ಬೆಳಗಾವಿ :ಬೆಳಗಾವಿ ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿ ನಿರ್ಮಾಣವಾಗುತ್ತಿರುವ ನಗರ ಬಸ್ ನಿಲ್ದಾಣ ಕಾಮಗಾರಿಯನ್ನು ಸೆಪ್ಟೆಂಬರ್ ಒಳಗೆ ಪೂರ್ಣಗೊಳಿಸುವುದಾಗಿ ನಗರ ಮತ್ತು ನಗರ ಅಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಭೈರತಿ ಸುರೇಶ್ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಡಾ. ಸಾಬಣ್ಣ ತಳವಾರ ಅವರ ಪ್ರಶ್ನೆಗೆ ಉತ್ತರಿಸಿದ ಅವರು, 2018 ರಲ್ಲಿ ಯೋಜನೆ ಆರಂಭವಾಗಿತ್ತು. ಯೋಜನಾ ವೆಚ್ಚ29.20 ಕೋಟಿಗಳಾಗಿದೆ. ಬಸ್ ನಿಲ್ದಾಣ 2.07 ಎಕರೆ ವಿಸ್ತೀರ್ಣ ಹೊಂದಿದೆ. ಬಹುತೇಕ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಯೋಜನೆ ಸಂಬಂಧ ಭೂಮಿ ಹಸ್ತಾಂತರದಲ್ಲಿ ವಿಳಂಬ, ಕೋವಿಡ್ ಸಮಸ್ಯೆ, ಅತಿವೃಷ್ಟಿ ಮುಂತಾದ ಕಾರಣಗಳಿಂದ ಬಸ್ ನಿಲ್ದಾಣ ಕಾರ್ಯ ವಿಳಂಬವಾಗಿದೆ ಎಂದು ಉತ್ತರ ನೀಡಿದರು.