ಬೆಳಗಾವಿ:ದೂಧಸಾಗರದಲ್ಲಿ ಭೂಕುಸಿತ ಉಂಟಾಗಿದ್ದರ ಪರಿಣಾಮ ರೇಲ್ವೆ ಪ್ರಯಾಣದಲ್ಲಿ ಅಡೆತಡೆ ಉಂಟಾದ ವರದಿಯಾಗಿದೆ. ಬೆಳಗಾವಿ ಸೇರಿದಂತೆ ವಿವಿಧ ಕಡೆಗೆ ಸುರಿಯುತ್ತಿರುವ ಧಾರಾಕಾರ ಮಳೆಗೆ ದೂಧಸಾಗರ ಜಲಪಾತದ ಬಳಿಯ ಸುರಂಗ ಮಾರ್ಗದಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತಗೊಂಡಿದ್ದು ಗೋವಾಕ್ಕೆ ತೆರಳುವ ರೈಲುಗಳನ್ನು ರದ್ದುಗೊಳಿಸಲಾಗಿದೆ.ದೂಧಸಾಗರ್ ಜಲಪಾತ ಬಳಿಯ ಮೂರನೇ ಸುರಂಗದಲ್ಲಿಯೇ ಈ ಗುಡ್ಡ ಕುಸಿತವಾಗಿದೆ. ರೈಲು ಹಳಿಯ ಮೇಲೆ ಮಣ್ಣು ಬಿದ್ದಿದೆ. ಇದರಿಂದ ಮಂಗಳವಾರ ರಾತ್ರಿ ಗೋವಾದಿಂದ ಬೆಳಗಾವಿ ಮೂಲಕ ದೆಹಲಿಗೆ ತೆರಳುತ್ತಿದ್ದ ನಿಜಾಮುದ್ದಿನ್ ಎಕ್ಸಪ್ರೆಸ್ ರೈಲು ಮರ್ಗ ಬದಲಾಯಿಸಿ ಮುಂಬೈ ಮೂಲಕ ಕಳುಹಿಸಲಾಯಿತು.ದೆಹಲಿಯಿಂದ ಮಿರಜ್ ಮೂಲಕ ರವಿವಾರ ರಾತ್ರಿ ಗೋವಾಕ್ಕೆ ತೆರಳುತ್ತಿದ್ದ ರೈಲು ಬೆಳಗಾವಿವರೆಗೆ ಮಾತ್ರ ಬಂದಿದ್ದು, ಅಲ್ಲಿಂದ ಪ್ರಯಾಣಿಕರನ್ನು ಬುಧವಾರ ಮುಂಜಾನೆ 16 ಬಸ್ ಗಳಲ್ಲಿ ಗೋವಾಕ್ಕೆ ಕಳುಹಿಸಲಾಯಿತು. ಕ್ಯಾಸಲ್ ರಾಕ್ ವರೆಗೆ ಮಾತ್ರ ರೈಲುಗಳು ತೆರಳುತ್ತಿವೆ.