ಮುರಗೋಡ:
ಸ್ಥಳೀಯ ರಂಗಾರಿ ಗಲ್ಲಿ ನಿವಾಸಿ ಮಾಜಿ ಜಿ.ಪಂ. ಅಧ್ಯಕ್ಷ ಫಕೀರಪ್ಪ ದೇಮಪ್ಪ ಗೊರಾಬಾಳ (82) ಸೋಮವಾರ ನಿಧನರಾದರು. ಮೃತರಿಗೆ ಇಬ್ಬರು ಪುತ್ರಿಯರು, ಓರ್ವ ಪುತ್ರ, ಮೊಮ್ಮಕ್ಕಳು ಅಪಾರ ಬಂಧು ಬಳಗ ಇದ್ದಾರೆ. ಮೃತರು ಗ್ರಾಮ ಲೆಕ್ಕಾಧಿಕಾರಿಯಾಗಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ನಿರ್ದೇಶಕರಾಗಿ ದಕ್ಷ ಕಾರ್ಯ ನಿರ್ವಹಿಸಿ ಜನ ಮನ್ನಣೆ ಗಳಿಸಿ ಗಮನ ಸೆಳೆದಿದ್ದರು. ಮೃತರ ಅಗಲಿಕೆಗೆ ಇಲ್ಲಿನ ಶ್ರೀ ಮಹಾಂತ ದುರದುಂಡೀಶ್ವರ ಮಠದ ಪೀಠಾಧಿಪತಿ ಶ್ರೀ ನೀಲಕಂಠ ಸ್ವಾಮೀಜಿ, ಶ್ರೀಕ್ಷೇತ್ರ ಕೆಂಗೇರಿ ಮಠದ ಶ್ರೀ ದಿವಾಕರ ದಿಕ್ಷೀತ್ ಸ್ವಾಮೀಜಿ, ಶಾಸಕ ಮಹಾಂತೇಶ ಕೌಜಲಗಿ, ಗ್ರಾ.ಪಂ. ಅಧ್ಯಕ್ಷ ಸಂಗಪ್ಪ ಬೆಳಗಾವಿ, ಉದ್ಯಮಿ ಪ್ರಶಾಂತ ಪಟ್ಟಣಶೆಟ್ಟಿ, ಗ್ರಾ.ಪಂ. ಸದಸ್ಯ ಸಂತೊಷ
ಶೆಟ್ಟರ, ಯುವ ಮುಖಂಡ ಪ್ರಕಾಶ ಹಟ್ಟಿಹೊಳಿ ಇನ್ನಿತರ
ಗಣ್ಯರು ಸಂತಾಪ ಸೂಚಿಸಿದ್ದಾರೆ.