ಮುರಗೋಡ :
ಜಗತ್ತಿನಲ್ಲಿ ಗುರು-ಶಿಷ್ಯರ ಸಂಬಂಧ ಪವಿತ್ರವಾದುದು,
ಅಜ್ಞಾನದ ಅಂಧಕಾರ ಹೋಗಲಾಡಿಸಿ ಜ್ಞಾನದ ಬೆಳಕನ್ನು ಕೊಡುವವನೇ ಗುರು. ಗುರುವಿನ ಬಗ್ಗೆ ಅರಿತು ಶ್ರದ್ಧಾ-
ಭಕ್ತಿಯೊಂದಿಗೆ ಮುನ್ನಡೆದಲ್ಲಿ ಜೀವನ ಸಾರ್ಥಕವಾಗುತ್ತದೆ
ಎಂದು ಮುರಗೋಡ ಶ್ರೀ ಮಹಾಂತ ದುರದುಂಡೀಶ್ವರ
ಮಠದ ಪೀಠಾಧಿಕಾರಿ ಶ್ರೀ ನೀಲಕಂಠ ಸ್ವಾಮೀಜಿ ಹೇಳಿದರು.
ಸ್ಥಳೀಯ ಮಹಾಂತ ಸೌಧದ ಆವರಣದಲ್ಲಿ ಗುರುಪೂರ್ಣಿಮೆ
ಉತ್ಸವ ನಿಮಿತ್ತ ಮಹಾಂತೇಶ್ವರ ಮಠದ ಸಂಸ್ಕೃತ ಪಾಠಶಾಲಾ
ವಿದ್ಯಾರ್ಥಿಗಳು ಹಾಗೂ ಎಸ್ಎಂಸಿಪಿಯು ಕಾಲೇಜು ಶಿಕ್ಷಕ ವೃಂದದ
ವತಿಯಿಂದ ಸೋಮವಾರ ಏರ್ಪಡಿಸಿದ್ದ ಗುರುವಂದನೆ ಗುರುಪಾದ ಪೂಜೆ, ಸನ್ಮಾನ ಹಾಗೂ ನಾನಾ ಸಾಂಸ್ಕೃತಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಸನ್ಮಾನ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು.
ಮನುಷ್ಯನಿಗೆ ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು. ಇದು ನಾಗರಿಕ ಜಗತ್ತಿನ ಪ್ರಸಿದ್ಧ ಗಾದೆ. ಎಂದರು.
ಮುನವಳ್ಳಿ ಮುರುಘರಾಜೇಂದ್ರ ಶ್ರೀಗಳು ಮಾತನಾಡಿ, ದೇವ-ದೇವತೆಯರಿಗೂ ಗುರು ಇದ್ದಾನೆ ಎಂಬುದು ಪುರಾಣಗಳಿಂದತಿಳಿಯುತ್ತದೆ. ನಾವೆಲ್ಲ ಗುರುವಿಗೆ ಋಣಿಯಾಗಿರೋಣ ಎಂದರು.
ಪ್ರಾಚಾರ್ಯ ರಮೇಶ ಭಜಂತ್ರಿ, ಎಂ.ವಿ. ಉಪ್ಪಿನ, ರಮೇಶ ಅಂಗಡಿ, ನೀಲಕಂಠ ತಲ್ಲೂರ, ಚಿದಂಬರ ತೋರಗಲ್, ನಿರ್ಮಲಾ ಗೌಡತಿ, ದೀಪಾ ಪಡೆಣ್ಣವರ ಮಾತನಾಡಿದರು.
ಬೈಲಹೊಂಗಲ ಪ್ರಭುನೀಲಕಂಠ ಶ್ರೀಗಳು, ಅಡವೀಶ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಎಸ್.ಟಿ.ಪಟ್ಟಣಶೆಟ್ಟಿ,ಸಂತೋಷ ಹಿರೇಮಠ ನೇತೃತ್ವ ವಹಿಸಿದ್ದರು.
ಅಶೋಕ ಶೆಟ್ಟರ, ವಿ.ಬಿ.ದೇಸಾಯಿ, ಶಿವನಗೌಡಪಾಟೀಲ, ವಿಜಯಸಾಣಿಕೊಪ್ಪ, ಸುರೇಶಬಾಬು ಕಡ್ಲಾಸ್ಕರ್, ಎಸ್.ಎಸ್. ಸೋನಕಟ್ಟಿ,
ಕಲಾ ಶಿಕ್ಷಕ ಮಹಾಂತೇಶ ಕಾರಗಿ, ಎಂ. ಆರ್.ಮುತಾಲಿಕದೇಸಾಯಿ,
ಈರಣ್ಣ ಚಿಕ್ಕಮಠ, ವಿ.ಐ.ಭದ್ರಶೆಟ್ಟಿ,ಸಿ.ವಿ.ನಾಯ್ಕರ,ಎಂ.ಡಿ.ತರ್ಲಗಟ್ಟಿ, ದೀಪಕ ಹಳದಿ, ಪ್ರಶಾಂತ ರಗಟಿ, ಸಂಸ್ಕೃತ
ಪಾಠಶಾಲಾ ವಿದ್ಯಾರ್ಥಿಗಳು, ನಾನಾ ವಿಭಾಗದ ಶಿಕ್ಷಕರು ಇತರರು ಇದ್ದರು. ಆರ್.ಎಂ. ಅಂಗಡಿ ಸ್ವಾಗತಿಸಿದರು. ಡಿ.ಎಂ. ಪಡೆಣ್ಣವರ ನಿರೂಪಿಸಿದರು. ಎನ್.ಎಸ್. ತಲ್ಲೂರ ವಂದಿಸಿದರು.
ಗುರುಪೂರ್ಣಿಮೆ ನಿಮಿತ್ತ ಮಕ್ಕಳಿಂದ ಕೋಲಾಟ ನೃತ್ಯ,
ಭಾವಗೀತೆ, ನಾಟಕ ಸೇರಿದಂತೆ ನಾನಾ ಸಾಂಸ್ಕೃತಿಕ ಕಾರ್ಯಕ್ರಮ
ಜರುಗಿತು.