ಬೆಳಗಾವಿ :
ಉತ್ತರ ಭಾರತದಲ್ಲಿ ಉಂಟಾಗಿರುವ ಜಲಪ್ರವಾಹದಿಂದಾಗಿ ಬೆಳಗಾವಿಯ 35 ಶಿವ ಭಕ್ತರು ಅಮರನಾಥ ಯಾತ್ರೆ ಮುಗಿಸಿ ವಾಪಸ್ಸಾಗುವ ವೇಳೆ ಶ್ರೀನಗರ ಮತ್ತು ಜಮ್ಮು- ಕಾಶ್ಮೀರ ರಾಷ್ಟ್ರೀಯ ಹೆದ್ದಾರಿಯಲ್ಲಿನ ರಸ್ತೆಯು ಕುಸಿದು ಬಿದ್ದಿದ್ದರ ಪರಿಣಾಮ ಅನಂತನಾಗ ಬಳಿ ಸಿಲುಕಿದ್ದಾರೆ.
ಅದೃಷ್ಟವಶಾತ್ ಅವರೆಲ್ಲರೂ ಸುರಕ್ಷಿತವಾಗಿದ್ದು, ಮೂರು ದಿನಗಳ ಕಾಲ ಭಾರತೀಯ ಸೇನೆಯ ಬಿ.ಎಸ್.ಎಫ್. ಬೆಸ್ ಕ್ಯಾಂಪ್ ನಲ್ಲಿ ರಕ್ಷಣೆಯನ್ನು ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.
ಬೆಳಗಾವಿ ಉತ್ತರ ಮತಕ್ಷೇತ್ರದ ಮಾಜಿ ಶಾಸಕ ಅನಿಲ ಬೆನಕೆರವರು ಯಾತ್ರಿಗಳಿಗೆ ದೂರವಾಣಿ ಕರೆ ಮಾಡಿ ಯೋಗಕ್ಷೇಮವನ್ನು ವಿಚಾರಿಸಿದ್ದಾರೆ.
ಅಮರನಾಥ ಯಾತ್ರಿಯ ಮಾರ್ಗದ ಸೇತುವೆ ಕುಸಿದು ಬಿದ್ದಿದ್ದು, ಅಪಾರ ಸ್ಥಳಗಳಲ್ಲಿ ಹಾನಿಯಾಗಿರುವುದಾಗಿ ತಿಳಿಸಿರುವ ಯಾತ್ರಿಗಳು ಬೆಳಗಾವಿ 25 ಪುರುಷರು ಮತ್ತು 10 ಮಹಿಳೆಯರು ಇರುವುದಾಗಿ ತಿಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಬೆಳಗಾವಿ ಉತ್ತರ ಕ್ಷೇತ್ರದ ಮಾಜಿ ಶಾಸಕ ಅನಿಲ ಬೆನಕೆ ಅವರು ಅಮರನಾಥ ಯಾತ್ರಿಗಳಿಗೆ ಖುದ್ದಾಗಿ ದೂರವಾಣಿ ಮೂಲಕ ಸಂಪರ್ಕಿಸಿ ಅವರ ಯೋಗ ಕ್ಷೇಮವನ್ನು ವಿಚಾರಿಸಿದ್ದಾರೆ ಹಾಗೂ ಆರ್ಥಿಕ ಸಹಾಯವನ್ನು ಮಾಡುವುದಾಗಿ ತಿಳಿಸಿದ್ದು, ಯಾವುದೇ ತೊಂದರೆಗಳಿದ್ದರೆ ಸಂಪರ್ಕಿಸುವಂತೆ ಮತ್ತು ಸುರಕ್ಷಿತವಾಗಿ ಮರಳುವಂತೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅಮರನಾಥ ಯಾತ್ರಿಗಳು ಬಿ.ಎಸ್.ಎಫ್. ಸೈನಿಕರು ಮೂರು ದಿನಗಳ ಕಾಲ ಉಟೋಪಚಾರ ಮಾಡಿ ಆಶ್ರಯ ನೀಡಿದ್ದು ನಾವು ಇಲ್ಲಿ ಸುರಕ್ಷತವಾಗಿರುವುದಾಗಿ ತಿಳಿಸಿದ್ದು, ಭಾರತೀಯ ಸೈನ್ಯಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ ಅದರಂತೆಯೇ ಮಾಜಿ ಶಾಸಕ ಅನಿಲ ಬೆನಕೆ ರವರು ದೂರವಾಣಿ ಕರೆ ಮಾಡಿ ನಮ್ಮ ಯೋಗಕ್ಷೇಮವನ್ನು ವಿಚಾರಿಸಿರುವುದು ಸಂತೋಷವಾಗಿದ್ದು, ಅವರಿಗೂ ಬೆಳಗಾವಿ ಅಮರನಾಥ ಯಾತ್ರಿಗಳು ಧನ್ಯವಾದಗಳನ್ನು ಅರ್ಪಿಸಿರುವ ಅವರು ಇಲ್ಲಿನ ಆಡಳಿತ ಯಾವಾಗ ಮರಳುವಂತೆ ತಿಳಿಸುತ್ತಾರೆ. ಅಂದು ನಾವು ಮರಳಿ ಬೆಳಗಾವಿಗೆ ಬರುವುದಾಗಿ ಯಾತ್ರಿಗಳಾದ ಸೋಮನಾಥ ಹಲಗೇಕರ, ಸಂತೋಷ ದಿವಟೆ, ಋತುರಾಜ ಬೀಡಿಕರ, ಪರಶುರಾಮ ಬರಡೆ, ನಿತೀನ ಆನಂದಾಚೆ, ವಿನಾಯಕ ಪಾಟೀಲ, ನಂದು ಗುರವ, ಆದೇಶ ಪಾಟೀಲ, ರೇಣುಕಾ ಬಿಡೀಕರ, ಶ್ವೇತಾ ಹಲಗೇಕರ, ಶ್ರದ್ದಾ ಬಡಮಂಜಿ ಹಾಗೂ ಇತರ ಯಾತ್ರಿಗಳು ತಿಳಿಸಿದ್ದಾರೆ.