ಬೆಳಗಾವಿ :
ಇಲ್ಲಿಯ ಕೆ.ಎಲ್.ಐ ಸಂಸ್ಥೆಯ ಗಿಲಗಂಚಿ ಅರಟಾಳ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ. ದಿನಾಂಕ : 31-07-2022 ರಂದು 2023-24 ನೇ ಶೈಕ್ಷಣಿಕ ಚಟುವಟಿಕೆ, ವಿವಿಧ ಸಾಂಸ್ಕೃತಿಕ ಸಂಘಗಳು ಹಾಗೂ ಎನ್ ಎಸ್ ಎಸ್ ಘಟಕದ ಉದ್ಘಾಟನಾ ಸಮಾರಂಭ ನಡೆಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಶಾಸ್ತ್ರೀಯ ಕನ್ನಡ ಭಾಷೆಯ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ. ಗಜಾನನ ನಾಯ್ಕ ಆಗಮಿಸಿದ್ದರು. ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ “ವಿದ್ಯಾರ್ಥಿ ಜೀವನದಲ್ಲಿ ದೊಡ್ಡ ಗುರಿಯೊಂದಿಗೆ ‘ಆಶಾವಾದಿಯಾಗಿ ಅವಕಾಶಗಳನ್ನು ಬಳಸಿಕೊಳ್ಳುತ್ತಾ ಹೋದರೆ ಮುಂದಿನ ಜೀವನದಲ್ಲಿ ಯಶಸ್ಸನ್ನು ಪಡೆಯಬಹುದೆಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಆರ್. ಎಸ್.ಪಾಟೀಲ ಮಾತನಾಡುತ್ತಾ ವಿದ್ಯಾರ್ಥಿಗಳು ಶಿಸ್ತು ಮತ್ತು ಸಂಯಮವನ್ನು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು. ವಂದನಾ ರಾಠೋಡ ಹಾಗೂ ಸಂಗಡಿಗರು
ಪ್ರಾರ್ಥಿಸಿದರು. ರೋಹಿಣಿ ಕೆಂಚ ರಾಹುತ ಹಾಗೂ ಸಂಗಡಿಗರು ಸ್ವಾಗತ ಗೀತೆ ಹಾಡಿದರು. ಕನ್ನಡ ಉಪನ್ಯಾಸಕ ಟಿ.ಪಿ.ಬಾಣಕರ ಹಾಗೂ 2023-24 ನೇ ಸಾಲಿನ ಕಾರ್ಯ ಚಟುವಟಿಕೆಗಳ ಸಂಕ್ಷಿಪ್ತ ಪಕ್ಷಿನೋಟವನ್ನು ಒಕ್ಕೂಟಗಳ ಅಧ್ಯಕ್ಷ ಎಸ್.ಎನ್.ಮಡಿವಾಳರ ಪ್ರಸ್ತುತ ಪಡಿಸಿದರು. ಕಾರ್ಯಕ್ರಮವನ್ನು ಶ್ರೀಮತಿ ಶಿಲ್ಪಾ ದೇವಲಾಪುರ ಹಾಗೂ ಶೃತಿ ನೀರಲಗಿ ಹಿರೇಮಠ ನಡೆಸಿಕೊಟ್ಟರು. ವಿನಾಯಕ ನೀರಲಕಟ್ಟಿ ವಂದಿಸಿದರು.