ಬೆಳಗಾವಿ :
ಹಿರೇಕೋಡಿಯ ಜೈನಮುನಿ ಕಾಮ ಕುಮಾರ ನಂದಿ ಮಹಾರಾಜರ ಕ್ರೂರ ಹತ್ಯೆ ಖಂಡಿಸಿ ಜುಲೈ 10 ರಂದು ಚಿಕ್ಕೋಡಿಯಲ್ಲಿ ಜೈನ ಸಮುದಾಯದವರು ಮೌನ ಮೆರವಣಿಗೆ ನಡೆಸಲಿದ್ದಾರೆ ಎಂದು ಜೈನ ಸಮಾಜದ ಮುಖಂಡ ಡಾ.ಎನ್.ಎ.ಮಗದುಮ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಯಾವುದೇ ಸರಕಾರ ಇರಲಿ. ಮುನಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಯಾವುದೇ ಪಕ್ಷದ ಸರಕಾರ ಇರಲಿ ಮುನಿಗಳಿಗೆ ರಕ್ಷಣೆ ಸಿಗಬೇಕು. ನಮ್ಮ ಧರ್ಮ ಎಂದು ಅಷ್ಟೇ ಅಲ್ಲ ಯಾವುದೇ ಧರ್ಮ ಇರಲಿ ಗುರುಗಳು ಅಂದರೆ ಎಲ್ಲರಿಗೂ ಅಷ್ಟೇ. ಕ್ರೂರ ಹತ್ಯೆ ಖಂಡಿಸಲು ನಾವೆಲ್ಲರೂ ಜುಲೈ 10ರಂದು ಚಿಕ್ಕೋಡಿಯಲ್ಲಿ ಸೇರಲಿದ್ದೇವೆ. 10 ಸಾವಿರಕ್ಕೂ ಅಧಿಕ ಜನ ಮೌನ ಮೆರವಣಿಗೆ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಿದ್ದೇವೆ ಎಂದು ಎಚ್ಚರಿಕೆ ರವಾನಿಸಿದರು.