗಿ ಅಪಾರ ಸೇವೆಯನ್ನು ಮಾಡುತ್ತಿದೆ. ರಾಜಾ ಲಖಮಗೌಡ ಕಾನೂನು ಕಾಲೇಜು ತನ್ನ ಹೆಮ್ಮೆಯ ಹಳೆಯ ವಿದ್ಯಾರ್ಥಿಗಳಿಂದ ಹೆಸರುವಾಸಿಯಾಗಿದೆ. ಭಾರತದ ಇಬ್ಬರು ಮಾಜಿ ಮುಖ್ಯ ನ್ಯಾಯಮೂರ್ತಿಗಳಾದ ಗೌರವಾನ್ವಿತ ನ್ಯಾಯಮೂರ್ತಿ (ದಿವಂಗತ) ಇ.ಎಸ್. ವೆಂಕಟರಾಮಯ್ಯ ಮತ್ತು ಗೌರವಾನ್ವಿತ ನ್ಯಾಯಮೂರ್ತಿ ಡಾ. ಎಸ್. ರಾಜೇಂದ್ರ ಬಾಬು (ಮಾಜಿ ಅಧ್ಯಕ್ಷರು, ಎನ್ಎಚ್ಆರ್ಸಿ, ನವದೆಹಲಿ) ಅವರು ಹೆಮ್ಮೆಯ ಹಳೆಯ ವಿದ್ಯಾರ್ಥಿಗಳಾಗಿ ತಮ್ಮ ಸೇವೆಯನ್ನು ದೇಶಕ್ಕೆ ನೀಡಿದ್ದಾರೆ. ವಿವಿಧ ಹೈಕೋರ್ಟ್ಗಳ ಅನೇಕ ಹಾಲಿ ಮತ್ತು ಮಾಜಿ ನ್ಯಾಯಾಧೀಶರಿಗೆ ನೆಲೆಯಾಗಿದೆ. ಅವರಲ್ಲಿ
ಕರ್ನಾಟಕ ಮತ್ತು ಕೇರಳ ಹೈಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿ ವಿ.ಎಸ್. ಮಳಿಮಠ ಮತ್ತು ಎನ್ಎಚ್ಆರ್ಸಿ ಮಾಜಿ ಸದಸ್ಯ, ಕೇರಳ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್.ಆರ್.ಬನ್ನೂರಮಠ, ಪದ್ಮವಿಭೂಷಣ, ಭಾರತದ ಮಾಜಿ ಅಟಾರ್ನಿ ಜನರಲ್
ಕೆ.ಕೆ.ವೇಣುಗೋಪಾಲ್
, ಭಾರತದ ಸರ್ವೋಚ್ಚ ನ್ಯಾಯಾಲಯದ ಖ್ಯಾತ ಹಿರಿಯ ವಕೀಲರು ಮತ್ತು ಹೆಸರಾಂತ ಸಾಂವಿಧಾನಿಕ ಕಾನೂನು ತಜ್ಞರೂ ನಮ್ಮ ಹೆಮ್ಮೆಯ ಹಳೆಯ ವಿದ್ಯಾರ್ಥಿಗಳು ಎನ್ನುವುದು ನಮಗೆ ಹೆಮ್ಮೆಯ ಸಂಗತಿ ಎಂದು ಹೇಳಿದರು.
ಸಂಸದೀಯ ಕ್ಷೇತ್ರದಲ್ಲಿ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ಕೊಡುಗೆಯೂ ಅಷ್ಟೇ ಅಪಾರ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ, ಕೇಂದ್ರದ ಮಾಜಿ ಸಚಿವರಾದ ಬಿ.ಎನ್. ದಾತಾರ, ಬಿ. ಶಂಕರಾನಂದ ಮತ್ತು ಸರೋಜಿನಿ ಮಹಿಷಿ ನಮ್ಮ ಕಾಲೇಜಿನ ಹಳೇ ವಿದ್ಯಾರ್ಥಿಗಳು.
ರಾಷ್ಟ್ರಪ್ರಶಸ್ತಿ ವಿಜೇತ ನಟ ಚಾರು ಹಾಸನ್, ರಾಷ್ಟ್ರೀಯ ಕ್ರೀಡಾಪಟು ಅರ್ಜುನ್ ದೇವಯ್ಯ ಸೇರಿದಂತೆ ಹಲವರು ಕಾಲೇಜಿನ ಹೆಸರನ್ನು ದೇಶದ ಮೂಲೆ ಮೂಲೆಗೆ ಕೊಂಡೊಯ್ದಿದ್ದಾರೆ. ಈ ಶ್ರೀಮಂತ ಸಂಪ್ರದಾಯವನ್ನು ನಮ್ಮ ವಿದ್ಯಾರ್ಥಿಗಳು ಇತ್ತೀಚಿನ ಜಿಲ್ಲಾ ಮತ್ತು ಸಿವಿಲ್ ನ್ಯಾಯಾಧೀಶರ ಆಯ್ಕೆಯ ಸಮಯದಲ್ಲಿ ಅತ್ಯುತ್ತಮವಾಗಿ ನಿರ್ವಹಿಸುವ ಮೂಲಕ ಮುಂದುವರಿಸಿದ್ದಾರೆ. ಇತ್ತೀಚೆಗೆ ನಮ್ಮ ಐದು ಹಳೆಯ ವಿದ್ಯಾರ್ಥಿಗಳು ಕರ್ನಾಟಕ ಉಚ್ಚ ನ್ಯಾಯಾಲಯದ ಹಾಲಿ ಹೈಕೋರ್ಟ್ ನ್ಯಾಯಾಧೀಶರಾಗಿದ್ದಾರೆ.
ಕಾಲೇಜು ನಿರಂತರವಾಗಿ ವಿಶ್ವವಿದ್ಯಾನಿಲಯಕ್ಕೆ ಶ್ರೇಯಾಂಕಗಳನ್ನು ಗಳಿಸುತ್ತದೆ. ಯೂನಿವರ್ಸಿಟಿ ಬ್ಲೂಸ್ ಅನ್ನು ಪದೇ ಪದೇ ಪಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಪ್ರಾಚಾರ್ಯ ಡಾ.ಎ.ಎಚ್.ಹವಾಲ್ದಾರ್, ಮತ್ತು ಸಹಾಯಕ ಪ್ರಾಧ್ಯಾಪಕಿ ಸಮೀನಾ.ಎನ್ ಬೇಗ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Felicitation Function – 05th August 2023
Raja Lakhamgouda Law College, Belagavi, one of the oldest law colleges in India and a premier institution of legal education in South India, was established in 1939 by Karnatak Law Society, Belagavi, as a part of its solemn resolve to impart quality legal education. The College is named after Raja Lakhamgouda Sirdesai, its most benevolent mentor-donor and head of the erstwhile Princely State of Vantamuri.
Since its inception, Raja Lakhamgouda Law College is doing yeoman service to the cause of legal education. It has, indeed, played a crusader’s role. Its contribution to the Bar and the Bench is, in fact, second to none.
Raja Lakhamgouda Law College is known by its proud alumni. Two former Chief Justices of India, Hon’ble Justice (Late) Shri E. S. Venkataramiah and Hon’ble Justice Dr. S. Rajendra Babu (former Chairperson, NHRC, New Delhi) have, as proud alumni, taken the glory of their alma mater to great heights. Besides, it is also home to many sitting and former judges of various High Courts. Prominent among them are, Hon’ble Justice (Late) Shri V. S. Malimath, former Chief Justice of Karnataka and Kerala High Court and former member of NHRC; Hon’ble Justice Shri S. R. Bannurmath, former Chief Justice of Kerala High Court. Padma Vibhushan Shri K. K. Venugopal, the former Attorney-General of India, celebrated Senior Advocate of the Supreme Court of India and renowned Constitutional Law expert, is also our proud alumnus.
The contribution of Raja Lakhamgouda Law College in the field of parliamentarians is equally immense. Among others, (Late) B. N. Datar, (Late) Shri S. R. Bommai and (Late) Shri J. H. Patel, former Chief Ministers of Karnataka, are among the noteworthy alumni, who have made the college proud. Former Union Ministers, (Late) Shri B. Shankaranand and (Late) Smt. Sarojini Mahishi, two illustrious past students, have been instrumental in the success toasted by Raja Lakhamgouda Law College.
That apart, the national award-winning actor Shri Charu Haasan, national athlete Shri Arjun Devaiah and many others have taken the name of the college to every nook and corner of the country. This rich tradition is continued by our students by performing excellently during the recent selections for District and Civil Judges and recently our five alumni are sitting High Court Judges of the High court of Karnataka.
The College also persistently bags ranks to the University and generates University Blues time and again.
Karnatak Law Society’s, Raja Lakhamgouda Law College is organizing felicitation function for five of our eminent alumni who are judges of High Court of Karnataka. Hon’ble Mr. Justice Prasanna B. Varale, Chief Justice, High Court of Karnataka will felicitate these eminent alumni.
The function is scheduled on Saturday, 5th August 2023 at 4:30 p.m. at K. K. Venugopal Auditorium, Platinum Jubilee Building, Karnatak Law Society’s Campus, Tilakwadi, Belagavi.
Anant Mandgi, Senior Advocate and President, Karnatak Law Society, Belagavi will honour Hon’ble Mr. Justice Prasanna B. Varale, Chief Justice, High Court of Karnataka.
Hon’ble Mr. Justice Prasanna B. Varale, Chief Justice, High Court of Karnataka will felicitate Hon’ble Mr. Justice Sachin Shankar Magadum, Hon’ble Mr. Justice Ravi Venkappa Hosmani, Hon’ble Mrs. Justice K. S Hemalekha, Hon’ble Mr. Justice Anil Bheemsen Katti, Hon’ble Mr. Justice Ramachandra D. Huddar.
Hon’ble Mr. Justice Prasanna B. Varale, Chief Justice, High Court of Karnataka will address the function. Shri Anant Mandgi, President, Karnatak Law Society will preside over the function and all members of Karnatak Law Society will be present on the occasion.
The press meet was addressed by R.S Mutalik Chairman IMER and member R.L Law College, S.V Ganachari Secretary KLS and member R. L Law College, M.R Kulkarni Chairman Governing Council R.L law college, Principal Dr A. H. Hawaldar, and Asst. Professor Samina. N Baig.