ಬೆಳಗಾವಿ :
ಬೆಳಗಾವಿಯ ಲಿಂಗರಾಜ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸೋಮವಾರ ಮಾದರಿ ಅಣಕು ಸಂಸತ್ತು ಚುನಾವಣೆಯನ್ನು ಪ್ರತ್ಯಕ್ಷವಾಗಿ ಮಾಡಿ ಚುನಾವಣೆ ಕುರಿತು ತಿಳಿವಳಿಕೆ ಮೂಡಿಸಲಾಯಿತು.
ಲಿಂಗರಾಜ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಎಚ್.ಎಸ್. ಮೇಲಿನಮನಿ ಮಾತನಾಡಿ, ಮತದಾನ ಮಾಡುವುದರಿಂದ ಪ್ರತಿಯೊಬ್ಬ ಪ್ರಜೆ ಪ್ರಜಾಪ್ರಭುತ್ವದಲ್ಲಿ ಪ್ರತ್ಯಕ್ಷವಾಗಿ ಭಾಗವಹಿಸಿದಂತಾಗುತ್ತದೆ. ವಿದ್ಯಾರ್ಥಿಗಳು ಬಾಲ್ಯದಲ್ಲಿ ಮತದಾನದ ಮಹತ್ವ ಅರಿತು ಭವಿಷ್ಯದಲ್ಲಿ ಅತ್ಯುತ್ತಮ ಅಭ್ಯರ್ಥಿಗೆ ಮತ ಹಾಕಿ ದೇಶದ ಅಭಿವೃದ್ಧಿಗೆ ಕಾರಣವಾಗಬೇಕು ಎಂದು ಸಲಹೆ ನೀಡಿದರು.
ಕನ್ನಡ ವಿಭಾಗದ ಮುಖ್ಯಸ್ಥ ಎಚ್.ಎಂ.ಚನ್ನಪ್ಪಗೋಳ ಮಾತನಾಡಿದರು. ಕನ್ನಡ ವಿಭಾಗದ ಪ್ರೊಫೆಸರ್ ಶ್ರೀಮತಿ ಬಿರಾದಾರ್, ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಹಾಗೂ ಮತದಾರರ ಸಾಕ್ಷರತಾ ಸಭೆಯ ಸಂಘಟಕ ಆರ್.ಡಿ.ಬಡಿಗೇರ ಉಪಸ್ಥಿತರಿದ್ದರು. ಸುಮಾರು 105 ವಿದ್ಯಾರ್ಥಿಗಳು ಮತ ಚಲಾಯಿಸಿ ಗಮನ ಸೆಳೆದರು.