ಬೆಳಗಾವಿ :
ಚಿಕ್ಕೋಡಿಯ ಜೈನಮುನಿ ಶ್ರೀ ಕಾಮಕುಮಾರನಂದಿ ಮಹಾರಾಜರ ಬರ್ಬರ ಹತ್ಯೆಗೆ ಡಿಸಿಎಂ ಡಿ. ಕೆ.ಶಿವಕುಮಾರ್ ಅವರು ಆಘಾತ ವ್ಯಕ್ತಪಡಿಸಿದ್ದಾರೆ.
ಅಹಿಂಸೆ ಪರಮ ಧರ್ಮ ಎಂದು ಭಾವಿಸಿದ್ದ ಮುನಿಗಳ ಹತ್ಯೆಗೆ ಅವರು ತೀವ್ರ ನೋವು ವ್ಯಕ್ತಪಡಿಸಿದ್ದಾರೆ. ಸಂತಾಪ ಸೂಚಿಸಿದ್ದಾರೆ.
ತಮ್ಮ ಸರಳ, ಸಜ್ಜನಿಕೆ ನಡೆ ನುಡಿಯಿಂದ ಅಪಾರ ಭಕ್ತರನ್ನು ಹೊಂದಿದ್ದ ಕಾಮಕುಮಾರನಂದಿ ಶ್ರೀಗಳ ಬರ್ಬರ ಅಂತ್ಯ ಆಘಾತ ತಂದಿದೆ. ಶ್ರೀಗಳ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಅವರ ಅನುಯಾಯಿಗಳು, ಭಕ್ತ ವೃಂದಕ್ಕೆ ಭಗವಂತ ನೀಡಲಿ ಎಂದು ಶಿವಕುಮಾರ್ ಅವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.