ದೆಹಲಿ :
ಭಾರತ 29 ರಾಜ್ಯಗಳನ್ನು ಹೊಂದಿದೆ. ರಾಜ್ಯ ದೇಶೀಯ ಉತ್ಪನ್ನಗಳ ಆಧಾರದ ಮೇಲೆ 2022-23 ರ ಶ್ರೀಮಂತ ರಾಜ್ಯಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ.
ಜಿ ಎಸ್ ಡಿ ಪಿ ಅನ್ವಯ ಯಾವ ರಾಜ್ಯ ಯಾವ ಸ್ಥಾನದಲ್ಲಿದೆ ಎಂಬ ಮಾಹಿತಿ ಇಲ್ಲಿದೆ.
ಎಲ್ಲ ರೀತಿಯಿಂದಲೂ ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶವಾಗಿದೆ. ಇಲ್ಲಿನ ಕೆಲವು ರಾಜ್ಯಗಳು ಶ್ರೀಮಂತ ವಾಗಿದ್ದರೆ ಕೆಲವು ಬಡ ರಾಜ್ಯಗಳ ಪಟ್ಟಿದೆ ಸೇರುತ್ತವೆ.
ಮಹಾರಾಷ್ಟ್ರ ಭಾರತದ ಅತೀ ಶ್ರೀಮಂತ ರಾಜ್ಯ : 400 ಬಿಲಿಯನ್ ಡಾಲರ್ ಜಿ ಎಸ್ ಡಿ ಪಿ ಹೊಂದಿದ ಮಹಾರಾಷ್ಟ್ರ ಭಾರತದ ಅತೀ ಶ್ರೀಮಂತ ರಾಜ್ಯವಾಗಿ ಅಗ್ರಸ್ಥಾನ ಪಡೆದಿದೆ. ಮಹಾರಾಷ್ಟ್ರದ ರಾಜಧಾನಿ ಮುಂಬೈ ಅನ್ನು ದೇಶದ ಆರ್ಥಿಕ ರಾಜಧಾನಿ ಎನ್ನಲಾಗುತ್ತದೆ. ದೇಶದ ಮೂರನೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಜ್ಯ ಮಹಾರಾಷ್ಟ್ರವಾಗಿದ್ದು, ಪ್ರತಿಶತ 45 ರಷ್ಟು ಜನರು ನಗರಗಳಲ್ಲಿ ವಾಸಿಸುತ್ತಾರೆ.
ತಮಿಳುನಾಡು : ಭಾರತದ ಶ್ರೀಮಂತ ರಾಜ್ಯದ ಪಟ್ಟಿಯಲ್ಲಿ ಎರಡನೇ ಸ್ಥಾನ ತಮಿಳುನಾಡಿಗೆ ಸೇರಿದೆ. ಇದರ ಜಿಎಸ್ ಡಿಪಿ 265.49 ಬಿಲಿಯನ್ ಡಾಲರ್ ಆಗಿದೆ. ಈ ರಾಜ್ಯದ ಪ್ರತಿಶತ 50ರಷ್ಟು ಜನಸಂಖ್ಯೆ ನಗರಗಳಲ್ಲಿ ವಾಸವಾಗಿದ್ದಾರೆ. ದೇಶದ ಜನಸಂಖ್ಯೆಯ ಪ್ರತಿಶತ 9.6ರಷ್ಟು ಮಂದಿ ತಮಿಳುನಾಡಿನಲ್ಲಿ ನೆಲೆಸಿದ್ದಾರೆ.
ಗುಜರಾತ್ : 259.25 ಬಿಲಿಯನ್ ಡಾಲರ್ ಜಿಎಸ್ ಡಿಪಿ ಯೊಂದಿಗೆ ಗುಜರಾತ್ ಮೂರನೇ ಸ್ಥಾನದಲ್ಲಿದೆ. ತಂಬಾಕು, ಹತ್ತಿ ಬಟ್ಟೆ ಮತ್ತು ಬಾದಾಮಿ ಗುಜರಾತಿನ ಪ್ರಮುಖ ಉತ್ಪಾದಕವಾಗಿದೆ. ಭಾರತದಲ್ಲಿ ತಯಾರಾಗುವ ಒಟ್ಟೂ ಔಷಧಗಳ ಪೈಕಿ ಮೂರನೇ ಒಂದು ಭಾಗ ಗುಜರಾತಿನಲ್ಲಿ ತಯಾರಾಗುತ್ತದೆ.
4ನೇ ಅತಿ ಶ್ರೀಮಂತ ರಾಜ್ಯ ಕರ್ನಾಟಕ : ಭಾರತದ ಶ್ರೀಮಂತ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕಕ್ಕೆ ನಾಲ್ಕನೇ ಸ್ಥಾನ ದೊರಕಿದೆ. ಕರ್ನಾಟಕ 247.38 ಬಿಲಿಯನ್ ಅಮೆರಿಕ ಡಾಲರ್ ಜಿಎಸ್ ಡಿಪಿ ಹೊಂದಿದೆ.
ಉತ್ತರ ಪ್ರದೇಶ : 234.96 ಬಿಲಿಯನ್ ಅಮೆರಿಕ ಡಾಲರ್ ಜಿಎಸ್ ಡಿಪಿ ಯೊಂದಿಗೆ ಉತ್ತರ ಪ್ರದೇಶ ಐದನೇ ಸ್ಥಾನದಲ್ಲಿದೆ. ಉತ್ತರ ಪ್ರದೇಶದ ನೊಯ್ಡಾ, ಗಾಜಿಯಾಬಾದ್ ಮುಂತಾದ ನಗರಗಳು ವೇಗವಾಗಿ ಅಭಿವೃದ್ಧಿ ಹೊಂದಿವೆ. ಅಷ್ಟೇ ಅಲ್ಲದೇ ಅನೇಕ ಕಂಪನಿಗಳು ಕೂಡ ಉತ್ತರ ಪ್ರದೇಶದಲ್ಲಿ ತಮ್ಮ ಶಾಖೆಯನ್ನು ತೆರೆದಿವೆ.
ಪಶ್ಚಿಮ ಬಂಗಾಳ : ಪಶ್ಚಿಮ ಬಂಗಾಳ 206.64 ಬಿಲಿಯನ್ ಅಮೆರಿಕ ಡಾಲರ್ ಜಿಎಎಸ್ ಡಿಪಿ ಯೊಂದಿಗೆ ಶ್ರೀಮಂತ ರಾಜ್ಯಗಳ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಇಲ್ಲಿನ ಆರ್ಥಿಕತೆಯ ಪ್ರಮುಖ ಭಾಗ ಕೃಷಿ ಮತ್ತು ಮಧ್ಯಮ ಕೈಗಾರಿಕೆಯಾಗಿದೆ.
ರಾಜಸ್ಥಾನ : ರಾಜಸ್ಥಾನದ ಜಿಎಸ್ ಡಿಪಿ 161.37 ಬಿಲಿಯನ್ ಅಮೆರಿಕ ಡಾಲರ್ ಆಗಿದೆ. ಖನಿಜ ಸಮೃದ್ಧ ರಾಜಸ್ಥಾನವು ಭಾರತದ ಏಳನೇ ಶ್ರೀಮಂತ ರಾಜ್ಯವಾಗಿದೆ. ಇಲ್ಲಿನ ಆರ್ಥಿಕತೆಯು ಕೃಷಿ, ಗಣಿಗಾರಿಕೆ ಮತ್ತು ಪ್ರವಾಸೋದ್ಯಮವನ್ನು ಆಧರಿಸಿದೆ. ಇಲ್ಲಿ ಚಿನ್ನ, ಬೆಳ್ಳಿ, ಸುಣ್ಣದ ಕಲ್ಲಿ, ಅಮೃತ ಶಿಲೆ, ರಾಕ್ ಫಾಸ್ಫೇಟ್, ತಾಮ್ರ ಮತ್ತು ಲಿಗ್ನೈಟ್ ನಿಕ್ಷೇಪಗಳನ್ನು ಹೊಂದಿದೆ. ಇದು ಭಾರತದಲ್ಲಿ ಎರಡನೇ ಅತಿ ದೊಡ್ಡ ಸಿಮೆಂಟ್ ಉತ್ಪಾದಿಸುವ ರಾಜ್ಯವಾಗಿದೆ.
ತೆಲಂಗಾಣ : ತೆಲಂಗಾಣದ ಜಿಎಸ್ ಡಿಪಿ 157.35 ಯ ಮೂಲಕ ಎಂಟನೇ ಅತಿ ದೊಡ್ಡ ರಾಜ್ಯವಾಗಿದೆ. ಕೃಷ್ಣಾ ಮತ್ತು ಗೋದಾವರಿ ನದಿ ಹರಿಯುವ ಕಾರಣ ಇಲ್ಲಿ ನೀರಾವರಿಯ ಸೌಲಭ್ಯ ಉತ್ತಮವಾಗಿದೆ. ತೇಲಂಗಾಣದಲ್ಲಿ ಈಗ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನಕ್ಕೆ ವಿಶೇಷ ಗಮನ ನೀಡಲಾಗುತ್ತಿದೆ. ತೇಲಂಗಾಣ ಭಾರತದ ಅಗ್ರ ಐಟಿ ರಫ್ತು ರಾಜ್ಯಗಳಲ್ಲಿ ಒಂದಾಗಿದೆ.