ದೆಹಲಿ :
ಲಿಂಗ-ತಟಸ್ಥ ಪದಗಳನ್ನು ಬಳಸದ ಸಂವಿಧಾನದಲ್ಲಿನ ಎಲ್ಲಾ ನಿಬಂಧನೆಗಳನ್ನು ರದ್ದುಗೊಳಿಸಲು ನಿರ್ದೇಶನಗಳನ್ನು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಅವರನ್ನೊಳಗೊಂಡ ಪೀಠವು ಕಾನೂನು ವಿದ್ಯಾರ್ಥಿಯಾಗಿರುವ ಹರ್ಷ ಗುಪ್ತಾ ಎಂಬ ಅರ್ಜಿದಾರರಿಗೆ ಪಿಐಎಲ್ಗಳನ್ನು ಸಲ್ಲಿಸುವ ಬದಲು ಅಧ್ಯಯನದತ್ತ ಗಮನ ಹರಿಸುವಂತೆ ಸಲಹೆ ನೀಡಿತು.
“ಅಂತಹ ಅರ್ಜಿಗಳನ್ನು ಸಲ್ಲಿಸುವ ಬದಲು ನೀವು ಕಾನೂನು ಶಾಲೆಗಳಲ್ಲಿ ಏಕೆ ಅಧ್ಯಯನ ಮಾಡಬಾರದು? ನಾವು ವೆಚ್ಚವನ್ನು ವಿಧಿಸಲು ಪ್ರಾರಂಭಿಸಬೇಕು. ನಾವು ಸಂವಿಧಾನದಲ್ಲಿನ ನಿಬಂಧನೆಗಳನ್ನು ತೆಗೆದು ಹಾಕಬೇಕೆಂದು ನೀವು ಬಯಸುತ್ತೀರಾ? ಕಾನೂನು ಶಾಲೆಯಲ್ಲಿ ಅಧ್ಯಯನ ಮಾಡುವ ಬದಲು ವಿನಾಕಾರಣ ಇಂತಹ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಅಗತ್ಯ ನಿಮಗೆ ಇದೆ ಎಂದು ಪ್ರಶ್ನಿಸಿದರು.
ಮಹಿಳೆ
ಸಹ ಸಂವಿಧಾನಿಕವಾಗಿ ಅಧ್ಯಕ್ಷ ಸ್ಥಾನಕ್ಕೆ ಏರಬಹುದು. ಆಗ ಲಿಂಗ ಆಧರಿಸಿ ಅಧ್ಯಕ್ಷ ಸ್ಥಾನವನ್ನು ಸಂಬೋಧಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿತು.