ಬೆಳಗಾವಿ :
ಅಪರಿಚಿತ ಯುವಕ (೩೫ ರಿಂದ ೪೦ ವರ್ಷ ವಯಸ್ಸು) ಜುಲೈ.೧೬ ೨೦೨೩ ರಂದು ಎಕ್ಸಪ್ರೆಸ್ ರೈಲಿನಲ್ಲಿ(ನಂ:೧೭೩೧೮) ಪ್ರಯಾಣ ಮಾಡಿಕೊಂಡು ಬರುವಾಗ ಆರೋಗ್ಯದಲ್ಲಿ ಏರುಪೇರಾಗಿದ್ದು, ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿ ಆಗದೇ ಅದೇ ದಿನ ಮೃತಪಟ್ಟಿದ್ದು ಬೆಳಗಾವಿ ರೈಲ್ವೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮೃತ ವ್ಯಕ್ತಿಯ ಚಹರೆ ಪಟ್ಟಿ:
ಎತ್ತರ ೫.೬ ಫೂಟ್, ಕೆಂಪು ಮೈ ಬಣ್ಣ, ಸದೃಡ ಮೈಕಟ್ಟು, ಉದ್ದು ಮುಖ, ನೀಟಾದ ಮೂಗೂ ಹಾಗೂ ಬಲಗೈ ಭುಜದ ಹತ್ತಿರ ಮರಾಠಿಯಲ್ಲಿ ‘’ಆಯಿ’’ ಎಂಬ ಹಚ್ಚೆ ಗುರುತು ಎಡಗೈ ಮೇಲ್ ‘’ಒ’’ ಅಂತಾ ಹಚ್ಚೆ ಗುರುತು ಇರುತ್ತದೆ. ಬಲಗೈಯಲ್ಲಿ ಕೆಂಪು ಮತ್ತು ಕಪ್ಪು ಇದ್ದು, ತಿಳಿ ಹಸಿರು ಬಣ್ಣದ ಹಾಪ್ ಟೀಶರ್ಟ ಬೂದು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.
ಈ ರೀತಿ ಚಹರೆಯುಳ್ಳ ಅಪರಿಚಿತ ವ್ಯಕ್ತಿಯ ವಾರಸುದಾರರು ಪತ್ತೆಯಾಗಿರುವುದಿಲ್ಲ ಮೃತನ ರಕ್ತ ಸಂಬಂಧಿಗಳು ಯಾರಾದರೂ ಪತ್ತೆಯಾದರೆ ಬೆಳಗಾವಿ ರೈಲ್ವೆ ಪೋಲಿಸ್ ಠಾಣೆ ದೂರವಾಣಿ ಸಂಖ್ಯೆ: (೦೮೩೧) ೨೪೦೫೨೭೩ ಪಿ.ಎಸ್.ಐ ಮೊಬೈಲ ನಂ:೯೪೮೦೮೦೨೧೨೭ ಅಥವಾ ರೈಲ್ವೆ ಪೊಲೀಸ್ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ. (೦೮೦) ೨೨೮೭೧೨೯೧ ಗೆ ಸಂಪರ್ಕಿಸಬಹುದು ಎಂದು ತನಿಖಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.