ಬೆಳಗಾವಿ :
ವಿದ್ಯಾರ್ಥಿಗಳು ತಮ್ಮ ಕ್ರೀಡಾ ಕೌಶಲವನ್ನು ಅಭಿವೃದ್ಧಿಪಡಿಸಲು ವಿಶ್ವವಿದ್ಯಾಲಯ ನೀಡುವ ಸೌಲಭ್ಯಗಳನ್ನು ಬಳಸಿಕೊಳ್ಳುವಂತೆ
ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕ್ರೀಡಾ ನಿರ್ದೇಶಕ ಡಾ.ಜಗದೀಶ ಗಸ್ತಿ
ಸಲಹೆ ನೀಡಿದರು.
ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಮತ್ತು ಕೆಎಲ್ಇ ಸಂಸ್ಥೆಯ ಬಿ.ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯಗಳು ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡ ಅಂತರ ಕಾಲೇಜು ಟೇಬಲ್ ಟೆನಿಸ್ ಪಂದ್ಯಾವಳಿಯ (ಪುರುಷ ಮತ್ತು ಮಹಿಳೆ) ವಿಜೇತರಿಗೆ ಪ್ರಶಸ್ತಿ ವಿತರಿಸಿ ಮಾತನಾಡಿ,
ವಿದ್ಯಾರ್ಥಿಗಳು ವಿವಿಧ ಕ್ರೀಡಾಕೂಟಗಳಲ್ಲಿ ಉತ್ಸಾಹದಿಂದ ಭಾಗವಹಿಸಬೇಕು ಎಂದು ತಿಳಿಸಿದರು.
ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಖಾಲೀದ್ ಬಿ.ಖಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ,
ವಿಜೇತ ತಂಡಕ್ಕೆ ಶುಭ ಹಾರೈಸಿದರು.
ಕ್ರೀಡೆಗೆ ಸಂಬಂಧಿಸಿದಂತೆ ಕೆಎಸ್ಎಲ್ಯು ನಿಯಮಗಳ ಪ್ರಯೋಜನವನ್ನು ಪಡೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಬಿ.ಜಯಸಿಂಹ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕಿ ಹಾಗೂ ಕಾರ್ಯಕ್ರಮದ ಸಂಯೋಜಕಿ ರಿಚಾ ರಾವ್ ವಂದಿಸಿದರು. ಶ್ರೀಮತಿ ತೀರ್ಥ ಕಾರ್ಯಕ್ರಮದ ನಿರೂಪಿಸಿದರು.
ವಿಜೇತರು :
ಪುರುಷರ ಪಂದ್ಯಾವಳಿಯಲ್ಲಿ ಹುಬ್ಬಳ್ಳಿಯ ಕೆಎಸ್ಎಲ್ಯು ಕಾನೂನು ಶಾಲೆಯ ವಿದ್ಯಾರ್ಥಿಗಳು ಪ್ರಥಮ ಬಹುಮಾನ ಪಡೆದರೆ, ಕೆಎಲ್ಇ ಸೊಸೈಟಿಯ ಕಾನೂನು ಕಾಲೇಜು ಬೆಂಗಳೂರು ದ್ವಿತೀಯ ಮತ್ತು ಬೆಂಗಳೂರಿನ ಶೇಷಾದ್ರಿಪುರಂ ಕಾನೂನು ಕಾಲೇಜು ತೃತೀಯ ಸ್ಥಾನ ಪಡೆದರು.
ಮಹಿಳೆಯರ ವಿಭಾಗದಲ್ಲಿ ಬೆಂಗಳೂರಿನ ಕೆಎಲ್ಇ ಸಂಸ್ಥೆಯ ಕಾನೂನು ಕಾಲೇಜಿನ ವಿದ್ಯಾರ್ಥಿಗಳು, ಮಂಗಳೂರು ಎಸ್ಡಿಎಂ ಕಾನೂನು ಕಾಲೇಜು ದ್ವಿತೀಯ ಮತ್ತು ಬೆಂಗಳೂರು ರಾಮಯ್ಯ ಕಾನೂನು ಕಾಲೇಜು ತಂಡಗಳು ತೃತೀಯ ಬಹುಮಾನ ಗಳಿಸಿವೆ.
On 25th July 2023 the Karnataka State Law University, Hubballi has organized Inter-collegiate Table Tennis Tournament (Men & Women) with KLE Society’s B.V. Bellad Law College, Belagavi as a host.
Dr. Jagadish Gasti, Director of Sports Ranni Chennamma University, Belagavi was the Chief Guest at the Valedictory function, Dr. Khalid B. Khan, Director Physical Education, Karnataka State Law University, Hubballi was the Guest of Honour and the function was presided over by the Principal of B.V. Bellad Law College, Dr. B. Jayasimha.
Speaking at the occasion Shri Jagadish Gasti has encouraged the students to enthusiastically participate in various sports events. Further he advised the students to utilize the facilities given by the University for developing their sporting skills. Dr. Khalid khan wished the winning team and encouraged the students to take benefit of KSLUs rules regarding sports. Dr. B. Jayasimha gave his presidential remarks and Smt. Richa Rao, Physical Director, B.V. Bellad Law College, Belagavi and Coordinator of the event proposed vote of thanks. Ms. Teertha was the Anchor of the function.