ಬೆಳಗಾವಿ :
ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯನ್ನು ಬೆಳಗಾವಿ ಜಿಲ್ಲೆಯಲ್ಲಿ ಜುಲೈನಿಂದ ಅನುಷ್ಠಾನಗೊಳಿಸಬೇಕಾಗಿರುವುದರಿಂದ ಜಿಲ್ಲೆಯಲ್ಲಿ ಒಟ್ಟು ಅಂತ್ಯೋದಯ ೬೮,೬೩೬ ಪಡಿತರ ಚೀಟಿಗಳು ಹಾಗೂ ಅದರ ಫಲಾನುಭವಿಗಳು ೨,೭,೧೦೭೮ ಅದೇ ರೀತಿ ಆದ್ಯತಾ (ಬಿಪಿಎಲ್) ಪಡಿತರ ಚೀಟಿಗಳು ಒಟ್ಟು ೧೦,೮೦,೮೮೦ ಅದರ ಫಲಾನುಭವಿಗಳು ೩೫,೦೧,೨೩೭ ಇದ್ದು, ಅಂತೂ ಒಟ್ಟು ಪಡಿತರ ಚೀಟಿ ಸಂಖ್ಯೆ ೧೧೪೯೫೧೬ ಅಂತೂ ಒಟ್ಟು ಫಲಾನುಭವಿಗಳ ಸಂಖ್ಯೆ ೩೭೭೨೩೧೫ ಇರುತ್ತದೆ.
ಫಲಾನುಭವಿಗಳ ಕುಟುಂಬ ಮುಖ್ಯಸ್ಥರು ಕಡ್ಡಾಯವಾಗಿ ರಾಷ್ಟ್ರೀಕೃತ ಬ್ಯಾಂಕ್ ಅಥವಾ ಪೋಸ್ಟ್ ಆಫೀಸಿನಲ್ಲಿ ಉಳಿತಾಯ ಖಾತೆ ಹೊಂದಿರತಕ್ಕದ್ದು. ಸದರಿ ಉಳಿತಾಯ ಖಾತೆಯು ಚಾಲ್ತಿಯಲ್ಲಿದ್ದು, ಇ-ಕೆವೈಸಿ ಪೂರ್ಣಗೊಂಡಿರಬೇಕು.
ಒಂದು ವೇಳೆ ಬ್ಯಾಂಕ್ನಲ್ಲಿ ಇ-ಕೆವೈಸಿ ಮಾಡಿಸಿಕೊಳ್ಳದೇ ಬಾಕಿ ಉಳಿಸಿಕೊಂಡಲ್ಲಿ ಅಂತಹ ಫಲಾನುಭವಿಗಳು ತುರ್ತಾಗಿ ಬ್ಯಾಂಕ್ಗಳಿಗೆ ತೆರಳಿ ಇ-ಕೆವೈಸಿ ಮಾಡಿಕೊಳ್ಳತಕ್ಕದ್ದು, ಮತ್ತು ಇಲ್ಲಿಯವರೆಗೆ ಬ್ಯಾಂಕ್ ಖಾತೆ ಹೊಂದದೇ ಇರುವ ಫಲಾನುಭವಿಗಳು ಕೂಡಲೇ ಹೊಸ ಬ್ಯಾಂಕ್ ಖಾತೆಯನ್ನು ತೆರೆದು ಅದಕ್ಕೆ ಆಧಾರ ಕಾರ್ಡ್ ಹಾಗೂ ಪೋನ್ ನಂಬರ ಲಿಂಕ್ ಮಾಡಿಕೊಳ್ಳಬೇಕು.
ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿ ಸಂಚಾಲಕರಿಗೆ ಮಾಹಿತಿಯನ್ನು ಒದಗಿಸಬೇಕು. ಪ್ರತಿ ಫಲಾನುಭವಿಗೆ ರೂ. ೧೭೦/- ರಂತೆ ಜುಲೈ ೨೦೨೩ ತಿಂಗಳ ಕೊನೆಗೆ ಹಣ ಸಂದಾಯ ಮಾಡಲಾಗುತ್ತಿದೆ.
ಈ ಕುರಿತು ಯಾವುದೇ ಸಮಸ್ಯೆ ಇದ್ದಲ್ಲಿ ವೆಬ್ಸೈಟ್ ಮೂಲಕ ನೇರ ನಗದು ಪಾವತಿಯಾದ ಕುರಿತು ಪರಿಶೀಲಿಸಬಹುದಾಗಿದೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತಾಲ್ಲೂಕು ಕಾರ್ಯಾಲಯದ ಆಹಾರ ಶಾಖೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.