ಬೆಳಗಾವಿ :
ಲೋಕಮಾನ್ಯ ಬಾಲಗಂಗಾಧರ ತಿಲಕ ಅವರು ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬ ಶ್ರೇಷ್ಠ ಹೋರಾಟಗಾರರು ಕ್ರಾಂತಿಕಾರಿ ವಿಚಾರ ಹೊಂದಿದವರು. ಸ್ವಾತ್ರಂತ್ರ್ಯ ಸಂಗ್ರಾಮದ ಅಮೂಲ್ಯ ರತ್ನವಾಗಿದ್ದರು. ಇವರಿಂದ ಅನೇಕ ಭಾರತೀಯರು ಪ್ರೇರಿತರಾಗಿ ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ದೇಶವನ್ನು ಸ್ವಾತಂತ್ರ್ಯಗೊಳಿಸಿದರು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬೆಳಗಾವಿ ವಿಭಾಗಿಯ ಕಾರ್ಯವಾಹಕ ರಾಮಚಂದ್ರ ಏಡಕೆ ಹೇಳಿದರು.
ಬೆಳಗಾವಿ ಶಿಕ್ಷಣ ಸಂಸ್ಥೆಯ ಶ್ರೀಮತಿ ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ತಿಲಕರ ಪುಣ್ಯತಿಥಿಯ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿದಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ವಿದ್ಯಾರ್ಥಿ ಜೀವನದಲ್ಲಿ ಪಠ್ಯಪುಸ್ತಕದ ವಿದ್ಯಾಭ್ಯಾಸದ ಜೊತೆಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಾನ್ ವ್ಯಕ್ತಿಗಳ ಬಗ್ಗೆ ಅಧ್ಯಯನ ಮಾಡಿ ಅವರ ಸಾಧನೆಯಿಂದ ಪ್ರೇರಿತರಾಗಿ ವಿವಿಧ ಕ್ಷೇತ್ರದಲ್ಲಿ ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬೇಕೆಂದು ಹೇಳಿದರು.
ತಿಲಕರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ತಿಲಕರ ಪುಣ್ಯತಿಥಿ ಅಂಗವಾಗಿ ಆಯೋಜಿಸಿದ ಭಾಷಣ ಸ್ವರ್ಧೆಯ ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಿ ಗೌರವಿಸಿದರು.
ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷ ಚಿಂತಾಮಣಿ ಗ್ರಾಮೋಪಾಧ್ಯಾಯ ಅಧ್ಯಕ್ಷತೆ ವಹಿಸಿದ್ದರು. ಲಕ್ಷ್ಮೀಬಾಯಿ ನಾರಾಯಣರಾವ್ ಸ್ಮರಣಾರ್ಥ ಸುಧಾಬಾಯಿ ಕಾಲಕುಂದ್ರಿ ಅವರು ಪುರಸ್ಕೃತ ವಿದ್ಯಾರ್ಥಿವೇತನವನ್ನು ವೈಭವಿ ಜೋಶಿ ಹಾಗೂ ಸ್ವಾತಿ ಶೇಟ್ ಇವರಿಗೆ ತಲಾ ರೂಪಾಯಿ ೪೧೨೫/-ಮೊತ್ತದ ಚೆಕ್ ನೀಡಿದರು. ಗೌರವ ಅತಿಥಿಗಳಾಗಿ ವಿಜೇಂದ್ರ ಗುಡಿ, ದಿಲೀಪ ಪಾಟೀಲ, ಆತ್ಮಲಿಂಗಬಾಗೇವಾಡಿ, ಸರಸ್ವತಿ ದೇಸಾಯಿ ಉಪಸ್ಥಿತರಿದ್ದರು. ಲಕ್ಷ್ಮೀ ಪರಮಾರ ಹಾಗೂ ಸೃಷ್ಟಿ ಸಂಕೇಶ್ವರಿ ತಿಲಕರ ಬಗ್ಗೆ ವಿಚಾರ ವ್ಯಕ್ತ ಪಡಿಸಿದರು.
ಮುಖ್ಯೋಪಾಧ್ಯಾಯ ಎಂ.ಕೆ. ಮಾದಾರ ಪ್ರಾಸ್ತಾವಿಕ ಮಾತನಾಡಿದರು. ಅದಿತಿ ಸುಬೇದಾರ ಸ್ವಾಗತಿಸಿದರು. ವೈಷ್ಣವಿ ಸುಪೆ ವಂದಿಸಿದರು. ಸ್ಮಿತಾ ಗರಗ ನಿರೂಪಿಸಿದರು. ಸುಲೋಚನಾ ಐವಳೆ ಇವರು ಕಾರ್ಯಕ್ರಮ ಆಯೋಜನೆ ಮಾಡಿದರು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.