ಸವದತ್ತಿ :ರೈಟ್ಸ್ ಸಿ ಎಸ್ ಆರ್ ಲಿಮಿಟೆಡ್ ವತಿಯಿಂದ ಹಾಗೂ ಆಶ್ರಯ ಫೌಂಡೇಶನ್ ಬೆಳಗಾವಿ , ART ಕೇಂದ್ರ ತಾಲೂಕು ಸಾರ್ವಜನಿಕ ಆಸ್ಪತ್ರೆ ಸವದತ್ತಿ ಇವರ ಸಹಯೋಗದೊಂದಿಗೆ ವಿಶೇಷವಾಗಿ ಎಚ್ ಐ ವಿ ಸೋಂಕಿತ ವಿಧವೆಯರಿಗೆ ಸಂಘಟನಾತ್ಮಕ ಪರಿಹಾರಗಳ ಬಗ್ಗೆ ಹದಿಹರೆಯದ ಮಕ್ಕಳ ಆರೋಗ್ಯದ ಹಿತ ದೃಷ್ಟಿಯಿಂದ ಗುಂಪು ಸಭೆ ಹಾಗೂ ರೇಷನ್ ಕಿಟ್ ವಿತರಣಾ ಕಾರ್ಯಕ್ರಮ ಮತ್ತು ಕಾನೂನಾತ್ಮಕವಾಗಿ ಅರಿವು ಮೂಡಿಸಲು ವಕಾಲತ್ತು ಸಭೆಯನ್ನು ದಿನಾಂಕ:18/07/2023 ಸವದತ್ತಿ ಸರಕಾರಿ ಆಸ್ಪತ್ರೆಯಲ್ಲಿ ನಿಯೋಜಿಸಲಾಗಿತ್ತು.
ಉದ್ಘಾಟನೆಯನ್ನು ಡಾ. H M ಮಲ್ಲನಗೌಡರ ಮುಖ್ಯ ವೈದ್ಯಾಧಿಕಾರಿಗಳು, ಸರಕಾರಿ ಆಸ್ಪತ್ರೆ ಸವದತ್ತಿ ನೆರವೇರಿಸಿದರು.ನಾಗರತ್ನ ಎಸ್. ರಾಮಗೌಡ ಸಂಸ್ಥಾಪಕಿ, ಆಶ್ರಯ ಫೌಂಡೇಶನ್ ಬೆಳಗಾವಿ ಅಧ್ಯಕ್ಷತೆ ವಹಿಸಿದ್ದರು.
ಎಮ್.ಎನ್.ಮುತ್ತಿನಅಧ್ಯಕ್ಷರು, ನ್ಯಾಯವಾದಿಗಳ ಸಂಘ,ಸವದತ್ತಿ ಹಾಗೂಅತಿಥಿಗಳಾಗಿ ಡಾ. ಸಿದ್ಧಾರ್ಥ S.M .ಎ.ಆರ್.ಟಿ.ವೈದ್ಯಾಧಿಕಾರಿಗಳು, S.I .ಡೋಣಿ. STS ಸವದತ್ತಿ, ರೇಣುಕಾ ತೋಟಗಿ ಮತ್ತು ಸಾವಿತ್ರಿ ಶಿಬಾರಗಟ್ಟಿ
ನ್ಯಾಯವಾದಿಗಳು, ಸವದತ್ತಿ HIV ಭಾದಿತ ವಿಧವೆಯರು ಹಾಗೂ ಹದಿಹರೆಯ ಮಕ್ಕಳಿಗೆ ಶಿಕ್ಷಣ, ಮಾನಸಿಕ ಬೆಂಬಲ, ART ಚಿಕಿತ್ಸೆ ಮಹತ್ವ, HIV ಭಾದಿತರಿಗೆ ಇರುವ ಕಾನೂನಾತ್ಮಕ ರಕ್ಷಣೆ, ಕೌಟುಂಬಿಕ ಹಾಗೂ ಸಾಮಾಜಿಕ ಕಳಂಕ ತಾರತಮ್ಯ, ಸಂಘಟನಾತ್ಮಕ ಪರಿಹಾರಗಳ ಬಗ್ಗೆ ಹಾಗೂ ಇಂತಹ ತೊಡಕುಗಳಿಗೆ ಸಾಂಸ್ಥಿಕ ಇತ್ಯಾದಿ ಸೇವೆಗಳ ಅರಿವು ಮತ್ತು ಎಚ್ಐವಿ ಜನರಿಗೆ ಇರುವ ಕಾನೂನು ಸೇವೆಗಳ ಕುರಿತು ವಿವರವಾಗಿ ತಿಳಿಸಿ ಹೇಳಿದರು.ಆಶ್ರಯ ಪೌಂಡೇಶನ್, ಸಂಸ್ಥಾಪಕಿ ಶ್ರೀಮತಿ ನಾಗರತ್ನ ರಾಮಗೌಡ ಪಾಸಿಟಿವ್ ಪ್ರೆವೆನಶನ್ ಕುರಿತು ಮಾಹಿತಿ ನೀಡಿದರು. ಭಾಗವಹಿಸಿದ 49ಕ್ಕೂ ಹೆಚ್ಚು HIV ಭಾದಿತ ವಿಧವೆಯರು ಹಾಗೂ ಮಹಿಳೆಯರು ಮತ್ತು ಲೈಂಗಿಕ ಕಾರ್ಯಕರ್ತರಿಗೆ ಪೌಷ್ಟಿಕ ಆಹಾರ ಕಿಟ್ ಮತ್ತು ಪ್ರೋಟೀನ್ ಪೌಡರ್ ವಿತರಣೆ ಮಾಡಲಾಯಿತು.
ಕಾರ್ಯಕ್ರಮದ ಯಶಸ್ವಿಗೆ ಸವದತ್ತಿ ತಾಲೂಕು ಆಸ್ಪತ್ರೆ ಎ ಅರ್ ಟಿ ಕೇಂದ್ರದ ಆಪ್ತಸಮಾಲೋಚಕ ಇಸ್ಮೈಲ್ ಹಾಗೂ ಎ ಆರ್ ಟಿ ವಿಭಾಗದ ಎಲ್ಲಾ ಸಿಬ್ಬಂದಿಗಳು ಎಲ್ಲ ಸಿಬ್ಬಂದಿ ವರ್ಗದವರ ಸಹಾಯದಿಂದ ಈ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.