ಬೆಳಗಾವಿ :
ಚಿಕ್ಕೋಡಿ ತಾಲೂಕು ಹಿರೇಕೋಡಿ ಜೈನಮಠದ ಜೈನ ಮುನಿಗಳಾದ ಶ್ರೀ ಕಾಮಕುಮಾರ ನಂದಿ ಮಹಾರಾಜರ ಭೀಕರ ಕೊಲೆಗೆ ಸಂಬಂಧಿಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಕೊಲೆಯ ಪ್ರಮುಖ ಸೂತ್ರಧಾರಿ ಮುನಿಗಳ ಪ್ರೀತಿ ಸಂಪಾದಿಸಿದ್ದ ನಾರಾಯಣ ಮಾಳೆ ಎಂಬಾತ ಕೊಲೆ ಮಾಡಿದ್ದ ಎಂದು ತಿಳಿದುಬಂದಿದೆ. ಅವನಿಗೆ ಆಪ್ತನಾಗಿರುವ ಹಸನ್ ದಲಾಯತ್ ಎಂಬಾತ ಕೊಲೆಗೆ ಸಹಕರಿಸಿದವನು. ನಾರಾಯಣ ಆಗಾಗ ಮುನಿಗಳ ಬಳಿ ಬಂದು ವಿಶ್ವಾಸ ಗಳಿಸಿದ್ದ ತನ್ನ ಕಷ್ಟ ಹೇಳಿ ಹಣ ಪಡೆದಿದ್ದ. ಮುನಿಗಳು ಹಣ ಕೇಳಿದಾಗ ಕೊಲೆ ಮಾಡಲಾಗಿದೆ ಎಂದು ಸದ್ಯ ಮಾಹಿತಿ ಲಭಿಸಿದೆ.
ಹಸನ್ ಈ ಕೊಲೆಗೆ ಸಹಾಯ ಮಾಡಿರುವ ಬಗ್ಗೆ ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ.
ಮುನಿಗಳು ನಾಪತ್ತೆಯಾದ ಮೇಲೆ ಪೊಲೀಸರಿಗೆ ಆರಂಭದಲ್ಲಿ ನಾರಾಯಣ ಮೇಲೆ ಅನುಮಾನ ವ್ಯಕ್ತವಾಗಿತ್ತು. ಅವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹಸನ್ ಜತೆ ಸೇರಿ ಕೊಲೆ ಮಾಡಿರುವ ಬಗ್ಗೆ ಗೊತ್ತಾಗಿದೆ. ನಾರಾಯಣ ಹಾಗೂ ಹಸನ್ ಮುನಿಗಳಿಗೆ ವಿದ್ಯುತ್ ಶಾಕ್ ನೀಡಿ ಕೊಲೆ ಮಾಡಿರುವ ಬಗ್ಗೆ ಊಹಾಪೋಹ ಹರಡಿದೆ.
ಆದರೂ ಪೊಲೀಸರು ಕೊನೆಗೆ ನಿಖರ ಕಾರಣಗಳು ಏನಿರಬಹುದು ಎಂಬ ಬಗ್ಗೆ ಎಲ್ಲಾ ಕೋನದಿಂದಲೂ ತನಿಖೆ ನಡೆಸುತ್ತಿದ್ದಾರೆ.