ಬೆಳಗಾವಿ :
ಸರ್ಕಾರವು ಜುಲೈ-೨೦೨೩ ಮಾಹೆಯಿಂದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪಡಿತರ ಜೊತೆಗೆ ರಾಜ್ಯ ಸರ್ಕಾರ ಘೊಷಣೆ ಮಾಡಿದ ಗ್ಯಾರಂಟಿಗಳಲ್ಲಿ ಅನ್ನಭಾಗ್ಯ ಯೋಜನೆಯಡಿ ಪ್ರತಿ ಸದಸ್ಯರಿಗೆ ಹತು ್ತಕೆ.ಜಿ ಅಕ್ಕಿ ನೀಡುವ ಪ್ರಮುಖ ಯೋಜನೆಯಾಗಿದ್ದು ಅದರಲ್ಲಿ ಈಗಾಗಲೇ ೦೫ ಕೆ.ಜಿ ಅಕ್ಕಿಯನ್ನುಉಚಿತವಾಗಿ ನೀಡಲಾಗುತ್ತಿದ್ದು ಇನ್ನುಳಿದ ೦೫ ಕೆ.ಜಿ ಅಕ್ಕಿಯ ಬದಲಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆಯನ್ನು ಮುಖ್ಯಮಂತ್ರಿಗಳು ಚಾಲನೆ ನೀಡಿದ್ದಾರೆ.
ಜಿಲ್ಲೆಯ ೬೮,೬೩೭ ಅಂತ್ಯೋದಯ ಅನ್ನಯೋಜನೆ, ೧೦,೮೦,೮೮೦ ಪಿ.ಎಚ್.ಎಚ್ ಪಡಿತರ ಚೀಟಿಗಳಿದ್ದು ಅಂದಾಜು ೩೭,೭೨,೩೧೫ ಫಲಾನುಭವಿಗಳು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.
ಅಂತ್ಯೋದಯ ಪಡಿತರ ಚೀಟಿಯ ಫಲಾನುಭವಿಗಳಿಗೆ ೩೫ ಕೆ.ಜಿ ಅಕ್ಕಿ ಉಚಿತವಾಗಿ ವಿತರಿಸಲಾಗುತ್ತಿದ್ದು ಹೀಗಾಗಿ ಸದರಿ ಕಾರ್ಡಿನಲ್ಲಿ ೦೩ ಸದಸ್ಯರು ಇರುವ ಫಲಾನುಭವಿಗಳಿಗೆ ಡಿ.ಬಿ.ಟಿ ಸೌಲಭ್ಯ ಇರುವದಿಲ್ಲ, ೦೪ ಸದಸ್ಯರಿದ್ದರೆ ರೂ.೧೭೦/-, ೦೫ ಸದಸ್ಯರಿದ್ದರೆ ರೂ.೫೧೦/-, ೦೬ ಸದಸ್ಯರಿದ್ದರೆ ರೂ.೮೫೦/-, ೦೭ ಸದಸ್ಯರಿದ್ದಲ್ಲಿ ರೂ.೧೧೯೦/-ಹೀಗೆ ಸದಸ್ಯರ ಸಂಖ್ಯೆ ಆದರಿಸಿ ಲೆಕ್ಕಾಚಾರ ಮಾಡಿ ಫಲಾನುಭವಿಗಳ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಡಿ.ಬಿ.ಟಿ ಮಾಡಲಾಗುವುದು.
ಅದರಂತೆ ಪಿ.ಎಚ್.ಎಚ್.(ಬಿ.ಪಿ.ಎಲ್) ಅಡಿತರಚೀಟಿಯ ಪ್ರತಿ ಸದಸ್ಯರಿಗೆ ೦೫ ಕೆ,ಜಿ ಅಕ್ಕಿಯನ್ನು ಈಗಾಗಲೇ ಉಚಿತವಾಗಿ ನೀಡಲಾಗುತ್ತಿದ್ದು ಅನ್ನಭಾಗ್ಯಯೋಜನೆ ಹೆಚ್ಚುವರಿ ಅಕ್ಕಿ ಎದುರಾಗಿ ಪ್ರತಿ ಫಲಾನುಭವಿಗೆರೂ. ೧೭೦/-, ಇಬ್ಬರು ಸದಸ್ಯರಿದ್ದಲ್ಲಿ ರೂ.೩೪೦/- , ಮೂರು ಸದಸ್ಯರಿದ್ದಲ್ಲಿ ರೂ.೫೧೦/-, ೦೪ ಸದಸ್ಯರಿದ್ದಲ್ಲಿ ರೂ.೬೮೦/-, ೦೫ ಸದಸ್ಯರಿದ್ದಲಿ ್ಲರೂ .೮೫೦/-, ೦೬ ಸದಸ್ಯರಿದ್ದಲ್ಲಿ ರೂ.೧೦೨೦-, ೦೭ ಸದಸ್ಯರಿದ್ದಲ್ಲಿ ರೂ.೧೧೯೦/- ೦೮ ಸದಸ್ಯರಿದ್ದಲ್ಲಿ ರೂ.೧೩೬೦/- /-ಹೀಗೆ ಸದಸ್ಯರ ಸಂಖ್ಯೆ ಆಧರಿಸಿ ಲೆಕ್ಕಾಚಾರಮಾಡಿ ಫಲಾನುಭವಿಗಳ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಡಿ.ಬಿ.ಟಿ ಮಾಡಲಾಗುವುದು.
ನೇರ ನಗದು ವರ್ಗಾವಣೆಗೆ ಫಲಾನುಭವಿಗಳು ಕಡ್ಡಾಯವಾಗಿ ತಮ್ಮ ಬ್ಯಾಂಕ್ ಖಾತೆಗೆ ಆಧಾರ, ಮೊಬೈಲ್ ಸಂಖ್ಯೆಜೋಡಣೆಯಾಗಿರತಕ್ಕದ್ದು ಹಾಗೂ ಆ ಬ್ಯಾಂಕ್ಖಾತೆಯು ಸಕ್ರೀಯ ಬ್ಯಾಂಕ್ ಖಾತೆಯಾಗಿರಬೇಕು. ಫಲಾನುಭವಿಯು ಕಳೆದ ೦೩ ತಿಂಗಳಲ್ಲಿ ಒಂದು ಸಲ ಆದರೂ ನ್ಯಾಯಬೆಲೆ ಅಂಗಡಿಯಲ್ಲಿ ಬಯೋ ನೀಡಿ ಪಡಿತರ ಪಡೆದಿರಬೇಕು.
ಅರ್ಹ ಇರುವ ಜಿಲ್ಲೆಯ ಒಟ್ಟು ೮,೨೯,೦೦೧ ಫಲಾನುಭವಿಗಳಿಗೆ ನಿಯಮಾನುಸಾರ ರೂ. ೪೬,೫೪,೧೮,೫೨೦/-ಗಳನ್ನು ಡಿಬಿಟಿ ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಮೊತ್ತ ಜಮೆ ಮಾಡಲಾಗಿದ್ದು ಈ ಕುರಿತು ಫಲಾನುಭವಿಗಳ ಮಾಹಿತಿಗಾಗಿ ಅವರ ಮೊಬೈಲ್ಗಳಿಗೆ ಸಂದೇಶ (ಎಸ್.ಎಮ್.ಎಸ್) ರವಾನೆಯಾಗಿದ್ದು ಖಚಿತ ಪಡಿಸಿಕೊಳ್ಳಬಹುದಾಗಿರುತ್ತದೆ.
ಒಂದು ವೇಳೆ ಫಲಾನುಭವಿಗಳ ಮೊಬೈಲ್ ಸಂಖ್ಯೆ, ಆಧಾರ ಸಂಖ್ಯೆಯು ಬ್ಯಾಂಕ್ ಖಾತೆಗೆ ಜೋಡಣೆ ಇಲ್ಲದ ಪ್ರಕರಣಗಳು ತಕ್ಷಣವೇ ಸಂಬಂಧಿಸಿದ ಬ್ಯಾಂಕ್ಗೆ ಸಂಪರ್ಕಿಸಿ ಇ-ಕೆ.ವಾಯ್.ಸಿ ಅಥವಾ ಹೊಸ ಖಾತೆ ಒಪನ್ ಮಾಡಿಸಬಹುದು. ಇಂತಹ ಫಲಾನುಭವಿಗಳಿಗೆ ಮುಂಬರುವ ಮಾಹೆಗಳಲ್ಲಿ ನೇರ ನಗದು ಮೊತ್ತ ಜಮೆಯಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಇಲಾಖಾ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.