ಬೆಳಗಾವಿ :
ರಾಜ್ಯ ಸರ್ಕಾರದ ಗೃಹಲಕ್ಷ್ಮೀ, ಮತ್ತು ಗೃಹ ಜ್ಯೋತಿ ಯೋಜನೆಗಳ ಹೆಸರಲ್ಲಿ ನಕಲಿ ಆಪ್ ಗಳ ಮೂಲಕ ಸೈಬರ್ ಕಳ್ಳರು ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದಾರೆ. ಈ ಯೋಜನೆಗಳ ಬಗ್ಗೆ ಪ್ಲೇ ಸ್ಟೋರ್ ಮತ್ತು ಇತರ ಸಾರ್ವಜನಿಕ ಜಾಲತಾಣಗಳಲ್ಲಿ ನಕಲಿ ಆಪ್ ಗಳು ಕಾರ್ಯ ನಿರ್ವಹಿಸುತ್ತವೆ.
ಅವುಗಳನ್ನು ಬಳಸಿದರೆ ಜನರ ವೈಯಕ್ತಿಕ ಮಾಹಿತಿ ಕಲೆ ಹಾಕಿ ಅದನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲಿ ಇಂಥ ಆಪ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಬಾರದು. ಯಾವುದೇ ಅನಧಿಕೃತ ಮೆಸೇಜ್ ಹಾಗೂ ವಾಟ್ಸಪ್ ಮೂಲಕ ಬರುವ ಲಿಂಕ್ ಗಳನ್ನು ಬಳಸಬಾರದು.
ಈ ಯೋಜನೆಗಳ ಬಗ್ಗೆ ಕರೆ ಮಾಡಿ ನೀವು ಈ ಯೋಜನೆಗೆ ಆಯ್ಕೆಯಾಗಿದ್ದೀರಿ, ನಿಮ್ಮ ವೈಯಕ್ತಿಕ ವಿವರ ಕೇಳಿದರೆ ಹಾಗೂ ಆಧಾರ್ ಪ್ಯಾನ್ ಕಾರ್ಡ್ ಮಾಹಿತಿ ನೀಡಲು ಹೇಳಿದರೆ ಎಚ್ಚರಿಕೆ ವಹಿಸಬೇಕು.
ಈ ಯೋಜನೆಗಳಿಗೆ ಸಂಬಂಧಿಸಿದ ಆ್ಯಪ್ ನ್ನು ಸರಕಾರ ಇದುವರೆಗೆ ಬಿಡುಗಡೆ ಮಾಡಿಲ್ಲ. ಈ ಯೋಜನೆಗಳನ್ನು ಸೇವಾ ಸಿಂಧು ಪೋರ್ಟಲ್ ನಲ್ಲಿ ನೋಂದಣಿ ಮಾಡಬೇಕು.